ಮುಂದುವರಿದ ಇಸ್ರೇಲ್ ದಾಳಿ; 24 ಗಂಟೆಗಳಲ್ಲಿ ಮಕ್ಕಳು ಸೇರಿ 82 ಮಂದಿ ಬಲಿ – ನೂರಾರು ಗಾಯ

0
387

ಸನ್ಮಾರ್ಗ ವಾರ್ತೆ

ಗಾಝ: ಇಸ್ರೇಲ್ ತನ್ನ ಸೈನಿಕ ದಾಳಿಗಳನ್ನು ಮುಂದುವರೆಸಿದ್ದು, ಕಳೆದ 24 ಗಂಟೆಗಳಲ್ಲಿ ಗಾಝಾದ ಹಲವೆಡೆ ನಡೆಸಿದ ದಾಳಿಗಳಲ್ಲಿ 82 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದು, 247 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆ ವರದಿ ಮಾಡಿದೆ.

ಆಹಾರ ಸೇವಾ ಕಾರ್ಯಕರ್ತರ ಮೇಲೆಯೂ ದಾಳಿಯು ಮುಂದುವರೆದಿದ್ದು, ಕೇವಲ ಈ ವಲಯದಲ್ಲಿ 9 ಮಂದಿ ಸಾವನ್ನಪ್ಪಿದ್ದು, 78 ಮಂದಿ ಗಾಯಗೊಂಡಿದ್ದಾರೆ. ಮೇ 27ರಿಂದ ಆರಂಭವಾದ ಇಸ್ರೇಲ್ ಲಾಕ್‌ಡೌನ್ ನಂತರ ಈ ವಲಯದಲ್ಲಿ ದಾಳಿಯಿಂದ ಮೃತಪಟ್ಟ ಆಹಾರ ಸೇವಾ ಕಾರ್ಯಕರ್ತರ ಸಂಖ್ಯೆ ಈಗ 782ಕ್ಕೆ ಏರಿದೆ. ಈವರೆಗೆ 5179 ಸೇವಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಇನ್ನೊಂದು ದಾಳಿ ಡೀರ್ ಎಜ್-ಜೋರ್‌ನಲ್ಲಿ ನಡೆದಿದ್ದು, ಇಲ್ಲಿ ಟೆಂಟ್‌ನಲ್ಲಿ ಆಶ್ರಯ ಪಡೆದಿದ್ದ ಫೆಲೆಸ್ಟೀನಿ ಕುಟುಂಬದ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 10 ಮಕ್ಕಳು ಮತ್ತು 3 ಮಹಿಳೆಯರು ಸೇರಿದಂತೆ 15 ಮಂದಿ ಸಾವಿಗೀಡಾಗಿದ್ದಾರೆ.

ಇಸ್ರೇಲ್ ದಾಳಿಗಳು ಗಾಝಾದ ಜನಜೀವನವನ್ನು ತೀವ್ರವಾಗಿ ದುರ್ಭರಗೊಳಿಸಿದ್ದು, ಮಾನವೀಯ ಸಹಾಯ ಕಾರ್ಯಗಳನ್ನೂ ಗಂಭೀರವಾಗಿ ನಾಶ ಪಡಿಸಲಾಗುತ್ತಿದೆ ಎಂದು ಪಾಲೆಸ್ಟೀನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.