ದುಬೈ ಬಸ್ ಅಪಘಾತ: ಮೃತರಲ್ಲಿ 6 ಮಂದಿ ಭಾರತೀಯರು

0
621

ದುಬೈ,ಜೂ.7: ಗುರುವಾರ ಸಂಜೆ ದುಬೈಯಲ್ಲಿ ನಡೆದ ಬಸ್ ಅಪಘಾತದಲ್ಲಿ ಹದಿನೇಳು ಮಂದಿ ಮೃತಪಟ್ಟಿದ್ದು ಇವರಲ್ಲಿ ಆರು ಮಂದಿ ಭಾರತೀಯರು ಸೇರಿದ್ದಾರೆ. ದುಬೈ ಪೊಲೀಸ್ ಅಧಿಕಾರಿಗಳು ಈ ವಿವರ ನೀಡಿದ್ದು ದುಬೈಯ ಭಾರತದ ದೂತವಾಸ ಈ ವಿಚಾರವನ್ನು ತಿಳಿಸಿದೆ. ಎಂಟು ಮೃತದೇಹವನ್ನು ಗುರುತಿಸಲು ಸಾಧ್ಯವಾಗಿದ್ದು ಮೃತರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಸ್ಕತ್‍ನಿಂದ ದುಬೈಗೆ ಬಂದ ಒಮನ್ ಸಾರಿಗೆ ಇಲಾಖೆಯ ಬಸ್ ರಾಷಿದೀಯ ಮೆಟ್ರೋ ಸ್ಟೇಶನ್ ಸಮೀಪ ಅಪಘಾತಕ್ಕೆ ತುತ್ತಾಯಿತು. ಮೃತರಲ್ಲಿ ಕೇರಳದ ನಾಲ್ವರನ್ನು ಗುರುತಿಸಲಾಗಿದೆ. ತೃಶೂರಿನ ಜಮಾಲುದ್ದೀನ್, ಕಿರಣ್,  ಜೋನಿ,  ರಾಜಗೋಪಾಲನ್ ಮೃತರಾದರು. ಇಬ್ಬರು ಪಾಕಿಸ್ತಾನಿಯರು, ಓರ್ವ ಒಮಾನಿ,  ಓರ್ವ ಅಯರ್ಲೆಂಡಿನ ವ್ಯಕ್ತಿಯನ್ನು ಗುರುತಿಸಲಾಗಿದೆ. ಭಾರತದ ದೂತವಾಸದ ಅಧಿಕಾರಿ ರಾಷಿದ್ ಆಸ್ಪತ್ರೆಯಲ್ಲಿದ್ದಾರೆ. ತುರ್ತು ವಿವರಗಳನ್ನು ಪಡೆಯಲು 00971-504565441,00971-565463903 ನಂಬರ್‍ಗಳಿಗೆ ಕರೆ ಮಾಡಬಹುದು.