ಸನ್ಮಾರ್ಗ ವಾರ್ತೆ
✍️ ಅರಫಾ ಮಂಚಿ
ಭಾರತ ಇಂದು ತೀವ್ರ ಬಲಪಂಥೀಯರು ಸಕ್ರಿಯವಾಗಿರುವ ದೇಶಗಳಲ್ಲೇ ತೀರ ಅಪಾಯಕರ ಸ್ಥಿತಿಯಲ್ಲಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಸರಿಯೋ ತಪ್ಪೋ.
ನೀವು ಇಲ್ಲಿ ಇದಕ್ಕೆ ಸಂಬಂಧಿಸಿದ ಇತ್ತೀಚೆಗಿನ ಒಂದು ಉದಾಹರಣೆಯನ್ನು ಎತ್ತಿಕೊಳ್ಳಿ. ಅದೇನೆಂದರೆ ಕ್ಯಾಲಿಫೋರ್ನಿಯ ಯುನಿವರ್ಸಿಟಿಯ ಡಾ. ಖಾಲಿದ್ ಅಬೂ ಫಾದಿ ಹೇಳುವುದೇನೆಂದರೆ, ಗಾಝದಲ್ಲಿ ಅತ್ಯಂತ ಕ್ರೂರವಾಗಿ ಮಹಿಳೆಯರು, ಮಕ್ಕಳನ್ನು ಕೊಲ್ಲುತ್ತಿರುವುದೇ ಭಾರತದಿಂದ ಬಂದಿರುವ ಒಂದು ತಂಡವೆಂದು. ಈಗ ಬ್ರಿಕ್ಸ್ ನಲ್ಲಿ ಫೆಲೆಸ್ತೀನ್ ಇದೆ. ರಷ್ಯ ಇದೆ, ಚೀನ ಇದೆ, ಇರಾನ್ ಇದೆ. ಟರ್ಕಿ ಇದೆ. ಉತ್ತರ ಕೊರಿಯ ಸಹಿತ 50ಕ್ಕಿಂತ ಅಧಿಕ ದೇಶಗಳಿವೆ. ಹಾಗಿದ್ದರೆ ಭಾರತದಿಂದ ಫೆಲೆಸ್ತೀನಿಯರ ಕಗ್ಗೊಲೆಗೆ ತಂಡವನ್ನು ಕಳುಹಿಸಿ ಕೊಟ್ಟಿದ್ದು ಯಾರು, ಯಾಕೆ? ಇಸ್ರೇಲ್ನ ಕ್ರೌರ್ಯಕ್ಕೆ ಇಲ್ಲಿ ಸಂಭ್ರಮಿಸುವುದು ನೋಡುವಾಗ ಡಾ. ಫಾದಿಯವರ ಮಾತುಗಳು ಕೇವಲ ಆರೋಪ ಅಲ್ಲ ಅಂತ ನಿಮಗೂ ಅನಿಸಬಹುದು.
ದನದ ಹೆಸರಿನಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ, ಭೂಮಿ ಜಿಹಾದ್ನ ಹೆಸರಿನಲ್ಲಿ ಆಕ್ರಮಣ ಹಲ್ಲೆ ದಾಳಿಗಳನ್ನು ಮಾಡುತ್ತಿರುವವರೇ ಅಲ್ಲಿಯೂ ಫೆಲೆಸ್ತೀನಿಯರು ಮುಸ್ಲಿಮರು ಎಂಬ ಕಾರಣಕ್ಕೆ ಕೊಲ್ಲುತ್ತಿರಬಹುದು. ಆದುದರಿಂದ ಬ್ರಿಕ್ಸ್ ನಲ್ಲಿ ಭಾರತ ಇದ್ದರೂ ಭಾರತದಲ್ಲಿ ಹುಟ್ಟು ಹಾಕಿ ಕಟ್ಟಿಕೊಡುತ್ತಿರುವ ಮನೋಭಾವ ಮತ್ತು ಅದಕ್ಕೆ ತಯಾರಿ ತುಂಬ ಭೀಕರವಾದುದು ಮತ್ತು ಅದು ಫೆಲೆಸ್ತೀನಿನಲ್ಲಿ ಕ್ರಿಯಾರೂಪಕ್ಕೆ ತರಲಾಗುತ್ತಿದೆ. ಈ ತಂಡ ನೆತನ್ಯಾಹುರ ಮೊಸಾದ್ನಿಂದ ತರಬೇತಿ ಪಡೆದುಕೊಂಡಿದೆಯಾ? ಪೆಗಾಸಸ್ ಕ್ರಾಂತಿಯ ಈ ದಿನಗಳಲ್ಲಿ ಈ ಪ್ರಶ್ನೆ ನಿಮಗೂ ಬಾಲಿಶವಾಗಿ ಕಂಡರೂ ತಪ್ಪಿಲ್ಲ. ವಾಸ್ತವದಲ್ಲಿ ಇಂದು ಬ್ರಿಕ್ಸ್ ಶೃಂಗ ಯಶಸ್ವಿಯಾಗಿದೆ ಎನ್ನುವಾಗಲೂ ಮನುಷ್ಯರಿಗೆ ಸಂಬಂಧಿಸಿದ ಇಂತಹ ಮುಖ್ಯ ವಿಚಾರಗಳು ಕಡೆಗಣನೆಗೊಳ್ಳುತ್ತಿದೆ ಎಂದಾದರೆ ಬ್ರಿಕ್ಸ್ ಗೆ ಅರ್ಥ ಏನಿದೆ?
