ಟ್ರಂಪ್ ಮತ್ತು ಅವರ ಆಡಳಿತದ ವಿರುದ್ಧ ದಾವೆ ಹೂಡಿದ ಮುಹಮ್ಮದ್ ಕಲೀಲ್

0
488

ಸನ್ಮಾರ್ಗ ವಾರ್ತೆ

ಮೊಹಮ್ಮದ್ ಕಲೀಲ್ ಎಂಬ ವಿದ್ಯಾರ್ಥಿ ಹೋರಾಟಗಾರ ಅಮೆರಿಕಾದ ಅಧ್ಯಕ್ಷ ಟ್ರಂಪ್ ವಿರುದ್ಧ 20 ಮಿಲಿಯನ್ ಡಾಲರ್ ಪರಿಹಾರವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರು ಮೂರು ತಿಂಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡಿದ್ದಾರೆ. ಟ್ರಂಪ್ ಸರ್ಕಾರವು ಅನ್ಯಾಯವಾಗಿ ಮತ್ತು ಸುಳ್ಳು ಆರೋಪಿಸಿ ತನ್ನನ್ನು ಜೈಲಿಗಟ್ಟಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಫೆಲೆಸ್ತೀನಿಯರಿಗಾಗಿ ತಾನು ಇನ್ನು ಮುಂದೆಯೂ ಧ್ವನಿ ಎತ್ತುವುದಾಗಿ ಬಿಡುಗಡೆಯ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ತಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬ ಭಾವದಲ್ಲಿ ಟ್ರಂಪ್ ಮತ್ತು ಅವರ ಆಡಳಿತ ಕೂಟ ವರ್ತಿಸಿದೆ . ಆದರೆ ಆಡಳಿತಗಾರರಿಗೂ ಹೊಣೆಗಾರಿಕೆಗಳಿವೆ ಎಂಬುದನ್ನು ನಾನು ಸಲ್ಲಿಸಿದ ಈ ದೂರಿನ ಮೂಲಕ ಸಾಬೀತಾಗಲಿದೆ ಎಂದು ಖಲೀಲ್ ಹೇಳಿದ್ದಾರೆ.

ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಫೆಲಸ್ತೀನಿ ಪರ ಹೋರಾಟಗಳ ವಕ್ತಾರರಾಗಿ ಕಲೀಲ್ ವರ್ತಿಸಿದ್ದರು. ಇದೇ ವೇಳೆ ಇವರನ್ನು ದೇಶದಿಂದ ಗಡಿಪಾರು ಮಾಡುವ ಯೋಜನೆಯನ್ನು ಟ್ರಂಪ್ ಸರಕಾರ ಹಾಕಿಕೊಂಡಿದೆ ಎಂದು ತಿಳಿದುಬಂದಿದೆ.

ಸಿರಿಯಾದಲ್ಲಿ ಹುಟ್ಟಿದ ಇವರ ಹೆತ್ತವರು ಸಿರಿಯಾದವರಾಗಿದ್ದಾರೆ.