ಸನ್ಮಾರ್ಗ ವಾರ್ತೆ
✍️ ಅರಫಾ ಮಂಚಿ
ಪುಣೆಯಲ್ಲಿ ವಿಶ್ವ ಹಿಂದೂ ಪರಿಷತ್ನ ಕಾರ್ಯಕ್ರಮದಲ್ಲಿ ಅರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರು ರಾಮ ಮಂದಿರಕ್ಕೆ ಸಮಾನವಾದ ವಿವಾದಗಳನ್ನು ಎಲ್ಲ ಕಡೆ ಎತ್ತುವುದನ್ನು ತಾನು ಒಪ್ಪುವುದಿಲ್ಲ ಎಂದಿದ್ದಾರೆ.
ಭಾಗವತ್ರು ಹೇಳಿದ ಪ್ರಕಾರ ಭಾರತವು ವಿವಿಧ ನಂಬಿಕೆಗಳು ಸಿದ್ಧಾಂತಗಳು ಒಗ್ಗಟ್ಟಿನಲ್ಲಿ ಬದುಕುವ ಪ್ರದೇಶವಾಗಿದೆ. ಅವರು ವಿಹಿಂಪದ ವಿಶ್ವ ಗುರು ಕಾರ್ಯಕ್ರಮದಲ್ಲಿ ಆಡಿದ ಈ ಮಾತು ಕೆಲವರಿಗೆ ಸಹನೀಯ ಅನಿಸುವಂಥದ್ದೇ. ಆದರೆ ನರಸಿಂಹ ರಾವ್ರ ಸರಕಾರ ಆರಾಧನಾ ಕೇಂದ್ರಗಳ ರಕ್ಷಣಾ ಸ್ಥಳ ಕಾನೂನು ತಂದಿತ್ತು. ಅದನ್ನೂ ಇವರು ಒಪ್ಪುತ್ತಾರಾ? ಆ ಮೇಲೆಯೇ ಸಹನೀಯ ಅಸಹನೀಯ ಎಂಬುದು ನಿರ್ಧರಿಸಲ್ಪಡಬೇಕು. ಆದರೆ ಅವರು ಆ ಬಗ್ಗೆ ಈಗ ಏನೂ ಹೇಳಿಲ್ಲ. ಇರಲಿ, ಮೋದಿ ಸರಕಾರ ದೇಶದ ಫೆಡರಲ್ ತತ್ವಕ್ಕೆ ವಿರುದ್ಧವಾಗಿ ಒನ್ ನೇಶನ್ ಒನ್ ಇಲೆಕ್ಷನ್ ಯೋಜನೆಯನ್ನು ತರಲು ಹೊರಟಿದೆ. ಇದನ್ನು ಅವರು ವಿರೋಧಿಸುತ್ತಾರಾ ಒಪ್ಪುತ್ತಾರಾ? ಈ ಬಗ್ಗೆಯೂ ಅವರೇನೂ ಹೇಳಿಲ್ಲ. ಬಹುತೇಕ ಹೇಳಲಾರರೆಂದೇ ಅನಿಸುತ್ತಿದೆ. ಇರಲಿ.
ಮಸೀದಿಯಲ್ಲಿ ಮಂದಿರ ಹಡುಕುತ್ತಿರುವ ಪ್ರವೃತ್ತಿಯನ್ನು ಭಾಗವತ್ರು ಪ್ರಶ್ನಿಸಿದ್ದು ಯಾವಾಗ? ಹೌದು, ಧಾರ್ಮಿಕ ಸ್ಥಳಗಳ ಯಥಾ ಸ್ಥಿತಿ ಕಾನೂನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯಲ್ಲಿ ವಿಚಾರಣೆ ನಡೆಸುತ್ತಾ ಕೇಂದ್ರ ಸರಕಾರದಿಂದ ಸುಪ್ರೀಂಕೋರ್ಟಿನ ಈಗಿನ ಚೀಫ್ ಜಸ್ಟಿಸ್ ಸಂಜೀವ್ ಖನ್ನಾ ಅವರು ವಿವರಣೆ ಕೇಳಿದ ನಂತರ. ಆ ಮೊದಲು ಅವರ ಈ ವಿವೇಕ ಎಲ್ಲಿ ಹೋಗಿತ್ತು? ಹಿಂದಿಲ್ಲದ ಜಾಗೃತಿಯನ್ನು ಮೋಹನ್ ಭಾಗವತ್ ಪ್ರದರ್ಶಿಸಿದ್ದಾರೆ ಎಂದು ಅವರ ಮಾತನ್ನು ಸ್ವಾಗತಿಸಬಹುದೆಂದಿಟ್ಟು ಕೊಳ್ಳಿ. ಆದರೆ ಅವರು ಈ ನಿಲುವಿನಲ್ಲಿ ಪ್ರಾಮಾಣಿಕರಾಗಿರಬೇಕಾಗುತ್ತದೆ ಅಷ್ಟೇ.