ಭಾರತ ಮತ್ತು ಇಸ್ರೇಲ್ ನೀತಿ ಸಮಾನವಾಗಿಲ್ಲ. ಬ್ರಿಕ್ಸ್ ಶೃಂಗದಲ್ಲಿ ತಾನು ಪಾಲ್ಗೊಂಡು ಇಸ್ರೇಲ್ ಮತ್ತು ಅಮೇರಿಕಗಳ ವಿರುದ್ಧ ನೇರ ಮತ್ತು ಪರೋಕ್ಷ ಘೋಷಣೆಗಳಲ್ಲಿ ಭಾರತ ಭಾಗಿಯಾಗಿದ್ದು ಇದಕ್ಕೆ ಉದಾಹರಿಸಬಹುದು. ಆದರೆ ಮುಸ್ಲಿಮರ ವಿಷಯದಲ್ಲಿ ಭಾರತ ಮತ್ತು ಇಸ್ರೇಲ್ ಸಮಾನವಾಗಿಲ್ಲವೇ? ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ಘಟಕಗಳಲ್ಲಿ ಭಾರತದೊಳಗಿನ ನೀತಿಯನ್ನು ಗಮನವಿಟ್ಟು ನೋಡಿ. ಮೊನ್ನೆ ಮೊನ್ನೆ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದ ಚೀಫ್ ಜಸ್ಟಿಸ್ ಡಿವೈ ಚಂದ್ರ ಚೂಡರು ಬಾಬರಿ ಮಸೀದಿಯ ವಿಚಾರದಲ್ಲಿ ತೀರ್ಪು ನೀಡಲು ದೇವನ ಮೊರೆ ಹೋದೆ ಎಂದು ಎಷ್ಟು ಸಲೀಸಾಗಿ ಹೇಳಿದರು. ಅಂದರೆ ಇತ್ತ ನ್ಯಾಯಾಧೀಶರು ಈ ತೀರ್ಪಿನಲ್ಲಿ ಸಂವಿಧಾನವನ್ನು ನೋಡಿಲ್ಲ ಎಂದು ಹೇಳಬಹುದೇ?
