ಹಸಿವು ತಡೆಯಲಾಗುತ್ತಿಲ್ಲ ಎಂದು ಪತ್ನಿ ಕರೆ ಮಾಡಿ ತಿಳಿಸಿದ್ದಳು…

0
807

✍️ ರೀಮ್ ಅಲ್ ಹದ್ದಾದ್

ವಿಶ್ವಸಂಸ್ಥೆಯ ವರದಿಯ ಪ್ರಕಾರ 2019 ಮತ್ತು 2022ರಲ್ಲಿ ವಿಶ್ವದಲ್ಲಿ ಕೊಲ್ಲಲ್ಪಟ್ಟ ಮಕ್ಕಳು 12,193. ಆದರೆ 2023 ಅಕ್ಟೋಬರ್‌ರಿಂದ 2024 ಫೆಬ್ರವರಿ ವರದಿಯವರೆಗೆ ಗಾಝಾದಲ್ಲಿ 12,300ಕ್ಕಿಂತಲೂ ಅಧಿಕ ಮಕ್ಕಳ ಹತ್ಯೆ ನಡೆಸಲಾಗಿದೆ. ವಿಶ್ವಸಂಸ್ಥೆ ನಿರಾಶ್ರಿತ ಏಜೆನ್ಸಿ ಕಮಿಶನರ್- ಜನರಲ್ ಫಿಲಿಪ್ ಹೇಳುವಂತೆ: “ಇದು ಮುಗ್ಧ ಮಕ್ಕಳ ಮೇಲಿನ ಯುದ್ಧವಾಗಿದೆ. ಅವರ ಬಾಲ್ಯ ಮತ್ತು ಭವಿಷ್ಯದ ವಿರುದ್ಧದ ಯುದ್ಧ.”

ಸಮಾಜ ಸೇವಕ ಖಾಲಿದ್ ನಬ್‌ಹಾನ್ ತನ್ನ ಮೂರು ವರ್ಷದ ಮೊಮ್ಮಗಳು ರೀಮ್‌ಳ ಕುರಿತು ಹೇಳಿದ ಮಾತುಗಳು ವೈರಲಾಗಿತ್ತು. ರೀಮ್ ಮರಣ ಹೊಂದಿದ ಬಳಿಕ ನಿರಾಶ್ರಿತರಾದ ನಬ್‌ಹಾನ್ ವಸತಿರಹಿತರಾದ ಸಹಜೀವಿಗಳಿಗೆ ಸಹಾಯ ಮಾಡುವ ದೃಶ್ಯಗಳೂ ಕಂಡು ಬಂದಿದ್ದವು. ಕೊನೆಗೆ ಅವರನ್ನು ಕೂಡಾ ಕೊಲ್ಲಲಾಯಿತು.

ಗಾಝಾದಲ್ಲಿ ತೂಫಾನುಲ್ ಅಕ್ಸಾದ ಬಳಿಕ ಮಕ್ಕಳು, ಮೊಮ್ಮಕ್ಕಳನ್ನು ಕಳೆದು ಕೊಂಡ ಅಸಂಖ್ಯಾತ ಹೆತ್ತವರಲ್ಲಿ ನಬಾನ್ ಒಬ್ಬರು ಮಾತ್ರ.
2023ರ ಅಕ್ಟೋಬರ್ 24ರ ಬೆಳಗ್ಗಿನ ಹೊತ್ತು. ದಕ್ಷಿಣ ಗಾಝಾದ ಮೂರು ಅಂತಸ್ತಿನ ಕಟ್ಟಡದಲ್ಲಿ 40 ವರ್ಷದ ಅಹ್ಮದ್ ತಮ್ಮ ಪತ್ನಿ ಮತ್ತು ಮೂರು ಮಕ್ಕಳೊಂದಿಗಿದ್ದರು. ಸುಪರ್ ಮಾರ್ಕೆಟ್‌ಗೆ ಹೋಗಿ ಗೋಧಿ ಹುಡಿ ಲಭ್ಯವಿಲ್ಲದ್ದ ರಿಂದ ಬಿಸ್ಕೀತ್ ಖರೀದಿಸಿ ತಂದು 13 ವರ್ಷದ ಹಿರಿಯ ಮಗ ಅಬ್ದುಲ್ಲಾನೊಂದಿಗೆ ಮಾತನಾಡುತ್ತಿದ್ದರು. ಬಳಿಕ ಸಮೀಪದ ಶಾಲೆಯಲ್ಲಿ ಚಾರ್ಜ್ಗಿರಿಸಿದ ಮೊಬೈಲ್ ತರುತ್ತೇನೆಂದು ಹೇಳಿ ಹೋದ. ಇದು ತಂದೆಯೊAದಿಗಿನ ಅವನ ಕೊನೆಯ ಸಂಭಾಷಣೆಯಾಗಿತ್ತು. ತಟ್ಟನೆ ಎಲ್ಲೆಡೆ ಧೂಳುಮಯವಾಯಿತು. ಇಸ್ರೇಲ್‌ನ ಬಾಂಬರ್ ವಿಮಾನಗಳು ಬಾಂಬ್ ಸುರಿಸಿತ್ತು.