ಸಂಸತ್ತಿನಲ್ಲಿ ಅಂಬೇಡ್ಕರ್ರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಮಾನಿಸಿದ್ದರ ಬಗ್ಗೆ ಈ ಮೋಹನ್ ಭಾಗವತ್ ಏನು ಹೇಳುತ್ತಾರೆ. ಆ ಬಗ್ಗೆ ಯಾಕೆ ಅವರ ಮನಸ್ಸು ಜಾಗೃತವಾಗಿಲ್ಲ. ದೇಶದ ಸಂವಿಧಾನ ನಿರ್ಮಾತೃವನ್ನು ಹೀಗಳೆದು ಮಾತಾಡಿದ್ದು ಇವತ್ತು ದೇಶಕ್ಕೆ ಚಿಕ್ಕ ವಿಷಯವಾಗಿಲ್ಲ. ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಆಳುವ ಬಿಜೆಪಿಯ ಮಾತೃ ಸಂಸ್ಥೆಯ ಮುಖಂಡ ಎನ್ನುವ ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿ ಕರೆದು ನಿಲುವು ವ್ಯಕ್ತಪಡಿಸಬಹುದಿತ್ತು. ಮೇಲೆ ಎತ್ತಿದ ಮೂರು ವಿಚಾರಗಳು ಕೂಡ ಸಂಘಿ ವಿಚಾರಧಾರೆಗೆ ಜೋಡಿಕೊಂಡಿದೆ. ಆದ್ದರಿಂದ ಮೋಹನ್ ಭಾಗವತ್ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕಾದ್ದು ಅಗತ್ಯವೂ ಆಗಿದೆ.
ತುಂಬಿದ ಸಂಸತ್ತಿನಲ್ಲಿ ಅಮಿತ್ ಶಾ ಹೇಳಿದ್ದೇನು? ಅಂಬೇಡ್ಕರ್ ಅಂಬೇಡ್ಕರ್ ಅನ್ನುವುದು ಫ್ಯಾಶನ್ ಆಗಿದೆ. ಅಂಬೇಡ್ಕರ್ ನಾಮ ಉಚ್ಚರಿಸುವ ಬದಲು ದೇವರ ನಾಮ ಉಚ್ಚರಿಸಿದ್ದರೆ ಏಳೇಳು ಜನ್ಮದಲ್ಲಿ ಸ್ವರ್ಗ ಸಿಗಬಹುದಿತ್ತು ಎಂದುದು ಸಣ್ಣ ವಿಷಯವಲ್ಲ. ರಾಮ ಮಂದಿರದ ಬಗ್ಗೆ ಮಾತಾಡುವ ದೇಶದ ಒಗ್ಗಟ್ಟಿನ ಬಗ್ಗೆ ನಿಲುವು ಪ್ರಕಟಿಸಿದ ಭಾಗವತ್ರು ಕನಿಷ್ಠ ಅಮಿತ್ ಶಾರಿಗೆ ಬುದ್ಧಿ ಹೇಳಬಹುದಿತ್ತು. ಅದಕ್ಕೂ ಅವರು ಮುಂದಾಗಲಿಲ್ಲ. ಹಾಗಿದ್ದರೆ ಅಮಿತ್ ಶಾ ಸಹಿತ ಬಿಜೆಪಿ ಆರೆಸ್ಸೆಸ್ಗಳು ಅಂಬೇಡ್ಕರ್ ವಿರೋಧಿ ಮನೋಭಾವ ಹೊಂದಿದ್ದಾರೆಂದಾಗುವುದಿಲ್ವೇ.
ಅಲ್ಲ ಅಂಬೇಡ್ಕರ್ರನ್ನು ಅಪಮಾನಿಸುವಾಗಲೂ ಶಾ ಏಳೇಳು ಜನ್ಮದ ಸ್ವರ್ಗ ಆಮಿಷ ಒಡ್ಡಿದರು. ಆದರೆ ಸ್ವರ್ಗದ ಕನಸ್ಸು ಒಬ್ಬ ರಾಜಕಾರಣಿ ಸಂಸತ್ತಿನಿಂದ ತೋರಿಸಬೇಕೆ? ರಾಜಕೀಯ ದೇಶದ ವ್ಯವಸ್ಥೆಯ ನಿರ್ವಹಣೆಯದ್ದು. ಸ್ವರ್ಗ ನರಕಗಳೆಲ್ಲ ಧರ್ಮಕ್ಕೆ ಸಂಬಂಧಿಸಿದ್ದು. ಅಮಿತ್ ಶಾ ಧರ್ಮ ಪ್ರಚಾರವನ್ನು ಸಂಸತ್ತಿನಲ್ಲಿ ಈ ರೀತಿ ಮಾಡಿದಾಗ ಅದೂ ಅಂಬೇಡ್ಕರ್ರನ್ನು ಅಪಮಾನಿಸಿದಾಗ ದೇಶ ಸಿಡಿದೇಳದಿರುತ್ತದಾ? ಅಷ್ಟಕ್ಕೂ ಅಂಬೇಡ್ಕರ್ ಈ ದೇಶದಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನವನ್ನು ಕೊಟ್ಟು ಹಿಂದುಳಿದ ಜನ ವಿಭಾಗವನ್ನು ನರಕ ಸದೃಶ್ಯ ಜೀವನದಿಂದ ಮೇಲೆತ್ತಿದ ಮಹಾತ್ಮರಾಗಿದ್ದಾರೆ. ಈ ದೇಶವನ್ನು ಆವರಿಸಿಕೊಂಡಿದ್ದ ಅಸ್ಪೃಶ್ಯತೆಯನ್ನು ಮೆಟ್ಟಿ ನಿಂತು ದಲಿತರು ಹಿಂದುಳಿದವರು ಗೌರವದಿಂದ ಬದುಕುವಂತೆ ಮಾಡಲು ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ವ್ಯಕ್ತಿ ಆಗಿದ್ದಾರೆ. ಅಂದರೆ ಅವರ ಸಂವಿಧಾನದಿಂದಾಗಿ ಹಿಂದುಳಿದವರಿಗೆ ಎಸ್ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ಬಂತು. ಐಎಎಸ್ ಐಪಿಎಸ್ ಜಡ್ಜ್ ಗಳು, ಪ್ರೊಫೆಸರ್ಗಳಿಗೂ ವೈದ್ಯರೂ ದೊಡ್ಡ ದೊಡ್ಡ ಅಧಿಕಾರಿಗಳಾಗುವ ಅವಕಾಶವನ್ನು ತೆರೆದು ಕೊಟ್ಟಿತು. ಅಂತಹ ಮಹಾನ್ ಪ್ರತಿಭೆಯನ್ನು ಅಮಿತ್ ಶಾ ಅಪಮಾನಿಸಿದ್ದು. ಹೀಗೆ ಅಪಮಾನಿಸಿ ಅವರು ಸಂವಿಧಾನ ಪ್ರಿಯರನ್ನು ಖಂಡಿತ ಕೆಣಕಿದ್ದಾರೆ. ಆದ್ದರಿಂದ ಇಂದು ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು, ಸಂಘಟನೆಗಳು ಮಾಡುತ್ತಿರುವ ಪ್ರತಿಭಟನೆಗಳಿಗೆ ಅರ್ಥವಿದೆ. ಆದ್ದರಿಂದ.
ಇದೇ ವೇಳೆ ಮೋಹನ್ ಭಾಗವತ್ರ ಹೇಳಿಕೆಯನ್ನು ಪರಿಶೀಲಿಸಿ ನೋಡಿ. ಅವರು ಪುಣೆಯ ವಿಹಿಂಪದಲ್ಲಿ ಆ ಸಭೆಯಲ್ಲೇ ಈ ಮಾತನ್ನೂ ಹೇಳಿದ್ದಾರೆ. ಸಮಾಜದಲ್ಲಿ ಭಿನ್ನಮತ ಪರಿಹರಿಸಲು ಹಳೆಯ ಸಂಸ್ಕಾರದತ್ತ ಮರಳಬೇಕು. ಆಕ್ರಮಣಾತ್ಮಕ ಬಲಪ್ರಯೋಗ ಇತರರ ದೇವರನ್ನು ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ. ಇಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರೆಲ್ಲ ಒಂದೇ. ನಾವೆಲ್ಲ ಒಂದೇ. ಎಲ್ಲರಿಗೂ ಅವರದೇ ರೀತಿಯಲ್ಲಿ ಆರಾಧನೆ ನಡೆಸಬಹುದು ಎಂದಿದ್ದಾರೆ.
ಮೋಹನ್ ಭಾಗವತ್ ಹೇಳುವ ಪ್ರಕಾರ ಸಮಾಜದಲ್ಲಿ ಸೃಷ್ಟಿಯಾಗಿರುವ ಭಿನ್ನಮತ ಹೋಗಲು ಹಳೆಯ ಸಂಸ್ಕೃತಿಗೆ ಮರಳಬೇಕೆಂದಾಗಿದೆ. ಆದರೆ ಭಾರತದಲ್ಲಿದ್ದ ಆ ಹಳೆಯ ಸಂಸ್ಕೃತಿ ಸಂಸ್ಕಾರಗಳು ಯಾವುವು? ವರ್ಣಾಶ್ರಮದ್ದು. ಸವರ್ಣೀಯ ಮೇಲ್ಮೆಯದ್ದು, ಅಸ್ಪೃಶ್ಯತಾವಾದದ್ದು.