ಪ್ರಜಾಪ್ರಭುತ್ವದಲ್ಲಿ ಬಹುಮತ ಎಲ್ಲವನ್ನೂ ನಿರ್ಧರಿಸುತ್ತದೆ. ಅನ್ಯಾಯವೇ ಆದರೂ ಅದಕ್ಕೆ ಹೆಚ್ಚಿನ ಸಪೋರ್ಟ್ ಇದ್ದರೆ ಅದನ್ನೆ ನ್ಯಾಯ ಎಂದು ತೀರ್ಮಾನಿಸಲಾಗುವುದು. ಡಿವೈ ಚಂದ್ರ ಚೂಡ್ರ ಹೇಳಿಕೆಗೆ ಹಲವು ವಿರೋಧಗಳು ಭಾರತದಲ್ಲಿಯೇ ವ್ಯಕ್ತಿವಾಗಿದೆ. ವಿರೋಧ ಸೃಷ್ಟಿಯಾಗಬಹುದಾದ ಮಾತನ್ನೇ ಅವರು ಆಡಿದ್ದು. ಆದರೆ ಬಾಬರಿ ಮಸೀದಿಯ ತೀರ್ಪನ್ನು ನೀಡಿದ ತಂಡದಲ್ಲಿದ್ದ ಹೆಚ್ಚಿನ ನ್ಯಾಯಾಧೀಶರು ಮೋದಿ ಸರಕಾರದಿಂದ ಒಂದಲ್ಲ ಒಂದು ರೀತಿಯಲ್ಲಿ ಫಲಾನುಭವಿಯಾಗಿದ್ದಾರೆ. ಇತ್ತೀಚೆಗೆ ಚೀಫ್ ಜಸ್ಟಿಸ್ ಮನೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಹಬ್ಬ ಆಚರಿಸಿದ್ದನ್ನು ಇಲ್ಲಿ ನೆನಪಿಸಬಹುದು.
ವಿಷಯ ಬದಲಿಸೋಣ:
ಕಳೆದ ಆಗಸ್ಟ್ ನಲ್ಲಿ ಹರಿಯಾಣದ ಭದ್ರ ನಗರದಲ್ಲಿ ಗೋರಕ್ಷಕರು ಬೀಫ್ ಮಾಂಸದಡುಗೆ ಮಾಡಿದ್ದೆಂದು ಪಶ್ಚಿಮಬಂಗಾಳದ ಯುವಕ ಸಬಿರ್ ಮಲಿಕ್ನನ್ನು ಹೊಡೆದು ಕೊಂದಿದ್ದರು. ಇದೀಗ ಲ್ಯಾಬ್ ವರದಿ ಬಂದಿದೆ. ಅದರ ಪ್ರಕಾರ, ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಗುಡಿಸಲುಗಳಿಂದ ಸಂಗ್ರಹಿಸಿದ ಪದಾರ್ಥದಲ್ಲಿ ಬೀಫ್ ಪತ್ತೆಯಾಗಿಲ್ಲ. ಡಿಎಸ್ಪಿ ಭರತ್ ಭೂಷಣ್ರು ಸಬೀರ್ ಮಲಿಕ್ ಹತ್ಯೆ ಪ್ರಕರಣದಲ್ಲಿ ಹತ್ತು ಶಂಕಿತರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ವಿನಾಕಾರಣ ಜೀವ ಹೋಗಿದೆಯಲ್ಲ ಅದನ್ನು ಮರಳಿ ತಂದು ಕೊಡಲು ಯಾರಿಂದ ಸಾಧ್ಯ?
ಉತ್ತರ ಪ್ರದೇಶದ ಇನ್ನೊಂದು ತಾಜಾ ಘಟನೆಯನ್ನು ಎತ್ತಿಕೊಳ್ಳೋಣ. ಲಕ್ನೊ ಸಮೀಪದ ಪಾದರಿ ಗ್ರಾಮದಲ್ಲಿ ಸೆಗಣಿ ಎತ್ತಲು ನಿರಾಕರಿಸಿದ ಬಾಬಕಬುತಾರ ಎಂಬ ವ್ಯಕ್ತಿಯನ್ನು ತಲೆಕೆಳಗಾಗಿ ಕಟ್ಟಿಹಾಕಿ ಕ್ರೂರವಾಗಿ ಹೊಡೆದು ತಲೆ ಬೋಳಿಸಲಾಯಿತು. ಕೃಷಿ ಸ್ಥಳದಲ್ಲಿ ಕಡ್ಲೆಕಾಯಿ ಕೀಳುತ್ತಿದ್ದಾಗ ಕಬುತಾರರನ್ನು ಅಲ್ಲಿಗೆ ಬಂದ ನಾಲ್ವರು ಕಾರಿನೊಳಗೆ ಹಾಕಿಕೊಂಡು ಹೋಗಿ ಹೀಗೆ ಮಾರಕವಾಗಿ ಹೊಡೆದು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಈ ದೃಶ್ಯಗಳು
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾದ ನಂತರ ಪೊಲೀಸರು ಕೇಸು ದಾಖಲಿಸಿಕೊಂಡರು. ಯೋಗಿ ಆದಿತ್ಯನಾಥರದ್ದು ಗೂಂಡಾ ಸರಕಾರ ಎಂದು ಕಾಂಗ್ರೆಸ್ ಆರೋಪಿಸಿತು. ಯಾರು ಏನೇ ಹೇಳಿದರೂ ಹಿಂದುಳಿದವರು ದಲಿತ ವಿಭಾಗಕ್ಕೆ ಸೇರಿದ ವ್ಯಕ್ತಿಗಳನ್ನು ಅಪಮಾನಿಸುವುದಕ್ಕೆ ಒಂದು ನಿಮಿಷವೂ ಹಿಂಜರಿಯುವುದಿಲ್ಲ. ಕೇಸು, ಕೋರ್ಟು ಇದ್ದದ್ದೇ. ಕೊನೆಗೆ ಪರಿಣಾಮವೂ ಅವರಿಗೆ ಗೊತ್ತಿದ್ದದ್ದೇ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮೇಲ್ವರ್ಗದ ಹನ್ನೊಂದು ಮಂದಿಯನ್ನು ಒಳ್ಳೆಯ ನಡತೆಗೆ ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿದ್ದನ್ನು ನೆನಪಿಸಿಕೊಳ್ಳಿ.
