ಬೆಂಗಳೂರು, ಮೇ 13: ಎರಡು ವರ್ಷ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಪಾಕಿಸ್ತಾನದ ದಂಪತಿಗಳನ್ನು ಬಿಡುಗಡೆಗೊಳಿಸಿ ಗಡಿಪಾರು ಗೊಳಿಸಲಾಗಿದೆ. ಕರಾಚಿಯ ಚಕ್ರಘಾಟ್ನ ಕಾಶಿಫ್ ಶಂಶುದ್ದೀನ್(32), ಪತ್ನಿ ಕಿರಣ್ ಗುಲಾಂ ಅಲಿ(27)ರನ್ನು ರವಿವಾರ ವಾಗಾ-ಅಟಾರಿ ಗಡಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. 2017ರ ಮೇಯಲ್ಲಿ ಪಾಲಕ್ಕಾಡಿನ ಪಟ್ಟಾಂಬಿ ಎಂಬಲ್ಲಿ ಮುಹಮ್ಮದ್ ಶಿಹಾಬ್(30), ಪತ್ನಿ ಪಾಕಿಸ್ತಾನದ ಪ್ರಜೆ ಸಮೀರಾ ಅಬ್ದುರ್ರಹ್ಮಾನ್(25)ರ ಜೊತೆ ಕಾಶಿಫ್ ಮತ್ತು ಕಿರಣ್ರನ್ನು ಬೆಂಗಳೂರು ಪೊಲೀಸರು ಕುಮಾರಸ್ವಾಮಿ ಲೇ ಔಟ್ನ ಯಾರಬ್ನಗರದಿಂದ ಅನಧಿಕೃತವಾಗಿ ವಾಸಿಸುತ್ತಿರುವ ಆರೋಪದಲ್ಲಿ ಬಂಧಿಸಿದ್ದರು.ಅಲ್ಲದೇ ಶಿಹಾಬ್, ಸಮೀರಾರನ್ನು ಜೈಲಿನಲ್ಲಿರಿಸಲಾಗಿದೆ. ಕಾಶಿಫ್ ಶಂಶುದ್ದೀನ್ ಹಾಗೂ ಕಿರಣ್ ಗುಲಾಂ ಅಲಿಯ ಬಿಡುಗಡೆಗೆ ತುರ್ತು ಕ್ರಮ ಜರಗಿಸಬೇಕೆಂದು ಬೆಂಗಳೂರಿನ ಫಾರಿನರ್ಸ್ ರೀಜನಲ್ ರಿಜಿಸ್ಟ್ರೇಶನ್ ಕಚೇರಿ ಅಧಿಕಾರಿಗಳಿಗೆ ಮತ್ತು ಗೃಹ ಸಚಿವಾಲಯಕ್ಕೆ ಕಳೆದ ತಿಂಗಳು ರಾಜ್ಯ ಹೈಕೋರ್ಟು ಸೂಚಿಸಿತ್ತು.












