373 ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕಿಂತಲೂ ಹೆಚ್ಚು ಮತಗಳ ಎಣಿಕೆ- ದಿ ಕ್ವಿಂಟ್ ವರದಿ ಬಿಚ್ಚಿಟ್ಟ ಸತ್ಯಾಂಶ

0
3553

ಹೊಸದಿಲ್ಲಿ,ಜೂ.1: ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬುಡಮೇಲು ಆರೋಪವನ್ನು ಬಲಪಡಿಸುವಂತಹ ವರದಿಯನ್ನು ದಿಕ್ವಿಂಟ್ ನೀಡಿದೆ. ಆನ್ ಲೈನ್ ಪತ್ರಿಕೆ 373 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆಗಿದ್ದಕ್ಕಿಂತ ಹೆಚ್ಚು ಮತ ಎಣಿಕೆಯಾಗಿರುವುದನ್ನು ಸ್ಪಷ್ಟವಾಗಿ ವರದಿ ಮಾಡಿದೆ. ಚುನಾವಣಾ ಆಯೋಗದ ಪತ್ರಿಕೆ ಈ ಅಂತರವನ್ನು ತಿಳಿಸಿದಾಗ ಉತ್ತರಿಸಲು ನಿರಾಕರಿಸಿದೆ ಎಂದು ಕೂಡ ವರದಿಯಲ್ಲಿ ಕ್ವಿಂಟ್ ತಿಳಿಸಿತು.

ಬಿಹಾರ, ಉತ್ತರಪ್ರದೇಶ, ತಮಿಳ್ನಾಡು, ಅರುಣಾಚಲಪ್ರದೇಶಗಳಲ್ಲಿ ನಡೆದ ನಾಲ್ಕು ಹಂತಗಳ ಚುನಾವಣೆಯಲ್ಲಿ ಈ ಅಂತರವಿದೆ. ತಮಿಳ್ನಾಡಿನ ಕಾಂಚಿಪುರಂ, ಧರ್ಮಪುರಿ, ಶ್ರೀಪೆರುಂಬತ್ತೂರ್, ಉತ್ತರ ಪ್ರದೇಶದ ಮಥುರಾ, ಅರುಣಾಚಲಗಳಲ್ಲಿ ಈ ಅಂತರ ಕಂಡು ಬಂದಿದ್ದು ಕೇಂದ್ರ ಸಚಿವ ಕಿರಣ್ ರಿಜಿಜು ನಬಾಂತುಕಿಯ ವಿರುದ್ಧ ಕಡಿಮೆ ಮಾರ್ಜಿನ್‍ನಲ್ಲಿ ಗೆದ್ದಿದ್ದರು. ಇಲ್ಲಿ ಚುನಾವಣಾ ಆಯೋಗ ಪ್ರಕಟಿಸಿದ ಮತದಾನ ಪ್ರಮಾಣಕ್ಕಿಂತ 7961 ಮತಗಳನ್ನು ಹೆಚ್ಚು ಇಲ್ಲಿ ಎಣಿಸಲಾಗಿದೆ.

373 ಲೋಕಸಭಾ ಕ್ಷೇತ್ರಗಳ ವ್ಯತ್ಯಾಸವನ್ನು ಆಯೋಗದ ಗಮನಕ್ಕೆ ತಂದಾಗ ಉತ್ತರಿಸುವುದಾಗಿ ಹೇಳಿ ಒಂದು ಗಂಟೆಯ ಬಳಿಕ ಚುನಾವಣಾ ಆಯೋಗದ ಮತದಾನವಾದ ಲೆಕ್ಕವನ್ನು ಅದರ ವೆಬ್‍ಸೈಟ್‍ನಿಂದ ತೆರವು ಗೊಳಿಸಲಾಗಿದೆ ಎಂದು ದಿ ಕ್ವಿಂಟ್ ತಿಳಿಸಿದೆ. ಆಯೋಗದ ಉತ್ತರಕ್ಕೆ ಈಗಲೂ ಕಾಯುತ್ತಿರುವುದಾಗಿ ಪತ್ರಿಕೆ ತಿಳಿಸಿದೆ.

2018ರಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ನಡೆದ ಮತದಾನದ ವ್ಯತ್ಯಾಸಗಳನ್ನು ದ ಕ್ಲಿಂಟ್ ಹೊರ ಬಿಟ್ಟಿತ್ತು. ಅಭಿವೃದ್ಧಿ ಹೊಂದಿದ ದೇಶಗಳಾದ ಬ್ರಿಟನ್ ಸಹಿತ ಪ್ರಜಾಪ್ರಭುತ್ವವಿರುವ ದೇಶಗಳು ಇವಿಎಂ ಉಪಯೋಗಿಸುವುದಿಲ್ಲ. ಪೇಪರ್ ಬ್ಯಾಲಟ್ ಬಳಸುತ್ತಿದೆ ಎಂದು ಕ್ವಿಂಟ್ ವಿವರಿಸಿ ತನ್ನ ವರದಿಯನ್ನು ಕೊನೆಗೊಳಿಸಿದೆ.