ಕುವೈಟ್ ಸಿಟಿ,ಜೂ.1: ಕುವೈಟ್ನ ಪತ್ರಕರ್ತೆ ಹಿದಾಯತ್ ಅಲ್ ಸುಲ್ತಾನ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹತ್ಯಾರೋಪಿ ಹತ್ತೊಂಬತ್ತು ವರ್ಷದ ನಂತರ ಬಿಡುಗಡೆಯಾಗಿದ್ದಾನೆ. ಒಂದು ಕೋಟಿ ದೀನಾರ್ ನಷ್ಟ ಪರಿಹಾರ ಕೊಟ್ಟ ನಂತರ ಖಾಲಿದ್ ನಖ ಅಲ್ ಆಸ್ಮಿಯೆಂಬ ವ್ಯಕ್ತಿ ಬಿಡುಗಡೆಯಾಗಿದ್ದು ಜೈಲಿನಿಂದ ಹೊರಬಂದ ಆತನನ್ನು ಆತನ ಗೋತ್ರ ಅದ್ದೂರಿಯಾಗಿ ಸ್ವಾಗತಿಸಿತು.
ಈತನ ಬಿಡುಗಡೆಗಾಗಿ ಅವಾಸಿಂ ಗೋತ್ರ ಒಂದು ಕೋಟಿ ದೀನಾರ್ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಅಲ್ ಅವಾಸಿಂ ಒಂದೇ ದಿನದಲ್ಲಿ 8 ದಶಲಕ್ಷ ದೀನಾರ್ ಸಂಗ್ರಹಿಸಿತ್ತು. ಕುವೈಟಿನ ಸಂಸದರು, ಸಚಿವರು ಹಣ ಸಂಗ್ರಹ ಕಾರ್ಯವನ್ನು ಬೆಂಬಲಿಸಿದ್ದು ಒಂದು ಕೋಟಿ ದೀನಾರ್ ಸುಲಭವಾಗಿ ಸಂಗ್ರಹಿಸಲು ಗೋತ್ರಕ್ಕೆ ಸಾಧ್ಯವಾಗಿತ್ತು. ನಷ್ಟ ಪರಿಹಾರ ಕೊಡುವುದಾದರೆ ಕ್ಷಮೆ ನೀಡಲಾಗುವುದು ಸುಲ್ತಾನರ ಕುಟುಂಬ ಹೇಳಿತ್ತು. ನಷ್ಟಪರಿಹಾರ ಕೊಡದಿದ್ದರೆ ಇನ್ನೂ ಹದಿನೈದು ವರ್ಷ ಆತ ಜೈಲಿನಲ್ಲಿ ಕೊಳೆಯಬೇಕಾಗಿತ್ತು. ತನ್ನ ಗೋತ್ರವನ್ನು ಮ್ಯಾಗಝಿನ್ನಲ್ಲಿ ಕೆಟ್ಟದಾಗಿ ಚಿತ್ರಿಸಿದರು ಎಂಬ ಕೋಪದಿಂದ ಪತ್ರಕರ್ತೆ ಸುಲ್ತಾನರಿಗೆ ಕಾರು ಢಿಕ್ಕಿ ಹೊಡೆದು ಖಾಲಿದ್ ನಖ ಕೊಲೆ ಮಾಡಿದ್ದ.












