ಸನ್ಮಾರ್ಗ ವಾರ್ತೆ
ಮಧ್ಯ ಗಾಝಾದ ಪ್ರೆಸಿಡೆನ್ಸಿಯಲ್ ಕಟ್ಟಡಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಫೆಲೆಸ್ತೀನ್ ಬರಹಗಾರ್ತಿ ಮತ್ತು ಕಲಾಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದ ವಲಾ ಜುಮಾ ಅಲ್ ಅಫ್ರಾಂಜಿ ಮತ್ತು ಅವರ ಪತಿ ಅಹಮದ್ ಸಲಾಂ ಹತ್ಯೆಡಾಗಿದ್ದಾರೆ.
ನುಸೈರಾತ್ ನ ಐನ್ ಜಲೂತ್ ಟವರ್ಸ್ ನ ಹತ್ತಿರ ಇರುವ ರೆಸಿಡೆನ್ಸಿಯಲ್ ಕಟ್ಟಡದಲ್ಲಿ ಈ ದಂಪತಿಗಳು ವಾಸಿಸುತ್ತಿದ್ದರು. ಈ ಕಟ್ಟಡದ ಮೇಲೆಯೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಇವರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
ಕಾದಂಬರಿಗಾರ್ತಿಯಾಗಿ ಮತ್ತು ಕ್ಯಾಲಿಗ್ರಫಿ ಸೇರಿದಂತೆ ಕರಕುಶಲ ಕರ್ಮಿಯಾಗಿಯೂ ಅಫ್ರಾನ್ಜೆ ಗುರುತಿಸಿಕೊಂಡಿದ್ದರು. ಸ್ಥಳೀಯ ಡಿಸೈನರ್ಗಳೊಂದಿಗೆ ಸೇರಿ ಪರಂಪರಾಗತ ಫೆಲೆಸ್ತೀನ್ ಉಡುಪುಗಳನ್ನು ಅಫ್ರಾನ್ಜೆ ಜನರಿಗೆ ತಲುಪಿಸುತ್ತಿದ್ದರು. ಇವರ ಸೋಶಿಯಲ್ ಮೀಡಿಯಾ ಖಾತೆಗೆ ಲಕ್ಷದಷ್ಟು ಫಾಲೋವರ್ಸ್ ಗಳಿದ್ದರು.
ಇಸ್ರೇಲ್ ಅತಿಕ್ರಮಣದ ಬಳಿಕದ ಗಾಜಾದ ಪುನರ್ ನಿರ್ಮಾಣದ ಕುರಿತಂತೆ ತನ್ನ ಪೋಸ್ಟುಗಳ ಮೂಲಕ ಅವರು ಗಮನ ಸೆಳೆದಿದ್ದರು. ಇಸ್ರೆಲ್ ವೈಮಾನಿಕ ದಾಳಿಯಲ್ಲಿ ಈ ದಂಪತಿಗಳಲ್ಲದೇ ಇನ್ನೂ ಹನ್ನೊಂದು ಮಂದಿ ಹತ್ಯೆಗೀಡಾಗಿದ್ದಾರೆ.












