24 ಗಂಟೆಯೊಳಗೆ 106 ಮಂದಿ ಫೆಲೆಸ್ತೀನಿಯರನ್ನು ಹತ್ಯೆ ಮಾಡಿದ ಇಸ್ರೇಲ್

0
447

ಸನ್ಮಾರ್ಗ ವಾರ್ತೆ

ವೈಟ್ ಹೌಸ್‌ನಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ನಡುವೆ ಗಾಝಾ ಕದನ ವಿರಾಮದ ಕುರಿತಾದ ಚರ್ಚೆ ನಡೆಯುತ್ತಿರುವುದರ ನಡುವೆಯೇ ಗಾಝಾದಲ್ಲಿ ಇಸ್ರೇಲ್ ಮಾರಣಹೋಮವನ್ನು ಮುಂದುವರಿಸಿದೆ. ಕಳೆದ 24 ಗಂಟೆಯ ಒಳಗೆ 106 ಮಂದಿ ಗಾಝಾ ನಿವಾಸಿಗಳನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ.

ರಫಾದ ಆಹಾರ ವಿತರಣಾ ಕೇಂದ್ರದ ಮುಂದೆ ಸೇರಿದ್ದವರ ಮೇಲೆ ಇಸ್ರೇಲಿ ಸೈನಿಕರು ಮನಬಂದಂತೆ ಗುಂಡು ಹಾರಿಸಿ ಈ ಹತ್ಯಾಕಾಂಡ ನಡೆಸಿದ್ದಾರೆ.

ಸಾಮಾನ್ಯ ರಸ್ತೆಗಳನ್ನು ಇಸ್ರೇಲ್ ಸಂಪೂರ್ಣ ತಡೆಗಟ್ಟಿರುವುದರಿಂದ ದೂರ ದೂರದ ಊರಿನಿಂದ ಬಳಸು ದಾರಿಯಲ್ಲಿ ಬಂದ ಈ ಬಡಪಾಯಿಗಳ ವಿರುದ್ಧ ಇಸ್ರೇಲ್ ಸೇನೆ ಈ ಕ್ರೌರ್ಯ ಎಸಗಿದೆ. ಕಳೆದ ಒಂದು ವಾರದಲ್ಲಿ ಆಹಾರ ವಿತರಣಾ ಕೇಂದ್ರದ ಮುಂದೆ ಇಸ್ರೇಲ್ ನರಮೇಧಕ್ಕೆ ಬಲಿಯಾದವರ ಸಂಖ್ಯೆ 770ಕ್ಕೆ ಏರಿದೆ.