ಪಾಟ್ನ,ಮೇ 18: ಲಾಲು ಪ್ರಸಾದ್ ಯಾದವ್ರ ಪತ್ನಿ ರಾಬರಿ ದೇವಿಯವರ ಮನೆಯಲ್ಲಿ ಸಿಆರ್ಪಿಎಫ್ ಜವಾನ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರ್ವಿಸ್ ರಿವಾಲ್ವರ್ನಿಂದ ಈತ ಸ್ವತಃ ಗುಂಡಿಕ್ಕಿಕೊಂಡಿದ್ದಾನೆ. ಶುಕ್ರವಾರ ಸಂಜೆ ಘಟನೆ ನಡೆದಿದ್ದು ಗಿರಿಯಪ್ಪ ಎನ್ನುವವರು ಆತ್ಮಹತ್ಯೆ ಮಾಡಿಕೊಂಡರೆಂದು ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಘಟನೆಯಲ್ಲಿ ವಿವರವಾದ ತನಿಖೆ ಆರಂಭಿಸಿದ್ದೆವೆಂದು ಪೊಲೀಸರು ತಿಳಿಸಿದರು. ಘಟನೆ ನಡೆದಾಗ ರಾಬರಿ ದೇವಿ ಮತ್ತು ಅವರ ಕುಟುಂಬ ಮನೆಯಲ್ಲಿತ್ತೇ ಎನ್ನುವುದು ಖಚಿತವಾಗಿಲ್ಲ. ಪಾಟ್ನ ನಗರದ ವಿಧಾನಸಭೆಯ ಸಮೀಪದಲ್ಲಿ ರಾಬರಿ ದೇವಿಯವರ ವಸತಿಯಿದೆ.












