ಸನ್ಮಾರ್ಗ ವಾರ್ತೆ
ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆಎಎಸ್ ಅಧಿಕಾರಿ ಡಾಕ್ಟರ್ ಎಚ್ ಎಲ್ ನಾಗರಾಜ್ ಅವರು ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ಅವರನ್ನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ನೂತನ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಪಟ್ಟಾಭಿಷೇಕ ನಡೆದಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿಯಾಗಿರುವ ಚಂದ್ರಶೇಖರ ಸ್ವಾಮೀಜಿಯವರಿಗೆ 81 ವರ್ಷ ಪ್ರಾಯವಾಗಿದ್ದು ಅವರ ಉತ್ತರಾಧಿಕಾರಿಯಾಗಿ ನಾಗರಾಜ್ ಅವರನ್ನು ಮಠದ ಟ್ರಸ್ಟಿಗಳು ಮತ್ತು ಸ್ವಾಮೀಜಿಗಳು ಆಯ್ಕೆ ಮಾಡಿದ್ದಾರೆ.
ಇವರು ಈ ಹಿಂದೆ 2011ರಲ್ಲಿ ಕೆ ಆರ್ ಪೇಟೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೂ ಸನ್ಯಾಸತ್ವ ಪಡೆದುಕೊಂಡಿದ್ದರು. ಆದಿಚುಂಚನಗಿರಿಯ ಮಟದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಆದರೆ ಕುಟುಂಬಸ್ಥರು ಮತ್ತು ಒಡನಾಡಿಗಳ ಒತ್ತಾಯದಿಂದಾಗಿ ಸನ್ಯಾಸತ್ವ ತೊರೆದು ಸೇವೆಗೆ ಮರಳಿದ್ದರು.












