ರಜಪೂತ ರಾಜಕುಮಾರಿ ಅತ್ಯಾಚಾರ ಮಾಡಲು ಅಕ್ಬರ್ ಯತ್ನಿಸಿದ್ದ- ರಾಜಸ್ತಾನದ ಬಿಜೆಪಿ ನಾಯಕ ಮದನ್‍ಲಾಲ್ ಸೈನಿ

0
719

ಹೊಸದಿಲ್ಲಿ,ಜೂ.7:ಮೊಗಲ ಚಕ್ರವರ್ತಿ ಅಕ್ಬರ್ ರಾಜಪೂತ ರಾಜಕುಮಾರಿ ಕಿರಣ್ ದೇವಿಯ ಅತ್ಯಾಚಾರಕ್ಕೆ ಯತ್ನಿಸಿದ್ದನು ಎಂದು ರಾಜಸ್ತಾನದ ಬಿಜೆಪಿ ನಾಯಕ ಮದನ್ ಲಾಲ್ ಸೈನಿ ಹೇಳಿದರು. ರಾಜಸ್ತಾನದ ಜೈಪುರದ ಮೇವಾರ್ ದೊರೆ ಮಹಾರಾಣಾ ಪ್ರತಾಪ್‍ರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

“ಎಲ್ಲರಿಗೂ ಗೊತ್ತಿದೆ, ಅಕ್ಬರ್ ಸ್ಥಾಪಿಸಿದ ಮೀನಾ ಬಝಾರ್ ಮಹಿಳೆಯರಿಗೆ ಮಾತ್ರ ಇದ್ದುದಲ್ಲ. ಪುರುಷರಿಗೂ ಅಲ್ಲಿ ಪ್ರವೇಶ ಇತ್ತು. ಮಹಿಳೆಯರು ಮಾತ್ರ ಕೆಲಸವನ್ನು ಮಾಡುವ ಮೀನಾ ಬಝಾರಿನಲ್ಲಿ ಅಕ್ಬರ್ ಪ್ರವೇಶಿಸಿದ್ದ. ಅಲ್ಲಿ ಆತ ಕಿರಣ್ ದೇವಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಕಿರಣ್ ದೇವಿ ಅದನ್ನು ಎದುರಿಸಿದರು. ನಂತರ ಅಕ್ಬರ್ ಕ್ಷಮೆಯಾಚಿಸಿದನು” ಎಂದು ಮದನ್ ಲಾಲ್ ಹೇಳಿದರು.

ಮದನ್‍ಲಾಲ್‍ರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ರಂಗಪ್ರವೇಶಿಸಿದೆ. ಬಿಜೆಪಿ ನಾಯಕ ಇತಿಹಾಸವನ್ನು ತಿರುಚುತ್ತಿದ್ದಾರೆ. ಸಮಾಜದಲ್ಲಿ ದ್ವೇಷವನ್ನು ತುಂಬುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಅರ್ಚನಾ ಶರ್ಮ ಹೇಳಿದರು. ಹಲವು ವರ್ಷಗಳ ಮೊಗಲ ಪರಂಪರೆಯನ್ನು ಬಿಜೆಪಿ ಗುರಿಯಾಗಿ ಮಾಡುತ್ತಿದೆ ಎಂದು ಅರ್ಚನಾ ಶರ್ಮ ಹೇಳಿದರು.