ಮಕ್ಕ,ಮೇ11: ರಮಝಾನ್ನ ಮೊದಲ ಜುಮಾ ನಮಾಝ್ಗೆ ಸೌದಿ ಅರೇಬಿಯದ ಪವಿತ್ರ ಮಸೀದಿಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಸೌದಿಯೊಳಗಿನ ಉಮ್ರಾ ಯಾತ್ರಿಕರ ಜುಮಾ ನಮಾಝ್ನಲ್ಲಿ ನೆರೆಯುವುದರೊಂದಿಗೆ ಉಭಯ ಹರಂಗಳು ಜನಸಾಗರದಿಂದ ನೆರೆಯಿತು. ನಿನ್ನೆ ಬೆಳಗ್ಗಿನಿಂದಲೇ ಜನರು ಎರಡು ಮಸೀದಿಯೆಡೆಗೆ ಹರಿದು ಬರತೊಡಗಿದ್ದರು. ಮಸೀದಿಯ ಮುಂಭಾಗಗಳಲ್ಲಿ ಬ್ಯಾರಿಕೇಡ್ಗಳನ್ನು ಸ್ಥಾಪಿಸಿ ನಡೆಯುವ ದಾರಿಯ ವ್ಯವಸ್ಥೆ, ನಮಾಝಿಗರ ಹೋಗಿ ಬರುವುದರ ನಿಯಂತ್ರಣ ಮತ್ತು ನಮಾಝ್ನ ಸ್ಥಳಕ್ಕೆ ಕಳುಹಿಸುವುದು ಇತ್ಯಾದಿ ವ್ಯವಸ್ಥೆಗಳನ್ನು ನೂರಾರು ಭದ್ರತಾ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಶುಕ್ರವಾರದ ನಿಭಿಡತೆಯನ್ನು ಪರಿಗಣಿಸಿ ಮಕ್ಕಾದ ಗವರ್ನರ್ ಅಮೀರ್ ಖಾಲಿದ್ ಅಲ್ ಫೈಸಲ್ರ ಸೂಚನೆಯಂತೆ ಆಯಾ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಮೊದಲೇ ಮಾಡಿ ಮುಗಿಸಿದ್ದವು. ಟ್ರಾಫಿಕ್ ಸುರಕ್ಷೆ, ರಸ್ತೆಯಲ್ಲಿ ತಡೆಗಳು ಆಗದಂತೆ ನೋಡಿಕೊಳ್ಳುವುದು, ವಾಹನಗಳು ಹರಂನ ಬಳಿಗೆ ಹೋಗದಂತೆ ತಡೆಯಲಾಯಿತು. ಎರಡು ಹರಂಗಳ ಕಾರ್ಯಾಲಯ ಆರೋಗ್ಯ, ರೆಡ್ಕ್ರೆಸೆಂಟ್, ಸಿವಿಲ್ ಡಿಫೆನ್ಸ್, ಮುನ್ಸಿಪಾಲಿಟಿ ಮೊದಲಾದ ಇಲಾಖೆಗಳು ಯಾತ್ರಾರ್ಥಿಗಳಿಗೆ ಅಗತ್ಯ ವ್ಯವಸ್ಥೆಯನ್ನು ಮೊದಲು ಸಿದ್ಧಪಡಿಸಿಟ್ಟಿದ್ದವು.