ಇನ್ನೋರ್ವ ಮಗ ಹಮ್ದ್, ಮಗಳು ಬತೂಲ್ ನಾನು ಎಲ್ಲರೂ ಅವಶೇಷಗಳಡಿಯಲ್ಲಿ ಸಿಲುಕಿದ್ದೇವೆ. ನಮ್ಮನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅವಶೇಷಗಳಡಿಯಲ್ಲಿ ಸಿಲುಕಿರಬಹುದಾದ ಅಬ್ದುಲ್ಲಾನನ್ನು ನೆನೆದು ನಡುಗುತ್ತಿದೆ. ಬಾಂಬ್‌ನಿಂದ ಇಬ್ಬರು ಅತ್ತೆಯಂದಿರು, ಬಂಧು, ಅಮ್ಮ ಎಲ್ಲರೂ ಸಾವನ್ನಪ್ಪಿದ್ದಾರೆಂದು ತಿಳಿದು ಬಂತು…

ಗಂಭೀರ ಗಾಯಗೊಂಡಿದ್ದ ಹಿರಿಮಗ ಅಬ್ದು ಮರುದಿನ ಮರಣ ಹೊಂದಿದ. ಗಂಭೀರ ಗಾಯದಿಂದ ಅಲುಗಾಡಲೂ ಸಾಧ್ಯವಿಲ್ಲದ ಅಹ್ಮದ್ ಮಗನ ಭೌತಿಕ ಶರೀರ ನೋಡಲು ಒಪ್ಪಲಿಲ್ಲ. ಭಿನ್ನ ಭಿನ್ನವಾಗಿರುವ ಆ ದೇಹವನ್ನು ನೋಡಲು ಮನಸ್ಸು ಒಪ್ಪುವುದಿಲ್ಲವೆಂದೂ ಹಿಂದಿನ ಆತನ ಸುಂದರ ಮುಖವೇ ನನ್ನ ಮನದಲ್ಲಿರಲಿ ಎಂದು ಹೇಳಿದರು. ಹಿಂಸೆ ದೌರ್ಜನ್ಯ ತುಂಬಿರುವ ಈ ಲೋಕದಲ್ಲಿ ನಿನ್ನಂಥ ಹೂ ಮನಸ್ಸಿಗೆ ಸಾಧ್ಯವಾಗದೆಂದು ತಿಳಿದು ದೇವನು ನಿನ್ನನ್ನು ಶಾಂತಿ, ಸಮಾಧಾನ ತುಂಬಿದ ಲೋಕಕ್ಕೆ ಕರೆಸಿದ್ದಾನೆ. ಅಲ್ಲಿ ಭಯ, ನೋವು ಏನೂ ಇಲ್ಲವಲ್ಲಾ. ನಿನ್ನೊಂದಿಗೆ ಕಾರುಣ್ಯವಿರುವ ಅಲ್ಲಾಹನ ತೀರ್ಮಾನವನ್ನು ನಾನು ಒಪ್ಪುತ್ತೇನೆ” ಎಂದರು ಆ ತಂದೆ.

