ದೇಶದ್ರೋಹಿಗಳಿಗೆ ಜನರ ವಿಶ್ವಾಸ ಗೆಲ್ಲಲು ಸಾಧ್ಯವಿಲ್ಲ-ಬಿಜೆಪಿ ನಾಯಕ

0
666

ಗೊರಕ್‍ಪುರ,ಮೇ 25: ದೇಶ ವಿಭಜಿಸುವ ಮಾತಾಡುವವರಿಗೆ ಜನರ ವಿಶ್ವಾಸ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ ರವಿಕಿಶನ್ ಹೇಳಿದರು. ಬಿಹಾರದ ಬೆಗುಸರಾಯಿಯಲ್ಲಿ ಸ್ಪರ್ಧಿಸಿದ ಸಿಪಿಐ ಅಭ್ಯರ್ಥಿ ಕನಯ್ಯಾ ಕುಮಾರ್‌ರನ್ನು ವ್ಯಂಗ್ಯವಾಗಿ ಅವರು ಈ ರೀತಿ ಛೇಡಿಸಿದ್ದಾರೆ.ದೇಶ್‍ ಕೆ ಟುಕ್‍ಡೆ ಟುಕ್‍ಡೆ ಎಂದು ಹೇಳಿದವರಿಗೆ ವಿಶ್ವಾಸ ಗಳಿಸಲು ಆಗುವುದಿಲ್ಲ. ದೇಶ ವಿರೋಧಿಯಾಗಿ ದೇಶದ ವಿರುದ್ಧ ಮಾತಾಡಿದಾಗ ಮತ್ತು ಸರಕಾರವನ್ನು ಟೀಕಿಸಿದಾಗ ನಮಗೆ ಗೆಲ್ಲಲು ಸಾಧ್ಯವಿಲ್ಲ ಎಂದು ರವಿಕಿಶನ್ ಹೇಳಿದರು. ಉತ್ತರ ಪ್ರದೇಶ ಗೊರಕ್‍ಪುರದಲ್ಲಿ ರವಿಕಿಶನ್ ಗೆದ್ದಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್‍ನಲ್ಲಿದ್ದ ಅವರು ಎರಡು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಗುಸರಾಯ್‍ನಲ್ಲಿ ಕನಯ್ಯಾರಿಗೆ 2.7 ಲಕ್ಷ ಮತಗಳು ಬಿದ್ದರೆ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್‍ರಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳು ಬಿದ್ದಿವೆ.