ಮಹಿಳೆಯರ ವಿರುದ್ಧ ಅಪಮಾನಕರ ಹೇಳಿಕೆ ನೀಡುವ ನಾಯಕರ ವಿರುದ್ಧ ಚುನಾವಣಾ ಆಯೋಗ ಕ್ರಮ ಜರಗಿಸಬೇಕು- ಮಾಯಾವತಿ

0
586

ಲಕ್ನೊ,ಮೇ 11: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಹಿಳೆಯರನ್ನು ಆಕ್ಷೇಪಿಸುವ ರಾಜಕೀಯ ನಾಯಕರ ವಿರುದ್ಧ ಚುನಾವಣಾ ಆಯೋಗ ಕ್ರಮ ಜರಗಿಸಬೇಕೆಂದು ಬಹುಜನ ಸಮಾಜವಾದಿ ಪಾರ್ಟಿ ಅಧ್ಯಕ್ಷೆ ಮಾಯಾವತಿ ಹೇಳಿದರು. ಹಲವು ನಾಯಕರ ವಿರುದ್ಧ ಸ್ಪರ್ಧಿಸುತಿರುವ ಮಹಿಳಾ ಅಭ್ಯರ್ಥಿಗಳ ವಿರುದ್ಧ ಅಪಮಾನಕರ ಹೇಳಿಕೆ ನೀಡುತ್ತಿದ್ದಾರೆ. ಇದರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಜರಗಿಸಬೇಕಾಗಿದೆ ಎಂದು ಮಾಯಾವತಿ ಹೇಳಿದರು. ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೊಪಿಗಳನ್ನು ಸಂರಕ್ಷಿಸುವ ಕಾಂಗ್ರೆಸ್ ಸರಕಾರ ಮತ್ತು ಪೊಲೀಸರ ವಿರುದ್ಧ ಸುಪ್ರೀಂಕೋರ್ಟು ಕ್ರಮ ಜರಗಿಸಬೇಕು. ಆಲ್ವಾರ್ ಸಾಮೂಹಿಕ ಅತ್ಯಾಚಾರಕ್ಕೆ ದಲಿತ ಮಹಿಳೆಯಾದ್ದರಿಂದ ಅವರಿಗೆ ನ್ಯಾಯ ನಿರಾಕರಿಸಲ್ಪಟ್ಟಿದೆ ಎಂದಲ್ಲ ದೇಶದ ಎಲ್ಲ ಮಹಿಳೆಯರ ಅವಸ್ಥೆ ಇದುವೇ ಆಗಿದೆ ಎಂದು ಮಾಯಾವತಿ ಹೇಳಿದರು. ಮಹಿಳಾ ಸುರಕ್ಷೆಯ ಕುರಿತು ಮಾತಾಡುವ ಕಾಂಗ್ರೆಸ್ ಸರಕಾರ ಆ ವಿಷಯದಲ್ಲಿ ವಿಫಲವಾಗಿದೆ ಎಂದು ಮಾಯಾವತಿ ಆರೋಪಿಸಿದರು.