ವಾಷಿಂಗ್ಟನ್, ಜೂ. 21: ಅಮೆರಿಕದ ಡ್ರೋನನ್ನು ಗುಂಡಿಟ್ಟು ಕೆಳಗುರುಳಿಸಿದ ಇರಾನ್ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರ೦ಪ್ ಯುದ್ಧಕ್ಕೆ ಆದೇಶ ಹೊರಡಿಸಿ ನಂತರ ಅದನ್ನು ಹಿಂಪಡೆದುಕೊಂಡಿದ್ದಾರೆ ಎಂದು ಅಮೆರಿಕದ ಹಿರಿಯ ಅಡ್ಮಿಸ್ಟ್ರೇಶನ್ ಅಧಿಕಾರಿಗಳನ್ನು ಉದ್ಧರಿಸಿ ವರದಿಯಾಗಿದೆ. ವೈಟ್ ಹೌಸ್ನಲ್ಲಿ ತೀವ್ರ ವಾಗ್ವಾದ ಮತ್ತು ಚರ್ಚೆಗಳ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗಿತ್ತು. ಇರಾನ್ ನ ರಾಡಾರ್ ಮತ್ತು ಮಿಸೈಲ್ ವಾಹಿನಿಗಳನ್ನು ಗುರಿಯಾಗಿಟ್ಟು ಅಮೇರಿಕ ಡ್ರೋನ್ ಹಾರಿಸಿತ್ತು. ಇರಾನ್ ವಿರುದ್ಧ ದಾಳಿಗೆ ಯುದ್ಧ ಹಡಗುಗಳು ಮತ್ತು ವಿಮಾನಗಳು ಸಿದ್ಧವಾಗಿದ್ದರೂ ಮಿಸೈಲ್ ಹಾರಿಸುವ ಮೊದಲು ಹಿಂದೆ ಸರಿಯುವ ಆದೇಶ ಅವುಗಳಿಗೆ ತಲುಪಿದೆ. 130 ಮಿಲಿಯನ್ ಬೆಲೆಬಾಲುವ ಬೇಹುಗಾರಿಕೆ ಡ್ರೋನನ್ನು ಇರಾನ್ ನ ಆಕಾಶ ಗಡಿ ದಾಟಿದ್ದಕ್ಕೆ ಇರಾನಿನ ರೆವೆಲ್ಯೂಶನರಿ ಗಾರ್ಡ್ಗಳು ಹೊಡೆದುರುಳಿಸಿದ್ದಾರೆ.
ಇರಾನ್ನ ವಾಯು ಗಡಿಯನ್ನು ಉಲ್ಲಂಘಿಸಿದ್ದಕ್ಕಾಗಿ ಡ್ರೋನನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್ ಹೇಳಿದೆ. ಆದರೆ ಡ್ರೋನ್ ಅಂತಾರಾಷ್ಟ್ರೀಯ ವಾಯು ಗಡಿಯಲ್ಲಿತ್ತು ಎಂದು ಪೆಂಟಗಾನ್ ಹೇಳಿದೆ. ವಾಯು ಗಡಿಯಲ್ಲಿ ನುಸುಳುವಿಕೆಗೆ ಯತ್ನಿಸಿದರೆ ಸಹಿಸುವುದಿಲ್ಲ ಎಂದು ಇರಾನ್ ವಿದೇಶ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ಡ್ರೋನ್ ಉರುಳಿಸಿದ ಬಳಿಕ ಅಮೆರಿಕ, ಇರಾನ್ ನಡುವಿನ ಸಂಬಂಧ ಇನ್ನಷ್ಟು ಜಟಿಲವಾಗಿದೆ.












