ಆಸ್ಟ್ರೇಲಿಯಾ: ಮುಸ್ಲಿಂ ದ್ವೇಷಿ ಪ್ರಕರಣಗಳಲ್ಲಿ ಭಾರಿ ಹೆಚ್ಚಳ

0
524

ಸನ್ಮಾರ್ಗ ವಾರ್ತೆ

2023 ಅಕ್ಟೋಬರ್ 7ರ ಬಳಿಕ ಗಾಝಾದ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ನಂತರ ಆಸ್ಟ್ರೇಲಿಯಾದಲ್ಲಿ ಮುಸ್ಲಿಮರ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರು ಮತ್ತು ಯುವತಿಯರನ್ನು ಗುರಿಯಾಗಿಸಿ ದಾಳಿಗಳು ನಡೆದಿರುವುದಾಗಿ ಆಸ್ಟ್ರೇಲಿಯಾದ ಎಸ್ ಬಿ ಎಸ್ ನ್ಯೂಸ್ ವರದಿ ಮಾಡಿದೆ.

2024 ಜುಲೈಯಲ್ಲಿ ಸ್ಕಾನ್ ಲೋನ್ ಫೌಂಡೇಶನ್ ನಡೆಸಿದ ಸರ್ವೆಯ ಪ್ರಕಾರ ಆಸ್ಟ್ರೇಲಿಯಾದ ಮೂರರಲ್ಲಿ ಒಬ್ಬರಿಗೆ ಮುಸ್ಲಿಮರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಇದೆ. 2023ರ ಸರ್ವೆಗೆ ಹೋಲಿಸಿದರೆ ಮುಸ್ಲಿಮರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಉಳ್ಳವರ ಸಂಖ್ಯೆ ಏಳು ಶೇಕಡ ಜಾಸ್ತಿಯಾಗಿದೆ. ಅಲ್ಲದೆ ಯಹೂದಿಗಳ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯಕ್ಕಿಂತ ಮುಸ್ಲಿಮರ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯವು ಮೂರು ಪಟ್ಟು ಹೆಚ್ಚಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ.

2014ರಿಂದ 2021ಕ್ಕಿಂತ 2021 ರಿಂದ 24ರ ವರೆಗೆ ಮುಸ್ಲಿಂ ವಿರೋಧಿ ಅಭಿಪ್ರಾಯಗಳು ದುಪ್ಪಟ್ಟಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

ಮುಸ್ಲಿಮರ ಬಗೆಗಿನ ನಕಾರಾತ್ಮಕ ಅಭಿಪ್ರಾಯಕ್ಕೆ ರಾಜಕೀಯ ಬೆಳವಣಿಗೆಗಳು ಕಾರಣ ಎಂದು ಇಸ್ಲಾಮಿ ಫೋಬಿಯ ರಿಜಿಸ್ಟರ್ ಆಸ್ಟ್ರೇಲಿಯಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೂರಾ ಅಮಾತ್ ಹೇಳಿದ್ದಾರೆ. ಹಾಗೆಯೇ ಶಿರ ವಸ್ತ್ರ ಧರಿಸಿದ ಮಹಿಳೆಯರ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಿರಂತರ ಅನ್ಯಾಯಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.