ಸನ್ಮಾರ್ಗ ವಾರ್ತೆ
ಪಾಕಿಸ್ತಾನದ ಥಾಂಸ ಜಿಲ್ಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಏಡ್ಸ್ ಭಾದಿತರು ಕಾಣಿಸಿಕೊಂಡಿದ್ದಾರೆ. ಮಕ್ಕಳಲ್ಲಿ ಇದು ಅತಿ ಹೆಚ್ಚು ಕಾಣಿಸಿಕೊಂಡಿದೆ. ಅಸುರಕ್ಷಿತ ರಕ್ತದಾನ ಮತ್ತು ಇಂಜೆಕ್ಷನ್ಗಳ ಅತಿಯಾದ ಉಪಯೋಗದಿಂದ ಈ ಏಡ್ಸ್ ರೋಗ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಈ ವರ್ಷದ ಏಪ್ರಿಲ್ ಮತ್ತು ಆಗಸ್ಟ್ ತಿಂಗಳಲ್ಲಿ ವರದಿಯಾದ ಎರಡು ಪ್ರಕರಣಗಳ ಆಧಾರದಲ್ಲಿ 2024 ಡಿಸೆಂಬರ್ನಿಂದ ಈ ಪ್ರದೇಶದಲ್ಲಿ ಬಹುತೇಕ 300 ಏಡ್ಸ್ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಒಂದು ವರ್ಷದಿಂದ 10 ವರ್ಷ ವರೆಗಿನ ಮಕ್ಕಳಲ್ಲಿ ಅತಿ ಹೆಚ್ಚು ಏಡ್ಸ್ ಕಾಣಿಸಿಕೊಂಡಿದೆ.
12 ವಯಸ್ಸಿನ ಕೆಳಗಿನ 127 ಮಕ್ಕಳಿಗೆ ಏಡ್ಸ್ ದೃಢಪಟ್ಟಿದೆ. 2024 ಡಿಸೆಂಬರ್ ನಿಂದ 2025 ಏಪ್ರಿಲ್ ನ ನಡುವೆ 231 ಮಂದಿಗೆ ಏಡ್ಸ್ ಧೃಡಪಟ್ಟಿದೆ. ರೋಗ ದೃಢೀಕರಣಗೊಂಡ 79 ಶೇಕಡ ಮಂದಿಯ ವಯಸ್ಸು ಐದಕ್ಕಿಂತ ಕೆಳಗಿದೆ. ಏಡ್ಸ್ ಪೀಡಿತರ ಸರಾಸರಿ ವಯಸ್ಸು ನಾಲ್ಕು ವರ್ಷ ಐದು ತಿಂಗಳು. ಈ ಕಾರಣದಿಂದ ಈ ಕಾಯಿಲೆ ಹಬ್ಬಲು ಅನೈತಿಕ ಸಂಬಂಧ ಕಾರಣ ಅಲ್ಲ ಇದು ರಕ್ತ ಮತ್ತು ಇಂಜೆಕ್ಷನ್ ಗಳ ಪ್ರಭಾವದಿಂದ ಎಂದು ಗೊತ್ತಾಗಿದೆ.