ಬಾಬರಿ ಮಸೀದಿ ಕುರಿತು ತೀರ್ಪು ನೀಡಿದ ಐವರ ಜಡ್ಜ್ ಗಳಲ್ಲಿ ಅಂದಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿಯವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು. ಇಬ್ಬರು ಜಡ್ಜ್ ಗಳಿಗೆ ಚೀಫ್ ಜಸ್ಟಿಸ್ ಆಗಿ ಭಡ್ತಿ ಸಿಕ್ಕಿತು. ಇನ್ನೊಬ್ಬರು ರಾಜ್ಯಪಾಲರಾದರು. ಮತ್ತೊಬ್ಬರು ನ್ಯಾಶನಲ್ ಕಂಪೆನಿ ಲಾ ಅಪಿಲಿಯೇಟ್ ಟ್ರಿಬ್ಯೂಲಿನ ಅಧ್ಯಕ್ಷರಾದರು. ಅನ್ಯಾಯ ತೀರ್ಪು ನೀಡಿದ ಪರಿಣಾಮದಲ್ಲಿ ಮುಸ್ಲಿಮರು ಬಾಬರಿ ಮಸೀದಿ ಕಳಕೊಂಡರು. ಇದಕ್ಕೆ ಬದಲು ಅಯೋಧ್ಯೆಯ ಎಲ್ಲೋ ಒಂದು ಕಡೆ ಐದು ಎಕ್ರೆ ಜಾಗ ಪಡೆದುಕೊಂಡರು. ಆದರೆ ಜಡ್ಜ್ ಗಳಲ್ಲಿ ಯಾರದೇ ಸಹಿ ಇಲ್ಲದ ಬಾಬರಿ ಮಸೀದಿ ತೀರ್ಪು ಭಾರತದ ಇತಿಹಾಸವನ್ನು ನಿಗೂಢವಾಗಿ ಕಾಡಲಿದೆ. ಕಾಲಾಯ ತಸ್ಮೈ ನಮಃ ಎಂಬ ಒಂದು ಮಾತನ್ನು ನೆನಪಿಟ್ಟು ಕೊಳ್ಳಿ.
ಬ್ರಿಕ್ಸ್ ಸಮ್ಮೇಳನದಲ್ಲಿ ಆಗಿರುವ ಮುಖ್ಯ ಪ್ರಭಾವಗಳಲ್ಲಿ ಪೂರ್ವ ಲಡಾಕಿನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಚೀನದ ಸೈನಿಕರು ತಮ್ಮ ತಮ್ಮ ಶಿಬಿರಗಳಿಗೆ ಮರಳುತ್ತಿರುವುದು ಇದೀಗ ಉಪಗ್ರಹ ಚಿತ್ರಗಳಿಂದಲೂ ಸಾಬೀತಾಗಿದೆ. ಅಂದರೆ ಭಾರತ ಚೀನದ ನಡುವೆ ಸಂಘರ್ಷದ ವಾತಾವರಣ ತಿಳಿಯಾಗಿದ್ದು ಮೋದಿ ಜಿನ್ ಪೆಂಗ್ರ ಕೈಕುಲುಕಿದ್ದರಿಂದ ಭಾರತಕ್ಕಾದ ಲಾಭ ಎಂದರೆ ಈಗ ಅವಸರವಾದೀತು. ಚೀನ ಬ್ರಿಕ್ಸ್ ಯಶಸ್ಸು ಮತ್ತು ಡಾಲರ್ ಮುಂದೆ ಬೇರೆಯದೇ ಕರೆನ್ಸಿ ತರಲು ಅಗತ್ಯವಾದ ಎಡ್ಜೆಸ್ಟ್ ಮೆಂಟ್ ಮಾಡಿಕೊಳ್ಳುತ್ತಿದೆ ಎಂದು ಮಾತ್ರ ಸದ್ಯಕ್ಕೆ ಹೇಳಬಹುದು.
ಏನಿದ್ದರೂ 2022ರಲ್ಲಿ ಯುಕ್ರೇ ನ್ ಯುದ್ಧ ಆರಂಭಗೊಂಡ ನಂತರ ರಷ್ಯದಲ್ಲಿ ನಡೆದ ಅತೀ ದೊಡ್ಡ ಸಮ್ಮೇಳನ ಬ್ರಿಕ್ಸ್ ಆಗಿದೆ. ದಕ್ಷಿಣದ ಭೂಪಟದಲ್ಲಿ ಹೊಸ ರಾಜಕೀಯ ಶಕ್ತಿ ಸ್ಥಾಪನೆಗೊಳ್ಳುತ್ತಿದೆ ಎಂಬ ಸೂಚನೆಯೂ ದೊರೆಯಿತು. ಗಾಝ ಮತ್ತು ಲೆಬನಾನಿಗೆ ಬೆಂಬಲವನ್ನು ಶೃಂಗ ಘೋಷಿತು. ಗ್ಲೋಬಲ್ ಸೌತ್ ಶಕ್ತಿಯ ಭಾಗವಾಗಲು ಈಗಾಗಲೇ ಹಲವು ದೇಶಗಳು ಅರ್ಜಿಹಿಡಿದು ಮುಂದೆ ಬಂದಿವೆ. ರಷ್ಯ ಚೀನಗಳು ಪರ್ಯಾಯ ಶಕ್ತಿಯೊಂದನ್ನು ಹುಟ್ಟು ಹಾಕುತ್ತಿರುವುದು ಸ್ಪಷ್ಟವಾದ ಬೆನ್ನಿಗೆ ಇಸ್ರೇಲ್ ಇರಾನ್ ಇರಾಕ್ ಸಿರಿಯಾಗಳಿಗೆ ಕ್ಷಿಪಣಿ ಹಾರಿ ಬಿಟ್ಟಿತ್ತು. ಬ್ರಿಕ್ಸ್ ಗಿಂತ ಹೆಚ್ಚು ಇದುವೇ ಚರ್ಚೆಯಾಗಬೇಕೆಂಬ ತಂತ್ರ ಇದಾಗಿರಬಹುದು. ದುರದೃಷ್ಟಕ್ಕೆ ಬ್ರಿಕ್ಸ್ ಘೋಷಿಸಿದ ವಿಶ್ವ ಬ್ಯಾಂಕ್, ಐಎಂಎಫ್ಗೆ ಪರ್ಯಾವಾದ ಬ್ರಿಕ್ಸ್ ಮೇಲ್ನೋಟದಲ್ಲಿ ಜಾರಿಗೊಳ್ಳಲಿರುವ ಬ್ಯಾಂಕಿಗ್ ವ್ಯವಸ್ಥೆಯ ಬಗ್ಗೆಯೇ ಚರ್ಚೆಯಾಗುತ್ತಿದೆ. ಬ್ರಿಕ್ಸ್ ನಡೆಯುವ ಸ್ಥಳಗಳಲ್ಲಿ 30 ದೇಶದ ಪ್ರಮುಖರು ಹಾಜರಿದ್ದರು. ಇವೆಲ್ಲ ಬೆಳವಣಿಗೆಯ ಹಿನ್ನಲೆಯಲ್ಲಿ ಭಾರತದ ಆಂತರಿಕ ನೀತಿಯಲ್ಲಿ ಬದಲಾವಣೆಯಾಗಲೂಬಹುದು.












