ಮುಬಾರತ್ ಮೂಲಕ ವಿಚ್ಛೇದನಕ್ಕೆ ಅನುಮತಿ ನೀಡಿದ ಗುಜರಾತ್ ಹೈಕೋರ್ಟ್

0
323

ಸನ್ಮಾರ್ಗ ವಾರ್ತೆ

ಮೌಖಿಕ ತಿಳುವಳಿಕೆಯ ಮೂಲಕ ಮುಸ್ಲಿಮರು ವಿಚ್ಛೇದನ ಪಡಕೊಳ್ಳಬಹುದು, ವಿಚ್ಛೇದನಕ್ಕಾಗಿ ಬರಹದ ಮೂಲಕ ದಾಖಲಾತಿ ನಡೆಯಬೇಕಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ. ಮುಬಾರತ್ ಎಂದು ಈ ಬಗೆಯ ವಿಚ್ಛೇದನ ಕ್ರಮವನ್ನು ಹೇಳಲಾಗುತ್ತಿದ್ದು ಇದಕ್ಕೆ ಕುರ್‌ಅನ್ ಮತ್ತು ಹದೀಸ್ ನಲ್ಲಿ ಆಧಾರ ಇದೆ ಎಂದು ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ವೈ. ಕೋಗ್‌ಜೆ ಮತ್ತು ಎನ್‌.ಎಸ್. ಸಂಜಯ್ ಗೌಡ ಅವರಿದ್ದ ಪೀಠ ಈ ತೀರ್ಪನ್ನು ನೀಡಿದೆ.

ಈ ಮೊದಲು ರಾಜಕೋಟ್‌ನ ಮುಸ್ಲಿಂ ದಂಪತಿ ಮುಬಾರತ್ ಮೂಲಕ ವಿಚ್ಛೇದನ ಪಡಕೊಳ್ಳುವುದಕ್ಕೆ ಅನುಮತಿ ನೀಡಬೇಕು ಎಂದು ಹೇಳಿ ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಸ್ಥಳೀಯ ನ್ಯಾಯಾಲಯ ಒಪ್ಪಿಗೆ ನೀಡಲು ನಿರಾಕರಿಸಿತ್ತು. ಇದನ್ನು ದಂಪತಿ ಹೈ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.