ಸನ್ಮಾರ್ಗ ವಾರ್ತೆ
ಉ.ಪ್ರ: ಐದು ವರ್ಷದ ಬಾಲಕಿ ತಾಯಿಯ ಮುಂದೆಯೇ ಗಂಗಾ ನದಿಯಲ್ಲಿ ಮುಳುಗಿ ಸಾವಿಗೀಡಾದ ದಾರುಣ ಘಟನೆ
ಉತ್ತರಪ್ರದೇಶದ ಗಾಜಿಪುರದ ಸೈದ್ಪುರದ ಪಕ್ಕಾ ಘಾಟ್ನಿಂದ ವರದಿಯಾಗಿದ್ದು, ಮಗಳು ನೀರಿನಲ್ಲಿ ಮುಳುಗುತ್ತಿರುವಾಗ ತಾಯಿ ಗಮನಿಸದೆ ಇದ್ದು ತನ್ನ ಮೊಬೈಲ್ನಲ್ಲಿ ರೀಲ್ ತಯಾರಿಸುತ್ತಿದ್ದ ಸಂದರ್ಭ ಈ ಅನಾಹುತ ಸಂಭವಿಸಿದೆ.
ಈ ಘಟನೆ ಸ್ಥಳೀಯರಲ್ಲಿ ಆಘಾತವನ್ನು ಮೂಡಿಸಿದ್ದು, ತಾಯಿಯ ನಿರ್ಲಕ್ಷ್ಯದ ಸಾಮಾಜಿಕ ಮಾಧ್ಯಮ ಬಳಕೆದಾರರು ಖೇದ ವ್ಯಕ್ತ ಪಡಿಸಿದ್ದಾರೆ. ತಾಯಿ ಸೋಷಿಯಲ್ ಮೀಡಿಯಾ ರೀಲ್ ಮಾಡುವಲ್ಲಿ ತೊಡಗಿಸಿಕೊಂಡಿದ್ದ ವೇಳೆ ಮಗಳು ಪಕ್ಕದ ಗಂಗಾ ನದಿಯಲ್ಲಿ ಬಿದ್ದುದನ್ನು ಗಮನಿಸಿರಲಿಲ್ಲ. ಮಗುವಿನ ಮೃತದೇಹವನ್ನು ಸ್ಥಳೀಯರು ಸುಮಾರು ಎರಡು ಗಂಟೆಗಳ ಶೋಧ ಕಾರ್ಯ ನಡೆಸಿದ ನಂತರ ಹೊರ ತೆಗೆಯಲಾಯಿತು. ನಂತರ ಪೊಲೀಸರು ಘಟನೆ ಸಂಬಂಧ ಪ್ರಕ್ರಿಯೆ ಮುಗಿಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ವಾರಣಾಸಿಯ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ರಾ ಗ್ರಾಮದ ನಿವಾಸಿ ಸಂದೀಪ್ ಪಾಂಡೆ ಅವರ ಪತ್ನಿ ಅಂಕಿತಾ ಪಾಂಡೆ, ತಮ್ಮ ಐದು ವರ್ಷದ ಪುತ್ರಿ ತಾನ್ಯಾ ಜೊತೆ ಸೈದ್ಪುರದ ಬೌರ್ವಾನ್ ಗ್ರಾಮದಲ್ಲಿರುವ ತಮ್ಮ ತಂದೆ ಕಪಿಲ್ ಮಿಶ್ರಾ ಅವರ ಮನೆಗೆ ಛಾತ್ ಪೂಜೆಗೆ ಬಂದಿದ್ದರು.
ಸೋಮವಾರ, ಅಂಕಿತಾ, ತಾನ್ಯಾ, ತಾಯಿ ಲಕ್ಷ್ಮಿನಾ, ಸಹೋದರಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಸೈದ್ಪುರ ನಗರದ ಪಕ್ಕಾ ಘಾಟ್ಗೆ ಛಾತ್ ಪೂಜೆಯ ಅಂಗವಾಗಿ ಗಂಗಾ ಸ್ನಾನಕ್ಕೆ ತೆರಳಿದ್ದರು.
ಅಲ್ಲಿ ತಾನ್ಯಾ ತನ್ನ ಚಿಕ್ಕಮ್ಮ, ಅಜ್ಜಿ ಮತ್ತು ಇತರ ಮಕ್ಕಳೊಂದಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ, ತಾಯಿ ಅಂಕಿತಾ ಬದಿಯಲ್ಲೇ ನಿಂತು ಮೊಬೈಲ್ನಲ್ಲಿ ವಿಡಿಯೋ ರೀಲ್ ಮಾಡುತ್ತಿದ್ದರು ಎನ್ನಲಾಗಿದೆ.
ಈ ಘಟನೆ ಆನ್ಲೈನ್ನಲ್ಲಿ ವ್ಯಾಪಕವಾಗಿ ಹಂಚಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಾಯಿಯ ನಿರ್ಲಕ್ಷ್ಯ ಮತ್ತು ಬಾಲಕಿಯ ದುರ್ಮರಣದ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
https://x.com/Live_Hindustan/status/1853450967712469250?t=d72k9xYBTWj_1WYC9phZrw&s=19












