ವಿವಿಪ್ಯಾಟ್‌ಗಳನ್ನು ಮೊದಲು ಎಣಿಸಲಾಗದು: ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

0
684

ಹೊಸದಿಲ್ಲಿ,ಮೇ 22: ವಿವಿಪ್ಯಾಟ್ ಸ್ಲಿಪ್‍ಗಳನ್ನು ಮೊದಲು ಎಣಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. ಮತ ಯಂತ್ರಗಳ ಮತಗಳನ್ನು ಮೊದಲು ಎಣಿಸುವುದು ಮತ್ತು ವಿವಿಪ್ಯಾಟ್‌ಗಳ ಸ್ಲಿಪ್‍ಗಳನ್ನು ಮೊದಲು ಎಣಿಸಿದರೆ ಫಲಿತಾಂಶ ಪ್ರಕಟವಾಗಲು ತಡವಾಗಬಹುದು ಎಂದು ಆಯೋಗ ಹೇಳಿದೆ.

22 ಪ್ರತಿಪಕ್ಷ ಪಾರ್ಟಿ ನಾಯಕರು ಚುನಾವಣಾ ಆಯೋಗವನ್ನು ಭೇಟಿಯಾಗಿದ್ದು ವಿವಿಪ್ಯಾಟ್ ಮೊದಲು ಎಣಿಸಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಅಶೋಕ್ ಗೆಹ್ಲೋಟ್, ಅಭಿಶೇಕ್ ಮನುಸಿಂಘ್ವಿ, ಟಿಡಿಪಿ ನಾಯಕ ಚಂದ್ರಬಾಬು ನಾಯಿಡು, ಬಿಎಸ್‍ಪಿ ನಾಯಕ ಸತೀಶ್ ಚಂದ್ರ ಮಿಶ್ರ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ.ರಾಜ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ತೃಣಮೂಲ್ ನಾಯಕ ಡೆರಿಕ್ ಒಬ್ರಾಯಿನ್, ಡಿಎಂಕೆಯ ಕನಿಮೊಳಿ, ಆರ್‍ಜೆಡಿಯಿಂದ ಮನೋಜ್ ಝಾ, ಎನ್‍ಸಿಪಿ ನಾಯಕ ಮನೋಜ್ ಮೆಮನ್ ಚುನಾವಣಾ ಆಯೋಗವನ್ನು ಕಳೆದ ದಿವಸ ಭೇಟಿಯಾಗಿದ್ದರು.