ಸನ್ಮಾರ್ಗ ವಾರ್ತೆ
ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಅನೂಪ್ ಎಂಬ ವ್ಯಕ್ತಿ ಖಿನ್ನತೆಯಿಂದಾಗಿ ಕಳೆದ ಮೂರು ವರ್ಷಗಳಿಂದ ಮುಂಬೈಯ ಫ್ಲಾಟ್ ಒಂದರಲ್ಲಿ ಮಲಮೂತ್ರದೊಂದಿಗೆ ಏಕಾಂತವಾಗಿ ಬದುಕಿದ ಘಟನೆ ಬಹಿರಂಗಕ್ಕೆ ಬಂದಿದೆ. ಕೇರಳದ ಈ ವ್ಯಕ್ತಿ ತನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದರು. ಆದರೆ ಕಳೆದ ಆರು ವರ್ಷಗಳ ನಡುವೆ ತಂದೆ ಮತ್ತು ತಾಯಿ ನಿಧನರಾದರು. ಆ ಬಳಿಕ ಅನೂಪ್ ಖಿನ್ನತೆಗೆ ಜಾರಿದ್ದರು.
ಟಾಟಾ ಹಾಸ್ಪಿಟಲ್ ನಲ್ಲಿ ಉದ್ಯೋಗಿಯಾಗಿದ್ದ ತಂದೆ ಕುಟ್ಟಿ ಕೃಷ್ಣನ್ ನಾಯರ್ ಮತ್ತು ಭಾರತೀಯ ಏರ್ಫೋರ್ಸ್ ನಲ್ಲಿ ಉದ್ಯೋಗಿಯಾಗಿದ್ದ ತಾಯಿ ವರ್ಷಗಳ ಅಂತರದಲ್ಲಿ ನಿಧನರಾದ ಬಳಿಕ ಇವರು ಒಂಟಿಯಾದ್ರು. ಬಳಿಕ ಖಿನ್ನತೆಗೆ ಜಾರಿದ್ರು. ಮುಂಬೈ ಫ್ಲಾಟ್ನಲ್ಲಿ ಒಂದು ಕೋಣೆಯಲ್ಲಿ ತಣ್ಣಗೆ ಕುಳಿತಿರುತ್ತಿದ್ದರು. ಅವರ ಮನೆಯಿಂದ ಫರ್ನಿಚರ್ ಗಳನ್ನು ಕೆಲವರು ಹೊತ್ತೈದ ಕಾರಣ ಮನೆಯಲ್ಲಿ ಫರ್ನಿಚರ್ ಗಳು ಇರಲಿಲ್ಲ. ಕಾಲಿನ ಆರೋಗ್ಯವೂ ಕೈಕೊಟ್ಟಿತು. ಹೆತ್ತವರು ಮೃತಪಟ್ಟ ಬಳಿಕ ಕುಟುಂಬಿಕರು ಇವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಎಲ್ಲರನ್ನು ಸಂದೇಹಿಸುತ್ತಿದ್ದರು. ಹೀಗೆ ಖಿನ್ನತೆಗೆ ಜಾರುವುದಕ್ಕಿಂತ ಮೊದಲು ಇವರು ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದರು.
55 ವರ್ಷದ ಇವರ ಈ ಸ್ಥಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಂಚಿಕೊಂಡ ಬಳಿಕ ಸೇವಾ ಸಂಸ್ಥೆ ಒಂದು ಇವರ ನೆರವಿಗೆ ಬಂತು. ಮನೆಗೆ ಬಂದಾಗ ಮಲಮೂತ್ರಗಳಿಂದ ಫ್ಲಾಟ್ ಗಬ್ಬು ನಾಥವನ್ನು ಬೀರುತ್ತಿತ್ತು. ಬಲವಂತದಿಂದ ಬಾಗಿಲನ್ನು ದೂಡಿ ಮನೆಯೊಳಗೆ ಪ್ರವೇಶಿಸಿ ಅವರನ್ನು ರಕ್ಷಿಸಲಾಗಿದೆ. ಇದೀಗ ಒಂದು ಆಶ್ರಮದಲ್ಲಿ ಇವರನ್ನು ಸೇರಿಸಲಾಗಿದೆ.
ಇವರು ಅಪರೂಪವಾಗಿ ಮನೆಯ ಬಾಗಿಲು ತೆರೆಯುತ್ತಾ ಇದ್ದರು ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ತಂದೆಯ ಹೆಸರಿನಲ್ಲಿದ್ದ ಹಣವನ್ನು ಇವರ ಖಾತೆಗೆ ವರ್ಗಾಯಿಸಲು ಪಕ್ಕದ ಫ್ಲಾಟ್ನವರು ಇವರಿಗೆ ಸಹಾಯ ಮಾಡಿದ್ದರು. ಆನ್ಲೈನ್ ಮೂಲಕ ಆಹಾರವನ್ನು ಇವರು ತರಿಸ್ತಾ ಇದ್ರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ಮಾಡಿದೆ.












