ಮಾಜಿ ಜಿ.ಪಂ. ಸದಸ್ಯ, ಹಿರಿಯ ರಾಜಕೀಯ ಮುತ್ಸದ್ದಿ, ನ್ಯಾಯವಾದಿ ಐ. ಕುಂಪಳ್ಳಿ ನಿಧನ

0
360

ಸನ್ಮಾರ್ಗ ವಾರ್ತೆ

ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪರಿಷತ್‌ ಸದಸ್ಯ, ಎಣ್ಮೂರು ಮಸೀದಿಯ ಗೌರವಾಧ್ಯಕ್ಷರಾಗಿರುವ ನ್ಯಾಯವಾದಿ ಹಾಗೂ ನೋಟರಿ ಐ. ಕುಂಪಳ್ಳಿಯವರು ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಇತಿಹಾಸ ಪ್ರಸಿದ್ದ ಐವತ್ತೊಕು ಪಟೇಲ್‌ ಮನೆಯವರಾದ ಕುಂಪಳ್ಳಿಯವರು ವಯೋಸಹಜ ಅಸೌಖ್ಯದಿಂದಿದ್ದು, ಪೈಚಾರಿನಲ್ಲಿರುವ ತಮ್ಮ ಮನೆಯಲ್ಲಿ ಬೆಳಿಗ್ಗೆ 10.3೦ರ ಸುಮಾರಿಗೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಅಂತ್ಯ ಸಂಸ್ಕಾರಕ್ಕೆ ಅವರ ಪಾರ್ಥಿವ ಶರೀರವನ್ನು ಐವತ್ತೊಕ್ಲು ಗ್ರಾಮದ ಅವರ ಐವತ್ತೊಕ್ಲು ಮನೆಗೆ ಕೊಂಡೊಯ್ಯಲಾಗುವುದೆಂದು ತಿಳಿದು ಬಂದಿದೆ.