ಮುಹರ್ರಂ ತಿಂಗಳ ಆರಂಭ

0
561

ಸನ್ಮಾರ್ಗ ವಾರ್ತೆ

ಮಂಗಳೂರು: ನಿನ್ನೆ ಜುಲೈ 26 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮುಹರ್ರಂ ತಿಂಗಳ ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ಘೋಷಿಸಿದ್ದಾರೆ.

ಆ ಪ್ರಕಾರ ಇಂದು ಜೂನ್ 27ರಂದು ಶುಕ್ರವಾರ ಮುಹರ್ರಂ 1, ಜುಲೈ 05 ರಂದು ಶನಿವಾರ ಮುಹರ್ರಂ 09 ತಾಸೂಆ ಹಾಗೂ ಜುಲೈ 06 ರಂದು ಆದಿತ್ಯವಾರ ಮುಹರ್ರಂ 10 ಆಶೂರಾಅ್ ದಿನವಾಗಿರುತ್ತದೆ, ಆವತ್ತು ಉಪವಾಸ ಸುನ್ನತ್ ಆಗಿರುತ್ತದೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗು ಈದ್ಗಾ ಮಸೀದಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.