ಮುಂಬೈ, ಜೂ. 20: ಭಾರತ ಮೂಲದ ಬ್ರಿಟನ್ನ ನಿವಾಸಿ ಮತ್ತು ಗಾಯಕಿ ತರಣ್ ಕೌರ್ ಧಿಲ್ಲನ್ ಯಾನೆ ಹರ್ದ್ ಕೌರ್ ಅವರು ಆರೆಸ್ಸೆಸ್ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಕಟುವಾಗಿ ಟೀಕಿಸಿದ್ದಾರೆ. ಯೋಗಿಯನ್ನು ಆರೆಂಚ್ ಅತ್ಯಾಚಾರಿ ಎಂದು ಹೇಳಿದ ಕೌರ್ ಆರೆಸ್ಸೆಸ್ ಮುಖ್ಯಸ್ಥ- ಭಯೋತ್ಪಾದಕ ಮತ್ತು ವಂಶೀಯವಾದಿ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬೈ ಭಯೋತ್ಪಾದನಾ ದಾಳಿ ಸಹಿತ ದೇಶದಲ್ಲಿ ನಡೆದ ಎಲ್ಲ ಭಯೋತ್ಪಾದನಾ ದಾಳಿಯ ಹಿಂದೆ ಆರೆಸ್ಸೆಸ್ ಕಾರ್ಯಾಚರಿಸಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ರ ಫೋಟೊ ಮತ್ತು ಎಸ್ಎಂ ಮುಶ್ರಿಫ್ರ ಬರೆದ ಹೆಚ್ಚು ವಿವಾದವಾಗಿದ್ದ ಕರ್ಕರೆಯನ್ನು ಕೊಂದದ್ದು ಯಾರು ಎಂಬ ಪುಸ್ತಕದ ಮುಖಪುಟ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಪುಲ್ವಾಮ, ಮುಂಬೈ ಸಹಿತ ದೇಶದಲ್ಲಿ ನಡೆದ ಎಲ್ಲ ಭಯೋತ್ಪಾದನಾ ದಾಳಿಗೆ ಆರೆಸ್ಸೆಸ್ ಮುಖ್ಯಸ್ಥರು ಹೊಣೆಯಾಗಿದ್ದಾರೆ. ಮಹಾತ್ಮ ಗಾಂಧಿಯನ್ನು ಗೋಡ್ಸೆ ಕೊಂದದ್ದಕ್ಕಾಗಿ ನಿಷೇಧ ಹೇರಲಾಗಿದ್ದ ಸಂಘಟನೆ ಅದು. ನಿಮಗೆ ಇಲ್ಲಿ ಕಾರ್ಯವೆಸಗಲು ಅನುಮತಿಯಿಲ್ಲ. ಬ್ರಾಹ್ಮಣ ಜಾತಿಯ ಮೇಲ್ಮೆಯ ವಿರುದ್ಧ ಹೋರಾಡಿದವರು ಮಹಾತ್ಮಗಾಂಧಿ, ಬುದ್ಧ ಎಂದು ಕೌರ್ ಹೇಳಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಸೂಪರ್ ಹೀರೋ ಆಗಿದ್ದರೂ ತಾನು ಅತ್ಯಾಚಾರಿ ಯೋಗಿ ಎಂದು ಅವರನ್ನು ಕರೆಯುತ್ತೇನೆ. ನಿಮ್ಮ ಸಹೊದರಿಯರು, ತಾಯಂದಿರು, ಮಕ್ಕಳು ಅತ್ಯಾಚಾರಕ್ಕೊಳಗಾದಾಗ ನೀವು ಹೀಗೆಯೇ ಕರೆಯುತ್ತೀರಿ. ಆದರೆ ನಾನು ವೈಯಕ್ತಿಕವಾಗಿ ಆರೆಂಜ್ ಅತ್ಯಾಚಾರಿ ಎಂದು ಹೇಳುತ್ತೇನೆ ಎಂದು ಕೌರ್ ತನ್ನ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.












