ಕಾನೂನು ಬಾಹಿರ ಎಂದು ಆರೋಪ: ಮುಸ್ಲಿಮರೇ ಸೇರಿ ಮಸೀದಿಯನ್ನು ಧ್ವಂಸಗೊಳಿಸಿದರು

0
461

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಚಿಂತಾಮಣಿ ಗಧಿಯ ಗ್ರಾಮದಲ್ಲಿರುವ ಮಸೀದಿಯನ್ನು ಮುಸ್ಲಿಮರೇ ಧ್ವಂಸ ಗೊಳಿಸಲು ಪ್ರಾರಂಭಿಸಿದ್ದಾರೆ. ಈ ಮಸೀದಿಯನ್ನು ಧ್ವಂಸಗೊಳಿಸದಿದ್ದರೆ ನಾವೇ ಧ್ವಂಸಗೊಳಿಸುವುದಾಗಿ ಬಲಪಂಥೀಯ ಗುಂಪುಗಳು ಬೆದರಿಕೆ ಹಾಕಿದ್ದುವು ಮತ್ತು ಪ್ರತಿಭಟನೆ ನಡೆಸುತ್ತಿದ್ದವು. ಈ ಬೆಳವಣಿಗೆಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗಾದಿಯಾ ಮಸೀದಿ ಮತ್ತು ಅದಕ್ಕೆ ತಾಗಿಕೊಂಡಿರುವ ಈದ್ಗವನ್ನು ಸರಕಾರಿ ಭೂಮಿಯಲ್ಲಿ ಕಟ್ಟಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಬಲಪಂಥೀಯ ಸಂಘಟನೆ ಸನಾತನಿಸೇನಾ ದೂರು ಸಲ್ಲಿಸಿದೆ. ಈ ದೂರಿನ ಬಳಿಕ ತಹಸಿಲ್ದಾರರು ಈ ಮಸೀದಿಯನ್ನು ತೆರವುಗೊಳಿಸುವಂತೆ ನೋಟಿಸು ಜಾರಿಗೊಳಿಸಿದ್ದಾರೆ. ಮಸೀದಿಯನ್ನು ತೆರವುಗೊಳಿಸುವುದಕ್ಕೆ ಅಂತಿಮ ನೋಟೀಸ್ ಅನ್ನು ಮಾರ್ಚ್ ತಿಂಗಳಲ್ಲಿ ಮಸೀದಿಯ ಗೋಡೆಗೆ ಅಂಟಿಸಿದ್ದಾರೆ. ಶೀಘ್ರವೇ ಬುಲ್ಟೋಝರ್ ಬರಲಿದ್ದು ಮಸೀದಿಯನ್ನು ಧ್ವ0ಸ ಗೊಳಿಸಲಿದೆ ಎಂದು ಕೂಡ ನೋಟಿಸ್ ನಲ್ಲಿ ಬರೆಯಲಾಗಿತ್ತು.

ಇದೇ ವೇಳೆ ಇಲ್ಲಿನ ಮುಸ್ಲಿಮರು ಜಿಲ್ಲಾಧಿಕಾರಿಗೆ ಮತ್ತು ಅಲಹಾಬಾದ್ ಹೈಕೋರ್ಟಿಗೆ ಮನವಿಯನ್ನು ಮಾಡಿಕೊಂಡಿದ್ದರು. ಇದನ್ನು ಅಧಿಕೃತಗೊಳಿಸಿ ಎಂದು ಕೋರಿಕೊಂಡಿದ್ದರು. ಆದರೆ ಅದಕ್ಕೆ ಬೆಂಬಲ ಸಿಗಲಿಲ್ಲ.

ಇದೇ ವೇಳೆ ಮಸೀದಿ ಕಮಿಟಿಯ ಸದಸ್ಯರು ಮತ್ತು ಸ್ಥಳೀಯರು ಸ್ವಯಂ ಮಸೀದಿಯನ್ನು ಧ್ವ0ಸ ಗೊಳಿಸಲು ಮುಂದಾಗಿದ್ದಾರೆ. ಈ ಮಸೀದಿಯ ಹೆಸರಲ್ಲಿ ದ್ವೇಷವನ್ನು ಹಬ್ಬಿಸುವುದು ಮತ್ತು ಕೋಮು ಸೌಹಾರ್ದವನ್ನು ಕೆಡಿಸುವುದನ್ನು ನಾವು ಬಯಸುತ್ತಿಲ್ಲ, ಆದ್ದರಿಂದ ನಾವೇ ಈ ಮಸೀದಿಯ ಧ್ವಂಸಕ್ಕೆ ಮುಂದಾಗಿದ್ದೇವೆ ಎಂದು ಮಸೀದಿ ಕಮಿಟಿಯ ಸದಸ್ಯರು ಹೇಳಿದ್ದಾರೆ.

ಮಸೀದಿ ಕಮಿಟಿಯ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.