ಸನ್ಮಾರ್ಗ ವಾರ್ತೆ
ಮನೆ ಇಲ್ಲ. ಕುಟುಂಬ ಇಲ್ಲ. ಕೈಯಲ್ಲಿ ನಯಾ ಪೈಸೆಯೂ ಇಲ್ಲ. ಆದರೂ ನಿಮ್ಮಲ್ಲಿ ಗಟ್ಟಿ ನಿರ್ಧಾರ ಇದ್ದರೆ ಬಯಸಿದ್ದನ್ನು ಸಾಧಿಸಿಯೇ ತೀರುತ್ತೀರಿ ಅನ್ನೋದನ್ನು ಮೌಸಂ ಕುಮಾರಿ ಎಂಬ ಯುವತಿ ಸಾಬೀತುಪಡಿಸಿದ್ದಾರೆ. ಈ ಯುವತಿ ಐಐಟಿಗೆ ಪ್ರವೇಶ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಈಕೆ ಆರು ತಿಂಗಳಿನ ಮಗುವಾಗಿದ್ದಾಗ ತಂದೆ ತೀರಿಕೊಂಡರು.3 ವರ್ಷವಾದಾಗ ತಾಯಿ ಬೇರೆ ವಿವಾಹವಾದರು,. ಆ ಬಳಿಕ ಈ ಮೌಸಂ ಕುಮಾರಿ ಅಜ್ಜಿಯ ಜೊತೆ ಬೆಳೆದರು.
ಮೌಸಮ್ 10ನೇ ಕ್ಲಾಸಿನಲ್ಲಿ ಕಲಿಯುತ್ತಿರುವಾಗ ಅಜ್ಜಿ ತೀರಿಕೊಂಡರು. ಆಬಳಿಕ ಕುಟುಂಬಿಕರ ಮನೆಯಲ್ಲಿ ಆಕೆ ವಾಸ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.ಆದರೆ ದೊಡ್ಡಮ್ಮ ಮತ್ತು ಮಾವ ಆಕೆಯನ್ನು ಬಹಳವಾಗಿ ಪ್ರೀತಿಸಿದರು. ಬೆಂಬಲಿಸಿದ್ರು. ಮೌಸಮಿ ಐಐಟಿ ಕಲಿಯಬೇಕು ಅನ್ನುವುದು ದೊಡ್ಡಮ್ಮನ ಆಸೆಯಾಗಿತ್ತು. ಅದನ್ನು ನಾನು ಪೂರ್ತಿ ಗೊಳಿಸುವೆ ಎಂದು ಮೌಸಮಿ ನಿರ್ಧರಿಸಿದಳು. ಹಾಗೆ 12ನೇ ತರಗತಿ ತೆರ್ಗಡೆಯಾಗಿದ್ದಲ್ಲದೆ ಜೆ ಇ ಇ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದಳು. ಆ ಬಳಿಕದ ಐಐಟಿ ಕಲಿಕೆಗೆ ಹಣದ ಅವಶ್ಯಕತೆ ಇತ್ತು. . ಆಕೆ ಬರಿಗೈಯಾಗಿದ್ದಳು. ಇರುವ ಎಲ್ಲಾ ಸ್ಕಾಲರ್ಶಿಪ್ ಗೂ ಅರ್ಜಿ ಹಾಕಿ ಐಐಟಿ ಕಲಿಕೆಗೆ ಮುಂದಾದರು.
ಐ ಐಟಿಯಲ್ಲಿರುವ ಗೆಳೆಯರೇ ಆಕೆಗೆ ನೆರವಾದರು. ವಿವಿಧ ರೀತಿಯಲ್ಲಿ ಆಕೆಗೆ ಅವರು ಸಹಾಯ ಮಾಡಿದರು. ಇದೀಗ ಮೌಸವಿ ಐಐಟಿಯಿಂದ ಬಿರುದು ಪಡೆದು ಹೊರ ಬಂದಿದ್ದಾರೆ. ಮಾತ್ರ ಅಲ್ಲ ಒಂದು ಬ್ಯಾಂಕಿನಲ್ಲಿ ಉನ್ನತ ವೇತನದೊಂದಿಗೆ ಉದ್ಯೋಗವನ್ನು ಪಡೆದಿದ್ದಾರೆ.












