ಗಾಝಾ: ಜಮಾಅತೆ ಇಸ್ಲಾಮಿ ಹಿಂದ್ ಸಹಿತ ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳಿಂದ ಜೋರ್ಡನ್ ರಾಯಭಾರಿ ಭೇಟಿ

0
522

ಸನ್ಮಾರ್ಗ ವಾರ್ತೆ

ಜಮಾಅತೆ ಇಸ್ಲಾಮಿ ಹಿಂದ್ ಸಹಿತ ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳ ಒಕ್ಕೂಟವು ಜೋರ್ಡನ್ ರಾಯಭಾರಿ ಯೂಸುಫ್ ಮುಸ್ತಫಾ ಅಲಿ ಅಬ್ದುಲ್ ಗನಿ ಅವರ ಜೊತೆ ದೆಹಲಿಯಲ್ಲಿ ಮಾತುಕತೆ ನಡೆಸಿದೆ. ಗಾಝಾದ ಜನರ ಸಂಕಟವನ್ನು ಕೊನೆಗೊಳಿಸುವುದಕ್ಕೆ ಜೋರ್ಡಾನ್ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಈ ಪ್ರತಿನಿಧಿಗಳು ಕೋರಿದ್ದಾರೆ.

ಗಾಝಾದ ಮೇಲೆ ಇಸ್ರೇಲ್ ನ ಅತಿಕ್ರಮಣವನ್ನು ಕೊನೆಗೊಳಿಸುವುದಕ್ಕೆ, ಫೆಲಸ್ತೀನಿಯರಿಗೆ ಮಾನವೀಯ ನೆರವು ಒದಗುವಂತೆ ಮಾಡುವುದಕ್ಕೆ, ಸ್ವತಂತ್ರ ಮತ್ತು ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರದ ಸ್ಥಾಪನೆ ಯಾಗುವುದಕ್ಕೆ ಜೋರ್ಡಾನ್ ಸರಕಾರ ಮಹತ್ವದ ಪಾತ್ರ ನಿಭಾಯಿಸಬೇಕು ಎಂದು ರಾಯಭಾರಿಗಳ ಮೂಲಕ ಈ ತಂಡವು ಕೋರಿಕೆ ಸಲ್ಲಿಸಿದೆ.

ಈ ಪ್ರತಿನಿಧಿಗಳ ಒಕ್ಕೂಟದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆ ದತುಲ್ಲಾ ಹುಸೇನಿ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ವಕ್ತಾರ ಖಾಸಿಂ ರಸೂಲ್ ಇಲ್ಯಾಸ್, ಜಮ್ ಇಯತ್ತೆ ಉಲಮಾಯೆ ಹಿಂದ್ ರಾಷ್ಟ್ರೀಯ ಕಾರ್ಡಿನೇಟರ್ ಅಝೀಮುಲ್ಲಾ ಖಾಸಿಮಿ, ಎಪಿಸಿಆರ್ ಜನರಲ್ ಸೆಕ್ರೆಟರಿ ಮಲಿಕ್ ಮುಹ್ ತಸಿಮ್ ಖಾನ್, ಮರ್ಕಝಿ ಜಮ್ ಇಯ್ಯತ್ ಅಹ್ ಲೆ ಹದೀಸ್ ಹಿಂದ್ ಸೆಕ್ರೆಟರಿ ಶೀಸ್ ಇದ್ರೀಸ್ ತೈಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಸಿಸ್ಟೆಂಟ್ ಸೆಕ್ರೆಟರಿ ರಿಜ್ವಾನ್ ಅಹ್ಮದ್ ರಫೀಕಿ, ಎಸ್ಐಓ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಫೀಝ್ ಮುಂತಾದವರು ಭಾಗಿಯಾಗಿದ್ದರು.