ಅಂಬೇಡ್ಕರ್ ಸಂವಿಧಾನ ಇದರಿಂದ ಭಾರತವನ್ನು ಮುಕ್ತಗೊಳಿಸಿತು. ಈಗ ಮತ್ತೆ ಅದೇ ಭಾಗವತ್ರಂತಹವರಿಗೆ ಅದುವೇ ಸಮಸ್ಯೆ ಪರಿಹಾರದ ಟೂಲ್ ಆಗುತ್ತಿದೆ. ನೋಡಿ ಭಾರತಕ್ಕೆ ಬಹುತೇಕ ಮಧ್ಯ ಯುಗದಲ್ಲಿ ಇಸ್ಲಾಂ ಬಂತು. ಆಳು ಮತ್ತು ಅರಸ ಸಮಾನರು ಎಂದು ಪ್ರತಿಪಾದಿಸಿತು. ಆನಂತರವೇ ಭಾರತದ ಸಮಾಜದಲ್ಲಿ ಸರ್ವ ಸಮಾನತೆಯ ವಾದಗಳು ಹುಟ್ಟಿಬೆಳೆದು ಹೆಮ್ಮರವಾಗಿದ್ದು ಇಂದು ಅದೇ ಹಿಂದುಳಿದ ವರ್ಗದವರನ್ನು ಹಿಡಿದುಕೊಂಡು ಎಲ್ಲರನ್ನಲ್ಲ ಕೆಲವರ ಮೂಲಕ ಮುಸ್ಲಿಮರನ್ನು ದಮನಿಸುವ ಕೆಲಸವೂ ಆಗುತ್ತಿದೆ. ಮಸೀದಿಯಲ್ಲಿ ಮಂದಿರ ಹುಡುಕುವ ಕೆಲಸವೂ ಆಗುತ್ತಿದೆ. ಇರಲಿ ಬಿಡಿ. ಖಂಡಿತ,
ಹೌದು, ಭಾಗವತ್ರ ಆ ಹಿಂದಿನ ಸಂಸ್ಕೃತಿಯೆಂಬ ವಾದದಲ್ಲಿ ಮುಸ್ಲಿಮರು ಮತ್ತು ಹಿಂದುಳಿದವರ ವಿರುದ್ಧ ಮಾರಕ ಸಿಡಿಗುಂಡಿದೆ. ಬಿಜೆಪಿ ಸಹಿತ ಕೋಮುವಾದಿಗಳು ಅದನ್ನೇ ಪ್ರತಿಪಾದಿಸುತ್ತಿರುವುದು. ಇದನ್ನು ಭಾಗವತ್ರು ಬಹಳ ಚೆಂದವಾಗಿ ಭಿನ್ನಮತ ಪರಿಹಾರಕ್ಕೆ ಹಿಂದಿನ ಸವರ್ಣೀಯ ವರ್ಣಾಮಶ್ರಮದ ಪದ್ಧತಿಯೆಡೆಗೆ ಭಾರತವನ್ನು ಎಳೆದೊಯ್ಯುತ್ತಿದ್ದಾರೆ? ಹೀಗಾದರೆ ಅಂಬೇಡ್ಕರ್ ಸಂವಿಧಾನ ಉಳಿಯುತ್ತಾ ಅಂಬೇಡ್ಕರ್ ಪ್ರತಿಪಾದನೆಗಳು ಉಳಿಯುತ್ತಾ. ಹೋಗ್ಲಿ ಮೀಸಲಾತಿ ಉಳಿಯುತ್ತಾ? ಸಮಾನತೆ ಇರುತ್ತದಾ? ಎಲ್ಲದ್ದಕ್ಕಿಂತ ಮುಖ್ಯವಾಗಿ ಈಗಿರುವಂತೆ ಆಗ ಐಎಎಸ್, ಐಎಫ್ಎಸ್, ಐಪಿಎಸ್, ಅಧಿಕಾರಿಗಳು ಆಗುವುದನ್ನು ಹಿಂದುಳಿದವರು ಕನಸುಕಾಣುವುದು ಬಿಡಿ. ಮೇಲ್ವರ್ಗದ ಚಾವಡಿಯ ಮುಂದೆ ನಿಲ್ಲಲೇ ಸಾಧ್ಯವಿರಲಿಲ್ಲ. ಕೋಮುವಾದಿ ಧ್ರುವೀಕರಣದ ಅಜೆಂಡಕ್ಕೆ ಸಾವಿರ ಮುಖಗಳಿವೆ. ಅದನ್ನು ಗುರುತಿಸುವ ದೂರದೃಷ್ಟಿ ಇರಬೇಕಾಗುತ್ತದೆ ಅಷ್ಟೇ.
ಆದ್ದರಿಂದ ಪ್ರಧಾನಿ ಮೋದಿಯ ಒನ್ ನೇಶನ್ ಒನ್ ಇಲೆಕ್ಷನ್ ಸಹಿತ ಎಲ್ಲದರ ತಿರುಳು ಇಷ್ಟೇ. ಧ್ರುವೀಕರಣ, ಹಳೆ ಸಂಸ್ಕೃತಿ. ಅಧಿಕಾರದ ಬಲಗಳತ್ತ ಸಾಗುವ ಧ್ರುವೀಕರಣಕ್ಕೆ ನಾನಾ ಮುಖಗಳು ಮತ್ತು ವೇಷಭೂಷಣಗಳು ಇವೆಲ್ಲವೂ. ಆದುದರಿಂದ ಒಮ್ಮೆ ಒಬಿಸಿ ಎಂದು ಬಿಂಬಿಸಿಕೊಳ್ಳುವ ಮೋದಿ ಇನ್ನೊಮ್ಮೆ ಅರ್ಚಕನ ಸ್ಥಿತಿಯಲ್ಲಿಯೂ ತಪಸ್ವಿಯ ಸಾಧಕನ ರೀತಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ವಿಷಯ ಬದಲಿಸೋಣ:
ನಾವು ಸ್ವಲ್ಪ ಸ್ವಾತಂತ್ರ್ಯ ಪೂರ್ವ ರಾಜಕೀಯದತ್ತ ಗಮನ ಹರಿಸುವುದಾದರೆ ಕೊನೆಕೊನೆಗೆ ಕಾಂಗ್ರೆಸ್ ಕಟು ಬಲಪಂಥೀಯರ ಹಿಡಿತದಲ್ಲಿತ್ತು. ಮುಸ್ಲಿಮರನ್ನು ಪ್ರತಿನಿಧಿಸುತ್ತಿದ್ದೇವೆ ಎನ್ನುವ ಮುಸ್ಲಿಂ ಲೀಗ್ನ್ನು ಒಪ್ಪುವುದು ಬಿಡಿ ಹತ್ತಿರ ಸುಳಿಯಲೂ ಬಿಡುತ್ತಿರಲಿಲ್ಲ. ಉತ್ತರ ಪ್ರದೇಶದಲ್ಲಿ ಪ್ರಾಂತ್ಯ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧಿಸುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದರೂ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಲೀಗನ್ನು ಸೇರಿಸಲಿಲ್ಲ.
