ತಿರುವನಂತಪುರಂ,ಮೇ 22: ಕೇರಳದಲ್ಲಿ ಮತ ಎಣಿಕೆಯ ಸಿದ್ಧತೆ ಸಂಪೂರ್ಣ ಗೊಂಡಿದ್ದು ಮತ ಎಣಿಕೆ ವೇಳೆ ಮತ ಯಂತ್ರ ಮತ್ತು ವಿವಿಪ್ಯಾಟಗಳಲ್ಲಿ ಪರಸ್ಪರ ಮತಗಳ ಸಂಖ್ಯೆ ಹೊಂದಿಕೆಯಾಗದಿದ್ದರೆ ವಿವಿಪ್ಯಾಟ್ಗಳ ಮತಗಳನ್ನು ಪರಿಗಣಿಸಲಾಗುವುದು ಎಂದು ಕೇರಳ ಮುಖ್ಯ ಚುನಾವನಾಧಿಕಾರಿ ಟೀಕಾರಾಮ್ ಮೀಣ ಹೇಳಿದ್ದಾರೆ. ಇದರಲ್ಲಿ ಗೊಂದಲಕ್ಕೆ ಆಸ್ಪದವಿಲ್ಲ. ವಿವಿಪ್ಯಾಟ್ ಫಲಿತಾಂಶವನ್ನು ಅಭ್ಯರ್ಥಿಗಳು ಅಂಗೀಕರಿಸಬೇಕೆಂದು ಟೀಕಾರಾಮ್ ಮೀಣ ಹೇಳಿದರು.
ಮತ ಎಣಿಕೆಗೆ ವೇಗ ತರುವ ಉದ್ದೇಶದಿಂದ 140 ಅಡಿಶನಲ್ ರಿಟರ್ನಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತದಾನ ದಿವಸ ಮೊಕ್ ಪೊಲಿಂಗ್ ನಡೆಸಲಾದ ಯಂತ್ರಗಳಲ್ಲಿ ಏಳರ ಡಾಟ ತೆಗೆಯಲಾಗಿಲ್ಲ. ಈ ಮತಯಂತ್ರಗಳ ಮೋಕ್ ಪೊಲೀಂಗ್ ಡಾಟ ತೆಗೆದ ಬಳಿಕ ಕೊನೆಯದಾಗಿ ಎಣಿಸಲಾಗುವುದು ಎಂದು ಮೀಣ ಹೇಳಿದರು. ವಿವಿಪ್ಯಾಟ್ ಎಣಿಕೆ ಮುಗಿಸಿ ಸಂಜೆ ಏಳು ಗಂಟೆಗೆ ಅಧಿಕೃತ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.