28ರ ಹರೆಯದ ಇಬ್ತಿಸಾಮ ಹೇಳುತ್ತಾರೆ, ನನ್ನ ಎಲ್ಲಾ ಮಕ್ಕಳನ್ನು ಕೊಂದು ಮುಗಿಸಿದ್ದಾರೆ. ನನ್ನ ಕರುಳ ಕುಡಿಗಳಾದ ನಾಲ್ಕು ವಯಸ್ಸಿನ ನೂಹ ಮತ್ತು ಒಂದೂವರೆ ವಯಸ್ಸಿನ ಕಂದಮ್ಮ ಆಮಿರ್ ನನ್ನು ಕೊಲ್ಲಲಾಗಿದೆ.

ಅಕ್ಟೋಬರ್ 27, 2023 ರಂದು ಇಸ್ರೇಲಿ ಬಾಂಬರ್‌ಗಳು, ಗಾಝಾದಲ್ಲಿರುವ ಇಬ್ತಿಸಾಮತ್‌ರ ಕುಟುಂಬ ವಾಸವಿರುವ ಮನೆಯನ್ನು ಧ್ವಂಸಗೊಳಿಸಿದರು. ಪತಿ ಇಯಾದ್, ಮಕ್ಕಳಾದ ನುಹಾ ಮತ್ತು ಆಮಿರ್, ಇಬ್ಬರು ಸೋದರ ಮಾವಂದಿರು, ಸೋದರ ಸಂಬಂಧಿ ಮತ್ತು ಅವರ ಇಬ್ಬರು ಮಕ್ಕಳು… ಹೀಗೆ ಅನೇಕ ಜೀವ ಬಲಿಯಾದವು. ಇಬ್ತಿಸಾಮ್‌ರು ಗಂಭೀರವಾಗಿ ಗಾಯಗೊಂಡಿದ್ದು ತಲೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆದರೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ನನ್ನ ಎಲ್ಲಾ ಕನಸನ್ನು ಕಸಿದುಕೊಂಡು ನನ್ನನ್ನು ಒಂಟಿಯಾಗಿ ಮಾಡಿದೆ. ನನ್ನ ಹಲವು ಕನಸುಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನು ನೋಡುವ ಕನಸು ಹಾಗೇ ಉಳಿಯಿತು. ನನ್ನ ಪ್ರಿಯತಮವನ್ನು ಮಾತ್ರವಲ್ಲ ನನ್ನೆಲ್ಲಾ ಮಕ್ಕಳನ್ನು ಅವರು ಕಸಿದುಕೊಂಡರು. ನೆಮ್ಮದಿಯಿಂದ ಕುಟುಂಬದೊಂದಿಗೆ ಬದುಕುವ ಮೂಲಭೂತ ಹಕ್ಕನ್ನು ಅವರು ಕಸಿದರು.

ಗಾಝಾದಲ್ಲಿ ಆಕ್ರಮಣ ಪಡೆಗಳು ಮತ್ತು ಫೆಲೆಸ್ತೀನಿಯನ್ನರ ನಡುವಿನ ಹೋರಾಟದಲ್ಲಿ ಮಾಧ್ಯಮಗಳ ಪಾತ್ರವು ಅಪ್ರತಿಮವಾಗಿತ್ತು. ಅವರ ಮಾಧ್ಯಮ ಸ್ವಾತಂತ್ರ್ಯ ಮತ್ತು ಭದ್ರತೆಯು ಅಪಾಯದ ಅಂಚಿನಲ್ಲಿತ್ತು. ಮಾಧ್ಯಮಗಳ ಹಾಗೂ ಪತ್ರಕರ್ತರ ಮೇಲೆ ಝಿಯೋನಿಸ್ಟ್ ಪಡೆ ನಡೆಸಿದ ದೌರ್ಜನ್ಯ ಪತ್ರಕರ್ತರ ಸ್ವಾತಂತ್ರ್ಯ ಮತ್ತು ರಕ್ಷಣೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

