ದೋಹ, ಜೂ. 19: ಕಿಡ್ನಿ ಬದಲಾವಣೆ ಶಸ್ತ್ರಕ್ರಿಯೆಯಲ್ಲಿ ಕತರ್ ಸಾಧನೆ ಮಾಡಿದೆ. ಹಿರಿಯರ ಕಿಡ್ನಿಯನ್ನು ಮಗುವಿಗೆ ಜೋಡಿಸುವ ಮೂಲಕ ಸಿದ್ರ ಮೆಡಿಸಿನ್ ಹಾಸ್ಪಿಟಲ್ ಸಾಧನೆ ಮೆರೆದಿದೆ. ಐದು ವರ್ಷದ ಮುಹಮ್ಮದ್ ಗೆ ತಾಯಿಯ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು. ಎರಡು ಕಿಡ್ನಿಗಳನ್ನು ಕಳಕೊಂಡಿದ್ದ ಬಾಲಕ ಮುಹಮ್ಮದ್ ಗೆ ತಾಯಿ ರಬಾಬ್ ಅಬ್ದುಸಲಾಂ ಕಿಡ್ನಿ ನೀಡಲು ಮುಂದೆ ಬಂದರು. ಹಿರಿಯ ವ್ಯಕ್ತಿಯ ಕಿಡ್ನಿಯನ್ನು ಮಗುವಿಗೆ ಇರಿಸುವ ದೇಶದ ಮೊದಲ ಶಸ್ತ್ರಕ್ರಿಯೆ ಸಿದ್ರ ಆಸ್ಪತ್ರೆಯಲ್ಲಿ ನಡೆಯಿತು. ಆಸ್ಪತ್ರೆಯ ಹಮದ್ ಮೆಡಿಕಲ್ ಕಾರ್ಪೊರೇಶನ್ನ ತಜ್ಞ ವೈದ್ಯರು ಮೂರು ತಿಂಗಳ ಪರಿಶ್ರಮದಲ್ಲಿ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು.
ಕಳೆದ ಎಪ್ರಿಲ್ ಹದಿನಾರರಂದು ತಾಯಿಯ ಒಂದು ಕಿಡ್ನಿ ತೆಗೆಯಲಾಗಿತ್ತು. ಮೇ 8ಕ್ಕೆ ಪುತ್ರನಿಗೆ ಅದನ್ನು ಕಸಿಮಾಡಲಾಯಿತು. ಮಗು ಸಂಪೂರ್ಣ ಆರೋಗ್ಯದಿಂದಿದೆ ಎಂದು ಸಿದ್ರ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪುತ್ರನಿಗೆ ಮರುಜೀವ ಸಿಕ್ಕಿದ್ದಕ್ಕೆ ಮಗುವಿನ ತಂದೆ ತಾಹಿರ್ ಹಸ್ನೈನ್ ಕತರ್ ಸರಕಾರ ಮತ್ತು ಆಸ್ಪತ್ರೆಯ ಅಧಿಕಾರಿಗಳಿಗೆ ಕೃತಜ್ಞತೆ ಸೂಚಿಸಿದರು. ತನ್ನ ಪತ್ನಿ ಕಿಡ್ನಿ ಕೊಡಲು ಸಿದ್ಧಳಾದಂತೆ ಎಲ್ಲರೂ ಅವಯವ ದಾನಕ್ಕೆ ಸಿದ್ಧರಾಗಬೇಕೆಂದು ಅವರು ಹೇಳಿದರು.












