ಸನ್ಮಾರ್ಗ ವಾರ್ತೆ
ಮುಸ್ಲಿಮರು ಸಾರ್ವಜನಿಕವಾಗಿ ಹಬ್ಬ ಆಚರಿಸುವುದಕ್ಕೆ ನಿಷೇಧ ಹೇರಿದ್ದ ಸ್ಪೈನಿನ ಜುಮಿಲ್ಲಾ ನಗರ ಕೌನ್ಸಿಲ್ನ ನಿರ್ಧಾರವನ್ನು ಹಿಂಪಡೆದುಕೊಳ್ಳುವಂತೆ ಸ್ಪೇನ್ ಸರ್ಕಾರ ಆದೇಶ ನೀಡಿದೆ. ಮುಸ್ಲಿಮರು ತಮ್ಮ ಹಬ್ಬವನ್ನು ಮೈದಾನ ಸಹಿತ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಆಚರಿಸಬಾರದು ಎಂದು ಜುಮಿಲ್ಲ ನಗರ ಕೌನ್ಸಿಲ್ ನಿಷೇಧ ಹೇರಿತ್ತು.
ಸ್ಪೈನ್ ಪಾರ್ಲಿಮೆಂಟ್ನಲ್ಲಿ ಜುಮಿಲಾ ನಗರದ ನಿರ್ಧಾರವನ್ನು ಜನಾಂಗೀಯ ಪ್ರೇರಿತ ಎಂದು ಸಂಸದೆ ಎಲ್ಮಾ ಸೈನಸ್ ಕರೆದಿದ್ದರು.
ಮುಸ್ಲಿಮರ ಹಬ್ಬವನ್ನು ನಿಷೇಧಿಸುವ ನಿರ್ಧಾರವನ್ನು ರದ್ದು ಮಾಡುವಂತೆ ಜುಮಿಲ್ಲ ಪಟ್ಟಣ ಪಂಚಾಯತಿಗೆ ಆದೇಶಿಸಿರುವುದಾಗಿ ಸಚಿವೆ ಎಂಜಲ ವಿಕ್ಟರ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ಜುಮಿಲ್ಲಾ ನಗರದಲ್ಲಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದು ಹೆಚ್ಚಿನವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಸ್ಲಿಮರು ಹಬ್ಬವನ್ನು ಕ್ರೀಡಾಂಗಣದಲ್ಲಿ ಹಲವು ವರ್ಷಗಳಿಂದ ಸಂಭ್ರಮಿಸುತ್ತಾ ಬಂದಿದ್ದಾರೆ.
ಕೆಲವು ಸಮಯದ ಹಿಂದೆ ಜುಮಿಲ್ಲ ನಗರದ ಮರ್ಸಿಯ ಪಟ್ಟಣದಲ್ಲಿ ವಲಸಿಗರು ಮತ್ತು ಸ್ಥಳೀಯರ ನಡುವೆ ಘರ್ಷಣೆ ನಡೆದಿತ್ತು. ಆಫ್ರಿಕಾದ ವ್ಯಕ್ತಿ ಓರ್ವ ಸ್ಥಳೀಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ. ಇದನ್ನ ನೆಪವಾಗಿಸಿಕೊಂಡು ಜುಮಿಲ್ಲಾ ನಗರದ ಬಲಪಂಥೀಯ ಗುಂಪುಗಳು ಹಬ್ಬದ ನಿಷೇಧಕ್ಕೆ ಕರೆ ಕೊಟ್ಟಿದ್ದವು.
ಸ್ಟ್ರೈನ್ನ ಕ್ಯಾಥೋಲಿಕ್ ಚರ್ಚ್ ಈ ನಿಷೇಧವನ್ನು ಟೀಕಿಸಿತ್ತು. ಇದು ಧಾರ್ಮಿಕ ಸ್ವಾತಂತ್ರ್ಯ ವಿರೋಧಿ ಎಂದು ಹೇಳಿತ್ತು.












