ಯಾಂಗೂನ್,ಮೇ 31: ತೀವ್ರವಾದಿ ರಾಷ್ಟ್ರ ಭಕ್ತನಾದ ಬೌದ್ಧ ಸನ್ಯಾಸಿ ಮೊಂಕ್ ವಿರಾದುರನ್ನು ಬಂಧಿಸುವ ಕ್ರಮವನ್ನು ವಿರೋಧಿಸಿ ಮ್ಯಾನ್ಮಾರಿನಲ್ಲಿ ತೀವ್ರ ಪತ್ರಿಭಟನೆ ಸ್ಫೋಟಿಸಿದೆ. ಕೋರ್ಟು ಅವರನ್ನು ಬಂಧಿಸಲು ಆದೇಶ ಹೊರಡಿಸಿದೆ. ಸರಕಾರವನ್ನು ಮೊಂಕ್ ತೀವ್ರವಾಗಿ ಟೀಕಿಸಿದ ನಂತರ ಕೋರ್ಟಿನ ಆದೇಶ ಬಂದಿದೆ. ಮೊಂಕ್ ವಿರಾದು ವಿರುದ್ಧ ದೇಶದ್ರೋಹ ಆರೋಪ ಹೊರಿಸಲಾಗಿದ್ದು ಅವರನ್ನು ಬೆಂಬಲಿಸಿ ಮುನ್ನೂರರಷ್ಟು ಮಂದಿ ಪ್ರತಿಭಟನೆ ನಡೆಸಿದರು. ಯಾಂಗೋನ್ನ ಪಗೊಡದಲ್ಲಿ ಪ್ರತಿಭಟನೆ ನಡೆಯಿತು.
ಇತ್ತೀಚೆಗೆ ನಡೆದ ರ್ಯಾಲಿಗಳಲ್ಲಿ ವಿರಾದು ಆಂಗ್ ಸಾನ್ ಸೂಕಿ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಹೊರಿಸಿದ್ದರು. ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ಸಂವಿಧಾನಕ್ಕೆ ತಿದ್ದು ಪಡಿತರುವುದನ್ನು ವಿರೋಧಿಸಿ, ಸೇನೆಯ ಅಧಿಕಾರವನ್ನು ಕಡಿತಗೊಳಿಸಬೇಕೆಂದು ವಿರಾದು ಹೇಳಿದ್ದರು. ಸರಕಾರವನ್ನು ಟೀಕಿಸಿದ್ದಕ್ಕಗಿ ಎರಡು ದಿವಸ ಮೊದಲು ಯಾಂಗೋನ್ ಕೋರ್ಟು ಬಂಧಿಸಲು ಆದೇಶ ಹೊರಡಿಸಿತ್ತು. 2011ರಲ್ಲಿ ಸೇನಾಡಳಿತ ಕೊನೆಗೊಂಡ ಬಳಿಕ ಮ್ಯಾನ್ಮಾರಿನಲ್ಲಿ ಪ್ರಮುಖ ನಾಯಕನಾಗಿ ವಿರಾದು ಹೊರಹೊಮ್ಮಿದ್ದಾರೆ. ಅವರು ಕಟು ಮುಸ್ಲಿಮ್ ವಿರೋಧಿ ನಿಲುವನ್ನು ಹೊಂದಿದ್ದಾರೆ.












