ಜಂಗಲ್ ರಾಜ್ ಆಗಿ ಬದಲಾಗುತ್ತಿರುವ ಉತ್ತರ ಪ್ರದೇಶ

0
606

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಾಗಿ ಘಟನೆಗಳು ಹೇಳುತ್ತಿವೆ. ಯಾದವ್ ಮತ್ತು ಅವರ ಗೆಳೆಯರನ್ನು ರಸ್ತೆ ಅಪಘಾತದ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯಂತ ಅಮಾನುಷವಾಗಿ ಥಳಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಅಲ್ಲಿ ಪೊಲೀಸರ ಎದುರೇ ಥಳಿಸಿದ್ದಲ್ಲದೆ ಪೊಲೀಸರ ಮೇಲೆಯೂ ಕೈ ಮಾಡಿದ ವಿಡಿಯೋ ಯೋಗಿ ಸರಕಾರವನ್ನು ಮುಜುಗರಕ್ಕೆ ತಳ್ಳಿದೆ. ಮಾತ್ರ ಅಲ್ಲ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ನಿಂತು ಹನುಮಾನ್ ಚಾಲೀಸಾ ಪಠಿಸಿದ್ದಾರೆ.

ಜೂನ್ 20ರಂದು ಬಾಬಿನಾ ಕ್ಷೇತ್ರದ ಎಂಎಲ್ಎ ರಾಜೀವ್ ಸಿಂಗ್ ಪರೀಕ್ಷಾ ಎಂಬವರು ವಂದೇ ಭಾರತ್ ಎಕ್ಸ್ಪ್ರೆಸ್‌ನಲ್ಲಿ ಕಿಟಕಿ ಬದಿಯಲ್ಲಿದ್ದ ಸೀಟ್ ಅನ್ನು ಬಿಟ್ಟುಕೊಡದ ಕಾರಣಕ್ಕೆ ಪ್ರಯಾಣಿಕನಿಗೆ ಥಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಈ ಶಾಸಕನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಯಾವುದೇ ಎಫ್ ಐ ಆರ್ ದಾಖಲಾಗಲಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಗಿಂತ ತುಸು ದೂರದಲ್ಲಿ ನಾಲ್ಕು ಮಂದಿ ಪೊಲೀಸ್ ಠಾಣೆಗೆ ನುಗ್ಗಿ ಅಧಿಕಾರಿಗಳಿಗೆ ಹೊಡೆದಿದ್ದಾರೆ. ಮಹಿಳೆ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದಾರೆ . ಇವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಜಿಲ್ಲಾಧಿಕಾರಿಯ ಚಾಲಕನ ಮಗಳು ಕಲ್ಪಿತ ಶರ್ಮಾ ಅವರನ್ನು ಹತ್ರಾಸಿನಲ್ಲಿ ಹಾಡು ಹಗಲಲ್ಲೇ ಹತ್ಯೆ ಮಾಡಲಾಗಿದೆ. ಈವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ.

ಇಂತಹ ಹಲವು ಘಟನೆಗಳು ಈಗಾಗಲೇ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶವು ಜಂಗಲ್ ರಾಜ್ ಆಗಿ ಬದಲಾಗಿದೆ ಎಂಬ ಆರೋಪಕ್ಕೆ ಇವೆಲ್ಲ ಪುಷ್ಠಿ ನೀಡುತ್ತಿವೆ.