ಕ್ರಿಶಕ 1939ರಲ್ಲಿ ವಿಶ್ವ ಯುದ್ಧ ಶುರುವಾದಾಗ ನಮ್ಮನ್ನು ಕೇಳದೆ ಬ್ರಿಟನ್ ಭಾರತವನ್ನು ಸಹಭಾಗಿಗೊಳಿಸಿದೆ ಎಂದು ವಿರೋಧಿಸಿ ಕಾಂಗ್ರೆಸ್ ತನ್ನ ಪ್ರಾಂತ್ಯ ಸರಕಾರಗಳನ್ನು ರಾಜೀನಾಮೆ ನೀಡಿಸಿತ್ತು. ಕಾಂಗ್ರೆಸ್ ಅನ್ನು ವಿರೋಧಿಸಬೇಕು ಎಂಬ ಕಾರಣಕ್ಕಾಗಿ ಈ ದಿನವನ್ನು ಮುಸ್ಲಿಂ ಲೀಗ್ ವಿಮೋಚನಾ ದಿನವನ್ನು ಆಚರಿಸಿತು. ಯುದ್ಧದಲ್ಲಿ ಬ್ರಿಟಿಷರಿಗೆ ಬೆಂಬಲ ನೀಡಿತ್ತು. ಲೀಗ್ ಕಾಂಗ್ರೆಸ್ ಜಗಳ ಲಾಭವಾದದ್ದು ಬ್ರಿಟಿಷರಿಗೆ. ಇರಲಿ ಇದೇ ವೇಳೆ ಲೀಗ್ಗೆ ಅಂಬೇಡ್ಕರ್ ಮತ್ತು ರಾಮಸ್ವಾಮಿ ನಾಯ್ಕರ್ ಕೂಡ ಬೆಂಬಲ ನೀಡಿದ್ದರು. ಇತ್ತ ಅಂಬೇಡ್ಕರ್ ಮತ್ತು ರಾಮಸ್ವಾಮಿ ನಾಯ್ಕರ್ ಕಾಂಗ್ರೆಸ್ಸಿನ ವರ್ಣಾಶ್ರಮ ಪರ ನಿಲುವಿನ ವಿರುದ್ಧ ಸಿಡಿದಿದ್ದೆದ್ದಿದ್ದರು.
ಇನ್ನು ಈಗಿನ ಕಾಂಗ್ರೆಸ್ಸಿನತ್ತ ದೃಷ್ಟಿ ಹರಿಸಿ ನೋಡಿ. ರಾಹುಲ್ ಗಾಂಧಿ ಒಬಿಸಿ ರಾಜಕೀಯ ಮಾಡುತ್ತಿದ್ದಾರೆ. ಹಿಂದುಳಿದವರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಅಂದು ಇಂತಹದ್ದೊಂದು ಸಾಧ್ಯತೆ ಇತ್ತಾ? ಗಾಂಧೀಜಿಯವರು ಹಿಂದುಳಿದವರ ಪರ ಇದ್ದರೋ? ಇದಲ್ಲ ಮುಖ್ಯ. ಆದರೆ ಅಂಬೇಡ್ಕರ್ ಗಾಂಧಿವಾದವನ್ನು ಒಪ್ಪುತ್ತಿರಲಿಲ್ಲ ಎಂಬುದು ಸತ್ಯ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವಿದೆ ಅಂದಿಗೆ ಇಂದಿನ ಕಾಂಗ್ರೆಸ್ಅನ್ನು ಹೋಲಿಸಬಹುದಾ? ರಾಮದಾಸ್ ಅಟಾವಳೆಯಂತಹ ಅಂಬೇಡ್ಕರ್ವಾದಿಗಳು ಬಿಜೆಪಿ ಜೊತೆ ಕೂತಿದ್ದಾರೆ. ಗಾಂಧೀಜಿಯಾಗಲಿ, ಪಟೇಲ್ ಆಗಲಿ ಬಾಲ ಗಂಗಾಧರ ತಿಲಕ್ ಆಗಲಿ ಈಗ ಕಾಂಗ್ರೆಸ್ಸಿನಲ್ಲಿಲ್ಲ. ಕಾಲ ಕಳೆದಂತೆ ರಾಹುಲ್ ಗಾಂಧಿಯಂತಹ ಜಾತಿ ಜನಗಣತಿಯನ್ನು ವಾದಿಸುವವರು ಕಾಂಗ್ರೆಸ್ಸಿನಲ್ಲಿ ಬಂದು ಕೂತಿದ್ದಾರೆ. ಸವರ್ಣೀಯ ಪ್ರಭುತ್ವದ ಅರೆಸ್ಸೆಸ್ನ ಹಿಡಿತದಲ್ಲಿರುವ ಬಿಜೆಪಿಯಲ್ಲಿ ಅಂಬೇಡ್ಕರ್ವಾದಿಗಳಾದ ರಾಮದಾಸ ಅಟಾವಳೆಯಂತಹವರು ಕೂತು ಅಧಿಕಾರ ಅನುಭವಿಸುತ್ತಿದ್ದಾರೆ.
ಅಂಬೇಡ್ಕರ್ರನ್ನು ಅಮಿತ್ ಶಾ ಅಪಮಾನಿಸಿದ್ದು ದೇಶದ ಸಂಸತ್ತಿನಲ್ಲಿ. ಇಂದು ಇಡೀ ದೇಶವೇ ಬೊಬ್ಬೆ ಹೊಡೆಯುತ್ತಿದೆ. ರಾಮದಾಸ ಅಟಾವಳೆ ತರದವರು ಎಲ್ಲಿದ್ದಾರೆ. ಯಾವ ಪ್ರತಿಭಟನೆಯಲ್ಲಿಯೂ ಕಾಣಿಸುವುದಿಲ್ಲ. ದಲಿತ ಸುಪ್ರಿಮೊ ಮಾಯಾವತಿ ಅಡ್ಡ ಗೋಡೆಯಲ್ಲಿ ದೀಪವಿಟ್ಟಂತೆ ಮಾತಾಡುತ್ತಿದ್ದಾರೆ. ಹಿಂದುಳಿದ ವರ್ಗದವರು ಖಂಡಿತಾ ಬಿಜೆಪಿಯಲ್ಲಿದ್ದಾರೆ. ಅವರೆಲ್ಲ ಬಿಜೆಪಿ ಸಂಸದರನ್ನು ರಾಹುಲ್ ಗಾಂಧಿ ದೂಡಿ ಹಾಕಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಾ ಪ್ರತಿಭಟಿಸುತ್ತಿದ್ದಾರೆ. ಅಂಬೇಡ್ಕರಿಗಾದ ಅವಮಾನಕ್ಕಿಂತ ರಾಹುಲ್ ಗಾಂಧಿ ಯಾಕೆ ಇವರಿಗೆ ಮುಖ್ಯವಾದರು? ಅಂಬೇಡ್ಕರ್ರ ಸಮಾನತಾ ವಾದಕ್ಕಿಂತ ಹೆಚ್ಚು ಇವರೆಲ್ಲ ಬಿಜೆಪಿ ಹಿಂದುತ್ವ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದ್ದಾರೆಂದು ಹೀಗೂ ಸಾಬೀತಾಗುತ್ತಿದೆ.
ಇನ್ನೊಂದು ವಿಚಾರವನ್ನು ಇಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಬಹುದಾಗಿದೆ. ನೋಡಿ, ಹಿಂದೆ ಕಾಂಗ್ರೆಸ್ಸ್ ನಲ್ಲಿ ಸಕ್ರಿಯವಾಗಿದ್ದ ಒಂದು ವಿಭಾಗ ಹಿಂದುತ್ವ ರಾಷ್ಟ್ರೀಯತೆಯನ್ನೆ ಎತ್ತಿ ಹಿಡಿದಿತ್ತೆಂಬುದು ನಿಮಗೂ ಗೊತ್ತು. ಅಂದರೆ ಅಸ್ಪೃಶ್ಯತಾ ವಾದವೂ ಅದರ ಒಡಳೊಳಗಿತ್ತು. ಅಂಬೇಡ್ಕರ್ ಇದನ್ನು ಬಲವಾಗಿ ವಿರೋಧಿಸುತ್ತಿದ್ದರು. ಸಂಕ್ಷಿಪ್ತದಲ್ಲಿ ಅಂದಿನ ಮುಸ್ಲಿಂ ಲೀಗಿನ ಮಟ್ಟಿಗೆ ಹೇಳುವುದಾದರೆ ಲೀಗಿನವರನ್ನೂ ಭಿನ್ನ ಎನ್ನುವಂತಿಲ್ಲ. ಒಂದು ಹಂತದಲ್ಲಿ ಕವಿ ಅಲ್ಲಾಮಾ ಇಕ್ಬಾಲರು ಮುಸ್ಲಿಂ ಜನಸಾಮಾನ್ಯರನ್ನು ಕಡೆಗಣಿಸುತ್ತಿದೆ ಎಂದು ಲೀಗಿಗೆ ರಾಜೀನಾಮೆಯನ್ನೂ ನೀಡಿರುವುದನ್ನು ಉದಾಹರಣೆ ನೀಡಬಹುದಾಗಿದೆ. ಯಾಕೆಂದರೆ ಮುಸ್ಲಿಂ ಲೀಗ್ನಲ್ಲಿ ಮೊಗಲರ ಮಾಜಿ ಅಧಿಕಾರಿಗಳು, ನವಾಬರು, ಖಾನ್ಗಳೇ ಅಂದು ನಾಯಕರಾಗಿದ್ದದ್ದು. ಅವರಿಗೆ ಅಧಿಕಾರ ಬೇಕಿತ್ತು. ಅಂತಸ್ತು ಬೇಕಿತ್ತು. ಅವರಿಗೆ ದೇಶವನ್ನು