1,400 ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಲು ಮುಂದಾದ ಅಸ್ಸಾಂ ಸರ್ಕಾರ: ಪ್ರತಿಭಟನೆ

0
507

ಸನ್ಮಾರ್ಗ ವಾರ್ತೆ

ಅಸ್ಸಾಂನ ದುಬ್ರಿ ಜಿಲ್ಲೆಯ 450 ಹೆಕ್ಟೇರ್ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 1400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬವನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಅಸ್ಸಾಂ ಸರಕಾರ ಮುಂದಾಗಿದೆ. ಈ ಪ್ರದೇಶವನ್ನು 3200 ಮೆಘಾವಾಟ್ ಥರ್ಮಲ್ ಪವರ್ ಪ್ಲಾಂಟ್ ನಿರ್ಮಿಸುವುದಕ್ಕಾಗಿ ಸರಕಾರ ಕಂಪನಿಗೆ ಬಿಟ್ಟುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವಾಸಿಸುತ್ತಿರುವ ಮುಸ್ಲಿಮರನ್ನು ತೆರವುಗೊಳಿಸಲು ಅಸ್ಸಾಂ ಸರಕಾರ ನಿರ್ಧರಿಸಿದೆ.

ಈ ತೆರವುಗೊಳಿಸುವಿಕೆಗೆ 10,000 ಕ್ಕಿಂತಲೂ ಅಧಿಕ ಮಂದಿ ಪರಿಣಾಮ ಎದುರಿಸುತ್ತಿದ್ದಾರೆ. ಇವರು ಕಳೆದ ಮೂರು ನಾಲ್ಕು ದಶಕಗಳಿಂದ ಇಲ್ಲಿ ವಾಸಿಸುತ್ತಿರುವವರಾಗಿದ್ದಾರೆ.

ಜುಲೈ ಏಳರಿಂದಲೇ ತೆರವುಗೊಳಿಸುವಿಕೆಯ ಸಿದ್ಧತೆಗಳು ನಡೆದಿವೆ. ಬುಲ್ಟೋಸರ್ ಗಳು ಬಂದಿವೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಮನೆಗಳನ್ನು ದ್ವಂಸ ಗೊಳಿಸಲು ಬುಲ್ಡೋಜರ್ ಪ್ರಾರಂಭಿಸಿದಂತೆಯೇ ನಿವಾಸಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ, ಕಲ್ಲೆಸೆದ್ದಾರೆ ಶಾಸಕ ಅಖಿಲ್ ಗೊಗೋಯ್ ಅವರು ಸಂತ್ರಸ್ತರನ್ನು ಭೇಟಿಯಾಗಿದ್ದಾರೆ ಮತ್ತು ಪೊಲೀಸರು ಅವರನ್ನು ಕಷ್ಟಡಿಗೆ ತೆಗೆದುಕೊಂಡಿದ್ದಾರೆ. ಈ ತೆರವುಗೊಳಿಸುವಿಕೆಯು ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಈ ಸಂತ್ರಸ್ತ ಕುಟುಂಬಕ್ಕೆ 165 ಎಕರೆ ಪ್ರದೇಶದಲ್ಲಿ ಪುನರ್ವಸತಿಯನ್ನು ಕಲ್ಪಿಸಬೇಕು ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.