26 ಪರಗಣ,ಮೇ 25: ಪಶ್ಚಿಮಬಂಗಾಳದ ಕಾಕಿನಾಡದಲ್ಲಿ ಜಾಮಾ ಮಸೀದಿಗೆ ತರಾವೀಹ್ ನಮಾಝ್ ವೇಳೆ ದುಷ್ಕರ್ಮಿಗಳು ಬಾಂಬೆಸೆದ ಘಟನೆ ನಡೆದಿದೆ. ನಂತರ ಇಲ್ಲಿನ ಮುಸ್ಲಿಮರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ತರವಾವೀಹ್ ನಮಾಝ್ ನಡೆಯುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಮಸೀದಿಗೆ ಕಚ್ಚಾ ನಾಡ ಬಾಂಬೆಸೆದು ಓಡಿ ಹೋಗಿದ್ದಾರೆ.
ಮಸೀದಿಯ ಒಳಗೆ ಅದು ಹೋಗಿಲ್ಲ. ಆದ್ದರಿಂದ ಯಾರಿಗೂ ಗಾಯಗಳಾಗದೆ ಎಲ್ಲರೂ ಪರಾರಾಗಿದ್ದಾರೆ. ಬಾಂಬೆಸೆಯುವ ವೇಳೆ ಮಸೀದಿಯೊಳಗೆ ತರಾವೀಹ್ ನಮಾಝ್ ನಡೆಯುತ್ತಿತ್ತು. ಕೂಡಲೇ ಮಸೀದಿಯ ಆಡಳಿತ ಪೊಲೀಸರಿಗೆ ಫೋನ್ ಮಾಡಿದರು. ತಕ್ಷಣ ಧಾವಿಸಿ ಬಂದ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಚುನಾವಣೆಯ ಕಾರಣದಿಂದ ಭುಗಿಲೆದ್ದ ಹಿಂಸೆ ಇನ್ನೂ ತಣ್ಣಗಾಗಿಲ್ಲ. ಪಶ್ಚಿಮಬಂಗಾಳದಲ್ಲಿ ಬಿಜೆಪಿ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದು ಈ ಬಾರಿ ಲೋಕಸಭೆಯ 18 ಸ್ಥಾನಗಳನ್ನು ಗೆದ್ದಿದೆ.