ವಿಭಜಿಸಿ ಪಾಕಿಸ್ತಾನ ಮಾಡಿದರೆ ಇವೆಲ್ಲವೂ ಅವರಿಗೆ ಸಿಗುತ್ತಿತ್ತು. ದೇಶ ವಿಭಜನೆಗೆ ಇವರ ಈ ಒಣ ಪ್ರತಿಷ್ಠೆಗಳೇ ಕಾರಣವಾಗಿತ್ತು. ಜಿನ್ನ ಆಗಲಿ ಅದರ ಇತರ ನಾಯಕರಾಗಲಿ ದೇಶವಿಭಜನೆಯಿಂದ ಎಲ್ಲ ಮುಸ್ಲಿಮರು ಒಂದೆಡೆಯಿಂದ ಇನ್ನೊಂದು ಕಡೆಗೆ ಹೊರಟು ಹೋಗಲು ಸಾಧ್ಯವೇ ಎಂದು ಕೂಡ ಯೋಚಿಸಲಿಲ್ಲ ಅವರಿಗೆ ಸಿಕ್ಕ ತುಂಡನ್ನು ತೆಗೆದುಕೊಂಡು ಹೋಗಿ ಪಾಕಿಸ್ತಾನ ಎಂದರು. ಇರಲಿ,
ವಿಷಯಕ್ಕೆ ಬರೋಣ:
ಅಂಬೇಡ್ಕರ್ ಪ್ರತಿಪಾದಿಸಿದ ಜಾತ್ಯತೀತ ಭಾರತದಲ್ಲಿ ಅದೇ ಸಂಸತ್ತಿಗೆ ಸೆನೆಗೋಲು ತರುವಷ್ಟು ಮೋದಿ ಬೆಳೆದು ನಿಂತಿದ್ದಾರೆ. ಸಂವಿಧಾನ ರಕ್ಷಕ ಕೋರ್ಟುಗಳು ತುಟಿಪಿಟಕ್ಕೆನ್ನಲಿಲ್ಲ. ಮುಸ್ಲಿಮರ ಬಾಬರಿ ಮಸೀದಿಯನ್ನು ಹಿಂದೂಗಳಿಗೆ ಕೊಟ್ಟಿತು. ಇಂತಹಲ್ಲಿ ಒನ್ ನ್ಯಾಶನ್ ಒನ್ ಇಲೆಕ್ಷನ್ ಬಂದರೆ ಜನಸಾಮಾನ್ಯರ ಸ್ಥಿತಿ ಮೋಹನ್ ಭಾಗವತ್ ಹೇಳುವ ಹಿಂದಿನ ಸಂಸ್ಕೃತಿಯ ಪುನರಾವರ್ತಣೆ ಸುಲಭವಾಗಿ ಬಿಡುತ್ತದೆ.
ಒಮ್ಮೆಯೇ ಚುನಾವಣೆಯನ್ನು ನಡೆಸಿ ಬಿಜೆಪಿ ಎಂದಲ್ಲ ಯಾವ ಪಕ್ಷಕ್ಕೂ ಭವಿಷ್ಯದಲ್ಲಿ ಇಷ್ಟಾರ್ಥ ಸಿದ್ಧಿಸಿಕೊಳ್ಳಬಹುದು.
ಆದುದರಿಂದ ದೇಶದ ಗಣರಾಜ್ಯ ಮೌಲ್ಯಗಳಿಗೆ ವಿರುದ್ಧವಾಗಿ ಮೋದಿತ್ವದ ಹೇರಿಕೆ ನಡೆಯುತ್ತಿದೆ. ನಿಜಕ್ಕಾದರೆ ಒಂದು ರಾಜ್ಯದಲ್ಲೇ ಹಲವು ಹಂತಗಳ ಚುನಾವಣೆ ಮಾಡಬೇಕಾದ ಅವಸ್ಥೆ ಚುನಾವಣೆ ಆಯೋಗದ್ದು. ಇಂತಿರುವಲ್ಲಿ ಒಮ್ಮೆಲೇ ದೇಶದ ಸಂಸತ್ತಿಗೂ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಸುವುದರ ಮರ್ಮ ಏನು? ಮುಂದಿನ ಪೀಳಿಗೆ ಎಂದೂ ಈ ನಾಡು ಬೇರೆ ಬೇರೆ ಬಾಷೆಗಳನ್ನಾಡುವ ಜಾತಿ ಧರ್ಮ ಜನವಿಭಾಗಗಳ ನಾಡು ಎಂಬುದನ್ನು ಮರೆಯಬೇಕು. ಕೇವಲ ಹಿಂದುತ್ವ, ಹಿಂದಿ ಭಾಷೆ ಇಷ್ಟಕ್ಕೇ ಸೀಮಿತವಾಗಬೇಕು. ವಿವಿಧ ಮನೋಗತಿಯ ಜನರಿರುವವರೆಗೆ ವಿವಿಧ ಭಾಷೆಗಳನ್ನಾಡುವ, ವಿವಿಧ ಜಾತಿಧರ್ಮಗಳ ಜನರಿರುವವರೆಗೆ ಇದು ಅಸಾಧ್ಯವಾದದ್ದೇ. ಈ ಸತ್ಯಕ್ಕೆ ಯಾವ ತತ್ವದವರೂ ಶರಣಾಗಲೇಬೇಕು.
