ಸನ್ಮಾರ್ಗ ವಾರ್ತೆ
ಕಾಶ್ಮೀರದ ಭಯೋತ್ಪಾದನಾ ದಾಳಿಗೆ ತಾನು ಹೊಣೆಯಲ್ಲ ಎಂದು ದಿ ರೆಸಿಸ್ಟೆನ್ಸ್ ಫ್ರಂಟ್ ಹೇಳಿದೆ. ಈ ಮೊದಲು ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಅದು ಹೇಳಿಕೊಂಡಿತ್ತು. ಆದರೆ ತನ್ನ ಮೇಲೆ ತಪ್ಪಾಗಿ ಆರೋಪವನ್ನು ಹೊರಿಸಲಾಗಿದೆ ಮತ್ತು ಈ ಮೊದಲು ಪ್ರಕಟವಾದ ಸುದ್ದಿಯು ಅನಧಿಕೃತವಾಗಿದೆ ಎಂದು ವಕ್ತಾರ ಅಹಮದ್ ಖಾಲಿದ್ ಹೇಳಿದ್ದಾನೆ.
ಈ ಕೃತ್ಯಕ್ಕೆ ನಾವು ಹೊಣೆ ಎಂಬ ಸುದ್ದಿ ಹೇಗೆ ಪ್ರಕಟವಾಗಿದೆ ಎಂಬ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ. ಸೈಬರ್ ದಾಳಿಯ ಕಾರಣದಿಂದಾಗಿ ಇಂತಹ ಸುದ್ದಿ ಪ್ರಕಟವಾಗಿದೆ ಎಂದು ನಮಗೆ ಗೊತ್ತಾಗಿದೆ ಎಂದು ಅದರ ವಕ್ತಾರ ಹೇಳಿದ್ದಾನೆ.
ದಿ ರೆಜಿಸ್ಟನ್ಸ್ ಫ್ರಂಟನ್ನು ಭಾರತ ಸರ್ಕಾರ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿದೆ.












