ರಾಜಕೀಯ ಲಾಭಕ್ಕಾಗಿ ಮೋದಿ ಪತ್ನಿಯನ್ನು ತೊರೆದರು- ಮಾಯಾವತಿ

0
526

ಲಕ್ನೊ,ಮೇ 13: ಪ್ರಧಾನಿಯ ವಿರುದ್ಧ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ತೀಕ್ಷ್ಣ ಮಾತಿನ ದಾಳಿ ನಡೆಸಿದ್ದಾರೆ. ಮೋದಿ ರಾಜಕೀಯ ಲಾಭಕ್ಕಾಗಿ ಪತ್ನಿಯನ್ನು ತೊರೆದಿದ್ದಾರೆ. ಇಂತಹ ಮೋದಿಗೆ ಮಹಿಳೆಯನ್ನು ಗೌರವಿಸಲು ಸಾಧ್ಯವೇ? ಎಂದು ಮಾಯಾವತಿ ಪ್ರಶ್ನಿಸಿದರು. ಬಿಜೆಪಿ ನಾಯಕರ ಪತ್ನಿಯರಿಗೆ ಮೋದಿ ಬಗ್ಗೆ ಹೆದರಿಕೆಯಿದೆ. ಪತಿಯಂದಿರಿಂದ ಮೋದಿ ಅವರನ್ನು ಬೇರ್ಪಡಿಸುತ್ತಾರೆ ಎನ್ನುವ ಬೆದರಿಕೆಯದು. ಮೋದಿ ಹೀನಾಯವಾದ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಲಾಭವೆತ್ತಲು ಅಲ್ವಾರ್ ಸಾಮೂಹಿಕ ಅತ್ಯಾಚಾರದ ಕುರಿತು ಮೋದಿ ಮೌನವನ್ನು ಮುಂದುವರಿಸಿದ್ದಾರೆ ಎಂದು ಮಾಯಾವತಿ ಆರೋಪಿಸಿದರು.

ಮಾಯಾವತಿ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕ ಸಾಂಬಿತ್ ಪಾತ್ರ ರಂಗ ಪ್ರವೇಶಿಸಿದ್ದು ಮೋದಿಯ ವಿರುದ್ಧ ಉಪಯೋಗಿಸಿದ ಮಾತುಗಳು ಅತ್ಯಂತ ನೋವು ತರಿಸುವಂತಹದ್ದು. ಇದು ಎಂತಹ ಮಾನಸಿಕತೆಯಾಗಿದೆ. ಮೋದಿಯೊಂದಿಗೆ ಇಷ್ಟು ವೈರತ್ವವೇಕೆ ಎಂದು ಅವರು ಮಾಯಾವತಿಯನ್ನು ಕೇಳಿದರು. ಮಾಯಾವತಿಗೆ ಸಹೋದರ ದೊಡ್ಡ ವ್ಯಕ್ತಿಯಾಗಿರಬಹುದು. ಆದರೆ ಮೋದಿಗೆ ದೇಶವೇ ದೊಡ್ಡದು ಎಂದು ಸಾಂಬೀತ್ ಪಾತ್ರ ಹೇಳಿದರು.