ಅಥೆನ್ಸ್,ಜೂ.10: 180 ವರ್ಷದ ನಂತರ ಪ್ರಥಮವಾಗಿ ಅಥೆನ್ಸ್ನಲ್ಲಿ ಮುಸ್ಲಿಮರಿಗೆ ಪ್ರಾರ್ಥಿಸಲು ಮಸೀದಿ ಬರುತ್ತಿದೆ. ಹಲವಾರು ವರ್ಷಗಳ ಹೋರಾಟದ ಬಳಿಕ 967.000 ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡ ಮಸೀದಿ ಸೆಪ್ಟಂಬರಿನಲ್ಲಿ ಪ್ರಾರ್ಥನೆಗೆ ಬಿಟ್ಟು ಕೊಡಲಾಗುವುದು ಎಂದು ಗ್ರೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೀಸ್ನ ಇತರ ಕಡೆಗಳಲ್ಲಿ ಮಸೀದಿಗಳಿವೆ. 1833ರಲ್ಲಿ ಉಸ್ಮಾನಿಯ ಚಕ್ರವರ್ತಿಗಳ ಅಧಿಕಾರ ಪತನವಾದ ಬಳಿಕ ಗ್ರೀಸ್ ರಾಜಧಾನಿ ನಗರದಲ್ಲಿ ಮೊದಲ ಬಾರಿ ಮುಸ್ಲಿಮರಿಗಾಗಿ ಮಸೀದಿ ನಿರ್ಮಾಣಗೊಂಡಿದೆ.
1890ರಿಂದ ಮಸೀದಿ ನಿರ್ಮಿಸುವುದಕ್ಕಾಗಿ ಪ್ರಯತ್ನ ಆರಂಭವಾಗಿತ್ತು. ಆದರೆ, ಏನೂ ಪ್ರಯೋಜನವಾಗಲಿಲ್ಲ. 2004ರಲ್ಲಿ ಗ್ರೀಸ್ ಒಲಿಂಪಿಕ್ಸ್ ವೇಳೆ ಇಂತಹ ಚಿಂತನೆ ನಾಂದಿಯಾಗಿತ್ತು. ಕ್ರೈಸ್ತ, ತೀವ್ರಬಲಪಂಥೀಯರ ವಿರೋಧದಿಂದಾಗಿ ಅಥೆನ್ಸ್ನಲ್ಲಿ ಮಸೀದಿ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನ, ಸಿರಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶದವರ ಸಹಿತ ಎರಡು ಲಕ್ಷ ಮುಸ್ಲಿಮರು ಅಥೆನ್ಸ್ನಲ್ಲಿ ವಾಸಿಸುತ್ತಿದ್ದಾರೆ.












