ಗುವಾಹಟಿ, ಜೂ. 21: ಉತ್ತರ ಸಿಕ್ಕಿಂನಲ್ಲಿ ಸಿಲುಕಿದ್ದ 427 ಪ್ರವಾಸಿಗರನ್ನು ನಾಲ್ಕು ದಿವಸಗಳ ಬಳಿಕ ರಕ್ಷಿಸಲಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಕುಸಿದು ಪ್ರಯಾಣ ಮುಂದುವರಿಸಲಾಗದೆ ಪ್ರವಾಸಿಗರು ಚೂಂಗ್ತಾದಲ್ಲಿ ಸಿಲುಕಿಬಿದ್ದಿದ್ದರು. 130 ಕಿಲೋಮೀಟರ್ ದೂರದ ರಾಜಧಾನಿ ಗಾಂಗ್ಟಕ್ಗೆ ಜಿಲ್ಲಾಡಳೀತ ವಾಹನ ವ್ಯವಸ್ಥೆ ಮಾಡಿತು. ಸೇನೆ, ಖಾಸಗಿ ಟ್ಯಾಕ್ಸಿ ಮಾಲಕರು ವಾಹನಗಳನ್ನು ಒದಗಿಸಿದರು.
ಪ್ರವಾಸಿಗರಿಗೆ ಲಘು ಉಪಾಹಾರ ಮತ್ತು ಔಷಧ ವಿತರಿಸಲಾಯಿತು. ಸಿಕ್ಕಿಂ ಟ್ರಾವೆಲ್ ಏಜನ್ಸಿ ಅಸೋಸಿಯೇಶನ್ ವಾಸ್ತವ್ಯ ಸೌಕರ್ಯವನ್ನು ಒದಗಿಸಿತು.












