ರಮಝಾನಿನ ಮೊದಲ 10 ದಿವಸಗಳಲ್ಲಿ ಮಸ್ಜಿದುನ್ನಬವಿಗೆ 97 ಲಕ್ಷ ಮಂದಿ ಭೇಟಿ

0
294

ಸನ್ಮಾರ್ಗ ವಾರ್ತೆ

ರಮಝಾನಿನ ಮೊದಲ 10 ದಿವಸಗಳಲ್ಲಿ ಮದೀನಾದ ಮಸ್ಜಿದು ನ್ನಬವಿಗೆ ಒಟ್ಟು 97 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಮಕ್ಕಾದ ಮಸ್ಜಿದುಲ್ ಹರಾಮ್ ಗೆ ಪ್ರತಿದಿನ 10 ಲಕ್ಷಕ್ಕಿಂತಲೂ ಅಧಿಕ ಮಂದಿ ಭೇಟಿ ನೀಡುತ್ತಿದ್ದಾರೆ ಎಂದೂ ವರದಿಯಾಗಿದೆ.

ಜಿದ್ದ ಮದೀನಾ ತಾಯಿಫ್ ಜಿಸಾನ್ ಮುಂತಾದ ಕಡೆಗಳಿಂದ ಮಕ್ಕಾದ ಮಸ್ಜಿದುಲ್ ಹರಾಂಗೆ ಬರುವವರಿಗೆ ಗಡಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಇಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡಿ ಉಮ್ರ ಯಾತ್ರಿಕರೂ ಬರಬೇಕಾಗಿದೆ. ಯಾತ್ರಿಕರ ನೆರವಿಗಾಗಿ 11 ಸಾವಿರಕ್ಕಿಂತಲೂ ಅಧಿಕ ಸೇವಕರನ್ನು ನೇಮಿಸಲಾಗಿದೆ ಎಂದು ಮಕ್ಕಾದ ಹರಮ್ ನಿಂದ ಬಿಡುಗಡೆಗೊಳಿಸಲಾದ ವರದಿಯಲ್ಲಿ ತಿಳಿಸಲಾಗಿದೆ.