ಕೊಲೊಂಬೊ,ಮೇ 11: ಶ್ರೀಲಂಕಾದಲ್ಲಿ ಈಸ್ಟರ್ ವೇಳೆ ನಡೆದ ಸರಣಿ ಸ್ಫೋಟದ ಕೇಂದ್ರೀಯ ವ್ಯಕ್ತಿ ಮುಹಮ್ಮದ್ ಕಾಸಿಂ ಸಹ್ರಾನ್ನ ಸಾವು ಖಚಿತಪಡಿಸಲು ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಶ್ರೀಲಂಕಾದ ಕೋರ್ಟು ಆದೇಶ ಹೊರಡಿಸಿದೆ. ಶಾಂಗ್ರಿಲಾ ಹೊಟೇಲು ಸ್ಫೋಟದಲ್ಲಿ ಸಹ್ರಾನ್ ಕೊಲ್ಲಲ್ಪಟ್ಟಿದ್ದಾನೆ ಎಂದು ಭಾವಿಸಲಾಗಿದೆ. ಇಲ್ಹಾಂ ಅಹ್ಮದ್ ಇಬ್ರಾಹೀಂ ಎಂಬ ಎರಡನೆಯ ಆತ್ಮಾಹುತಿ ಬಾಂಬರ್ ಜೊತೆ ಈತನೂ ಶಂಗ್ರಿಲಾದಲ್ಲಿದ್ದನು ಎನ್ನಲಾಗಿದೆ. ಈಗ ಈತನ ಸಾವನ್ನು ಖಚಿತ ಪಡಿಸಲಿಕ್ಕಾಗಿ ಕೊಲೊಂಬೊ ಪೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟು ಡಿಎನ್ಎ ಪರೀಕ್ಷೆಗೆ ಆದೇಶ ಹೊರಡಿಸಿದೆ.












