ಗೋಡ್ಸೆ ಗಾಂಧಿಯನ್ನು ಕೊಂದರೆ, ಪ್ರಜ್ಞಾ ಸಿಂಗ್ ಗಾಂಧಿಯ ಆತ್ಮವನ್ನು ಕೊಂದರು- ಕೈಲಾಶ್ ಸತ್ಯಾರ್ಥಿ

0
610

ಹೊಸದಿಲ್ಲಿ,ಮೇ 18: ಬಿಜೆಪಿ ನಾಯಕಿ ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಮಕ್ಕಳ ಹಕ್ಕುಗಳ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಕಟುವಾದ ಟೀಕೆ ಮಾಡಿದ್ದಾರೆ. ‘ಮಹಾತ್ಮ ಗಾಂಧಿಯನ್ನು ಕೊಂದ ನಾಥುರಾಂ ಗೋಡ್ಸೆ ದೇಶಭಕ್ತ’ ಎಂಬ ಪ್ರಜ್ಞಾ ಸಿಂಗ್‍ರ ಹೇಳಿಕೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ಪ್ರಜ್ಞಾರಂತಹವರು ಭಾರತದ ಆತ್ಮವನ್ನು ಕೊಲ್ಲುತ್ತಾರೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಟ್ವೀಟ್ ಮಾಡಿದರು.

“ಗೋಡ್ಸೆ, ಗಾಂಧೀಜಿಯ ಶರೀರವನ್ನು ಕೊಂದರೆ; ಪ್ರಜ್ಞಾರಂತಹವರು ಗಾಂಧಿಯ ಆತ್ಮವನ್ನು ಕೊಂದರು. ಜತೆಗೆ ಅಹಿಂಸೆಯನ್ನು , ಶಾಂತಿ, ಸಮಾಧಾನವನ್ನು ವಧಿಸಿದರು.ತಮ್ಮ ಸಣ್ಣ ಲಾಭಕ್ಕಾಗಿ ಇಂತಹ ಕೆಲಸಗಳನ್ನು ಮಾಡುವುದನ್ನು ಬಿಜೆಪಿ ನಾಯಕರು ತೊರೆಯಬೇಕು. ಇಂತಹವರನ್ನು ಪಾರ್ಟಿಯಿಂದ ತುರ್ತಾಗಿ ವಜಾಗೊಳಿಸಿ ರಾಜಧರ್ಮವನ್ನು ಪಾಲಿಸಬೇಕೆಂದು” ಸತ್ಯಾರ್ಥಿ ಟ್ವೀಟ್ ಮಾಡಿದರು. ಸ್ವತಂತ್ರ ಭಾರತದ ಮೊದಲ ತೀವ್ರವಾದಿ ಗೋಡ್ಸೆ ಎಂದು ಕಮಲ್ ಹಾಸನ್ ಹೇಳಿದ ಬೆನ್ನಿಗೆ ಪ್ರಜ್ಞಾ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದರು.