ನಿಲಂಬೂರ್,ಜೂ.7: ಪತ್ನಿಯ ದೇಹಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪಶ್ಚಿಮಬಂಗಾಳದ ಝುಹ್ರಿಲ್ ಇಸ್ಲಾಮ್(33) ಎಂಬಾತನನ್ನು ಬಂಧಿಸಲಾಗಿದೆ. ಈದ್ ದಿನವಾದ ಬುಧವಾರ ಘಟನೆ ನಡೆಯಿತು. ಮುಕ್ಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲಿ ಸಂಜೆ ನಾಲ್ಕೂವರೆ ಗಂಟೆಗೆ ಘಟನೆ ನಡೆದಿದೆ. ಪತ್ನಿ ಮುಹ್ಸಿನಾ ಹತೂಮ್‍ರನ್ನು(21) ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಹ್ಸಿನಾ, ಝುಹ್ರುಲ್ ಇಸ್ಲಾಮ್‍ನ ಎರಡನೆ ಪತ್ನಿಯಾಗಿದ್ದು ಮಾತಿನ ಚಕಮಕಿಯಲ್ಲಿ ಪತ್ನಿಯ ದೇಹಕ್ಕೆ ಡೀಸೆಲ್ ಸುರಿದು ಬೆಂಕಿ ಹಚ್ಚಿದನೆಂದು ಪೊಲೀಸರು ಹೇಳಿದರು. ಶೇ.50ರಷ್ಟು ಸುಟ್ಟಗಾಯಗಳಾಗಿರುವ ಮುಹ್ಸಿನಾ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿನೈದು ತಿಂಗಳ ಗಂಡು ಮಗು ಇವರಿಗಿದೆ. ಮಗುವನ್ನು ನಿಲಂಬೂರಿನ ಸ್ನೇಹಾಲಯಕ್ಕೆ ಸೇರ್ಪಡೆಗೊಳಿಸಲಾಗಿದ್ದು ಝುಹ್ರುಲ್ ಇಸ್ಲಾಮ್ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.