ಹೌದು, ನಮ್ಮ ಕೋರ್ಟು ಸರಿಯಾಗಿ ಕೆಲಸ ನಿರ್ವಹಿಸಿದ್ದರೆ ಮಸೀದಿಗಳಲ್ಲಿ ಮಂದಿರಗಳನ್ನು ಹುಡುಕಲು ಸಾಧ್ಯವಿತ್ತಾ. ಖಂಡಿತ ಇರಲಿಲ್ಲ. ದೇಶದ ಒಗ್ಗಟ್ಟಿಗೆ ಮೋಹನ್ ಭಾಗವತ್ ಪ್ರತಿಪಾದಿಸಿದ ಹಿಂದಿನ ಸಂಸ್ಕೃತಿಯ ಅಗತ್ಯ ಖಂಡಿತ ಇಲ್ಲ. ನೋಡಿ, ನರಸಿಂಹ ರಾವ್ ಸರಕಾರ ಬಾಬರಿ ಮಸೀದಿ ಮತ್ತು ಕಾಶ್ಮೀರದ ವಿಚಾರ ಹೊರತುಪಡಿಸಿ ಎಲ್ಲ ಧಾರ್ಮಿಕ ಕ್ಷೇತ್ರಗಳ ಯಥಾಸ್ಥಿತಿ ಕಾನೂನು ತಂದಿತ್ತು. ಅದರ ಅಡಿಯಲ್ಲಿ ಕೋರ್ಟುಗಳು ಸರಿಯಾಗಿ ವ್ಯವಹರಿಸಿದ್ದಿದ್ದರೆ ಯಾರಿಗೂ ಸಮಸ್ಯೆ ಸೃಷ್ಟಿಸಲು ಸಾಧ್ಯವಾಗುತ್ತಿರಲಿಲ್ಲ. ಚೀಫ್ ಜಸ್ಟಿಸ್ ಆಗಿ ಅಂದು ಚಂದ್ರಚೂಡರ ಬದಲು ಈಗಿನ ಸಂಜಯ್ ಖನ್ನ ಇರುತ್ತಿದ್ದರೆ ಮಥುರಾ ವಾರಣಾಸಿಯ ಮಸೀದಿಗಳ ಸರ್ವೆ ಆಗುತ್ತಿರಲಿಲ್ಲ. ಕೋರ್ಟುಗಳು ನ್ಯಾಯವನ್ನು ನಿರ್ಲಕ್ಷ್ಯ ಮಾಡುವುದನ್ನು ನಿಲ್ಲಿಸಬೇಕು.
ಆಕ್ರಮಣಕಾರಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ ಭಾಗವತ್ರು ರಾಗ ಬದಲಿಸಿದ್ದಾರೆ ಅಷ್ಟೇ. ಅದಕ್ಕೆ ಚೀಫ್ ಜಸ್ಟಿಸ್ ಮಸೀದಿಯಲ್ಲಿ ಮಂದಿರ ಹುಡುಕುವ ಪ್ರವೃತ್ತಿಯನ್ನು ಮಧ್ಯಂತರ ಆದೇಶ ನೀಡಿ ತಡೆಹಿಡಿದದ್ದು ಕಾರಣವೂ ಆಗಿರಬಹುದು. ಹಾಗೆಯೇ ಅಂಬೇಡ್ಕರ್ ವಿಚಾರಧಾರೆ ಎದ್ದು ನಿಲ್ಲಬೇಕು. ಅಂಬೇಡ್ಕರ್ರಿಗೆ ನಡೆದಿರುವ ಅಪಮಾನವನ್ನು ತಮಗೇ ಆದ ಅಪಮಾನವೆಂದು ಜನರು ತಿಳಿದುಕೊಳ್ಳುವುದರಲ್ಲಿ ಅರ್ಥವಿದೆ. ಯಾಕೆಂದರೆ ಅವರು ಸವರ್ಣೀಯ ದಬ್ಬಾಳಿಕೆಯಿಂದ ಮುಕ್ತಿ ತಂದು ಕೊಟ್ಟಿದ್ದಾರೆ. ಸ್ವತಂತ್ರ ಭಾರತದಲ್ಲಿ ಅದು ಅವರಿಗೆ ಬದುಕು ಕೊಟ್ಟಿದೆ. ಅಂಬೇಡ್ಕರ್ ಸಂವಿಧಾನ ಅಂತಹದ್ದು. ಅದನ್ನು ದೇಶದ ಸಂವಿಧಾನವಾಗಿ ಅಮಿತ್ ಶಾರಂತಹವರ ಕೈಯಿಂದ ಸುರಕ್ಷಿತವಾಗಿ ಉಳಿಸುವ ಜವಾಬ್ದಾರಿ ದೇಶದ ಮಹಾನ್ ಜನತೆಯದ್ದು.