ಫೆಲೆಸ್ತೀನಿಯನ್ ಪತ್ರಕರ್ತ ಮುಅï‌ತಸಿಮ್ ದಲೂಲ್ ಅವರು ಉತ್ತರ ಗಾಝಾದ ವಿದೇಶೀ ಮಾಧ್ಯಮ ಸಂಸ್ಥೆಗೆ ವಾರ್ತೆ ಸಿದ್ಧಪಡಿಸುತ್ತಿದ್ದರು. ಆಗ ಆಕ್ರಮಿತ ಪಡೆಗಳಿಂದ ಅವರ ಪತ್ನಿ ಮತ್ತು ಮೂರು ವರ್ಷದ ಮಗ ಅಬೂಬಕರ್ ಕೊಲ್ಲಲ್ಪಟ್ಟ ವಿವರ ಲಭಿಸಿತು.

ಹುತಾತ್ಮರಾಗುವುದರಿಂದ ಸ್ವಲ್ಪ ಮೊದಲು ತನಗೆ ಮಗನಿಗೆ ಹಸಿವು ಸಹಿಸಲು ಸಾಧ್ಯವಾಗುತ್ತಿಲ್ಲವೆಂದು ಪತ್ನಿ ಫೋನ್
ಮಾಡಿ ಹೇಳಿದ್ದರು. ಇಸ್ರೇಲ್ ಆಹಾರಕ್ಕೆ ನಿರ್ಬಂಧ ಹೇರಿದ್ದು ಗಾಝಾದ ಮಕ್ಕಳೂ ಸಹಿತ ಎಲ್ಲರನ್ನೂ ಹಸಿವೆಯಿಂದ ಕಂಗೆಡಿಸಿತ್ತು. ಹಸಿವು ತಣಿಯದೆಯೇ ಪತ್ನಿ ಮತ್ತು ಮಗು ಮರಣ ಹೊಂದಿತು.

ದಲೂಲ್ ಅವರ ಹೇಳುವಂತೆ: “ಯಾವುದೇ ತಪ್ಪು ಮಾಡದ, ಅಪರಾಧ ಏನೆಂದು ತಿಳಿಯದ ನನ್ನ ಮಗನನ್ನು ಕೊಂದಿರುವುದು ನೋವನ್ನು ಇಮ್ಮಡಿಗೊಳಿಸಿದೆ. ಏನಿದ್ದರೂ ಮುಗ್ಧ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಸುತ್ತಿರುವ ಕ್ರೂರ ದೌರ್ಜನ್ಯಗಳು ಹೊರ ಜಗತ್ತಿಗೆ ತಿಳಿಯಲು ನಾನು ವರದಿಯನ್ನು ಮುಂದುವರಿಸುತ್ತೇನೆ.”

ಮಾಧ್ಯಮ ಕಾರ್ಯಕರ್ತರ ನಿರಂತರ ಬೇಟೆಯು ಸಂಘರ್ಷ ವಲಯಗಳ ಕುರಿತು ಮಾಹಿತಿಯನ್ನು ಜಗತ್ತು ಕಳೆದುಕೊಳ್ಳುವಂತೆ ಮಾಡುತ್ತದೆ. ಗಾಝದಲ್ಲಿ ಸ್ವತಂತ್ರ ವರದಿಗಾರಿಕೆ ಮುಂದುವರಿಯಬೇಕು. ಝಿಯೋನಿಸ್ಟ್‌ಗಳ ದೌರ್ಜನ್ಯಗಳು ಭಯಾನಕವಾಗಿದೆ. ಇಸ್ರೇಲ್ ಸರ್ಕಾರ ಮಾಧ್ಯಮ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮೂಲಕ ಮತ್ತು ಪತ್ರಕರ್ತರಿಗೆ ಬೆದರಿಕೆ ಹಾಕುವ ಮೂಲಕ ಅವರ ಮೌನವಾಗಿಸಲು ಪ್ರಯತ್ನಿಸುತ್ತಿದೆ. ನೈಜ ಸುದ್ದಿಯನ್ನು ತಿಳಿಯದಂತೆ ಜಗತ್ತನ್ನು ವಂಚಿಸಲು ಪ್ರಯತ್ನಿಸುತ್ತಿದೆ.