ವಿಸಿಟಿಂಗ್ ವೀಸಾದ ಕಾಲಾವಧಿ ಮುಗಿದು ಸೌದಿಯಲ್ಲೇ ಉಳಿದವರಿಗೆ ಶುಭ ಸುದ್ದಿ: ಆರಾಮವಾಗಿ ದೇಶ ತೊರೆಯುವುದಕ್ಕೆ ಅವಕಾಶ

0
770

ಸನ್ಮಾರ್ಗ ವಾರ್ತೆ

ವಿಸಿಟಿಂಗ್ ವಿಸಾದಲ್ಲಿ ಬಂದು ಅದರ ಕಾಲಾವಧಿ ಮುಗಿದರೂ ಸೌದಿಯಲ್ಲೇ ಉಳಿದವರಿಗೆ ಶುಭ ಸುದ್ದಿಯೊಂದಿದೆ. ಇಂಥವರು ದೇಶವನ್ನು ತೊರೆಯುವುದಕ್ಕಾಗಿ ಅವರ ವೀಸಾ ಕಾಲಾವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ.ಎಲ್ಲಾ ರೀತಿಯ ವಿಸಿಟಿಂಗ್ ವೀಸಾದಲ್ಲಿ ಬಂದವರಿಗೂ ಈ ಸೌಲಭ್ಯ ಲಭ್ಯವಿದೆ. ಜೂನ್ 27 ರಿಂದ ಮುಂದಿನ ಒಂದು ತಿಂಗಳ ಕಾಲ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಆದರೆ ಒಂದು ತಿಂಗಳ ಕಾಲ ವಿಸಾವನ್ನು ವಿಸ್ತರಿಸುವುದಕ್ಕೆ ಬೇಕಾದ ಶುಲ್ಕ ಮತ್ತು ವಿಸಾ ಕಾಲಾವಧಿ ಮೀರಿ ಉಳಿದದ್ದಕ್ಕಾಗಿ ನೀಡಬೇಕಾದ ದಂಡವನ್ನು ತೆರಬೇಕಾಗುವುದು.

ಗೃಹ ಸಚಿವಾಲಯದ ಅಬು ಶೀರ್ ಇ ಸರ್ವಿಸಸ್ ಫ್ಲಾಟ್ ಫಾರ್ಮುಲಾದ ತವಾಸುಲ್ ನಲ್ಲಿ ವೀಸಾ ಕಾಲಾವಧಿಯನ್ನು ವಿಸ್ತರಿಸುವ ಕೋರಿಕೆಯನ್ನು ಸಲ್ಲಿಸಬೇಕು. 30 ದಿನಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ , ದೇಶವನ್ನು ತೊರೆಯಬಹುದು. ಇದು ನಿಗದಿತ ಸಮಯದಲ್ಲಿ ಭಾರತಕ್ಕೆ ಮರಳಲು ಸಾಧ್ಯವಾಗದೆ ಉಳಿದುಕೊಂಡ ಸೌದಿಯಲ್ಲಿರುವ ಎಲ್ಲಾ ರೀತಿಯ ವಿಸಿಟಿಂಗ್ ವಿಸಾದಲ್ಲಿರುವ ಭಾರತೀಯರಿಗೂ ಈ ಸೌಲಭ್ಯ ಭಾರಿ ಆಶಾಭಾವನೆಯನ್ನು ಮೂಡಿಸಿದೆ. ಕಾಲಾವಧಿ ಕಳೆದ ಯಾವುದೇ ಬಗೆಯ ವಿಸಿಟಿಂಗ್ ವೀಸಾದವರಿಗೂ ಈ ಸೇವೆಯ ಮೂಲಕ ಪುನರ್ನವೀಕರಣ ಮಾಡಬಹುದಾಗಿದೆ. ಸಿಂಗಲ್ ಮತ್ತು ಮಲ್ಟಿಪಲ್ ಸಹಿತ ಎಲ್ಲಾ ಈ ರೂಪದಲ್ಲಿ ವಿಸಾವನ್ನು ನವೀಕರಣಗೊಳಿಸಬಹುದಾಗಿದೆ. ಇದಕ್ಕೆ ವಿಸಾದ ಸ್ಪೋನ್ಸರ್ ಗಳು ಅಪೇಕ್ಷೆ ಸಲ್ಲಿಸಬೇಕಾಗಿದೆ.

ಅಂದರೆ ಸೌದಿಯಲ್ಲಿ ರೆಸಿಡೆನ್ಸ್ ಸ್ಟೇಟಸ್ ಇರುವ ಯಾರು ವಿಸಾ ತೆಗೆದಿದ್ದಾರೋ ಅವರೇ ಸ್ಪಾನ್ಸರ್ ಆಗಿ ಗುರುತಿಸಿಕೊಳ್ಳುತ್ತಾರೆ. ಬಿಸಿನೆಸ್, ವರ್ಕ್, ಫ್ಯಾಮಿಲಿ, ವಿಸಿಟಿಂಗ್, ಸಿಂಗಲ್ ಮಲ್ಟಿಪಲ್ ಎಂಟ್ರಿ ವೀಸಾಗಳೂ ಸೇರಿದಂತೆ ಕಾಲಾವಧಿ ಮುಗಿದ ಎಲ್ಲಾ ರೀತಿಯ ವಿಸಾ ಹೊಂದಿರುವವರಿಗು ಹೊಸ ನಿಯಮದ ಸೌಲಭ್ಯವನ್ನು ಪಡೆದು ದೇಶ ತೊರೆಯಲು ಅನುಮತಿಸಲಾಗುತ್ತದೆ. ಶುಲ್ಕ ಮತ್ತು ದಂಡ ಪಾವತಿ ಎಲ್ಲವೂ ಆನ್ಲೈನ್ ಮುಖಾಂತರವೇ ನಡೆಯಲಿದೆ. ಇದಕ್ಕಾಗಿ ಯಾವುದೇ ಕಚೇರಿಯನ್ನು ಸಂಪರ್ಕಿಸ ಬೇಕಾಗಿಲ್ಲ ಎಂದು ತಿಳಿದುಬಂದಿದೆ.