ಸನ್ಮಾರ್ಗ ವಾರ್ತೆ
ಬಿಹಾರದ ದಾಖ ಕ್ಷೇತ್ರದಲ್ಲಿ 80,000 ಕ್ಕಿಂತಲೂ ಅಧಿಕ ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ತೆರವು ಮಾಡುವ ಪ್ರಯತ್ನ ನಡೆದಿರುವುದು ದ ರಿಪೋರ್ಟರ್ಸ್ ಸಂಸ್ಥೆಯ ಅಧ್ಯಯನದಿಂದ ಬಹಿರಂಗ ಆಗಿದೆ. ಇವರಾರೂ ಭಾರತೀಯರಲ್ಲ ಎಂಬ ಮಾಹಿತಿಯನ್ನು ಬಿಹಾರದ ಬಿಜೆಪಿ ಕಚೇರಿಯ ಲೆಟರ್ ಹೆಡ್ನಲ್ಲಿ ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಇನ್ನೊಂದು ಪ್ರಸ್ತಾಪವನ್ನು ದಾಖ ಬಿಜೆಪಿ ಶಾಸಕನ ಆಪ್ತನ ಹೆಸರಲ್ಲಿ ಚುನಾವಣಾ ಆಯೋಗಕ್ಕೆ ಅಪಿಧವಿ ಸಲ್ಲಿಸಲಾಗಿದೆ.
ಇದು ಅತ್ಯಂತ ಯೋಜನಾ ಬದ್ಧವಾಗಿ ನಡೆಸಿದ ಕೃತ್ಯವಾಗಿದೆ. ಸುಳ್ಳು ಮಾಹಿತಿಯನ್ನು ಕೊಟ್ಟು ಮುಸ್ಲಿಮರನ್ನು ಮತದಾರರ ಪಟ್ಟಿಯಿಂದ ಹೊರ ಹಾಕುವ ಶ್ರಮ ಬಹಳ ಯೋಜನಾ ಬದ್ಧವಾಗಿ ನಡೆದಿದೆ. ಆದರೆ ಹೀಗೆ ದೂರು ಕೊಟ್ಟವರ ವಿರುದ್ಧ ಚುನಾವಣಾ ಆಯೋಗ ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.
ಬಿಜೆಪಿ ಇಂಥದೊಂದು ಪಟ್ಟಿಯನ್ನು ಚುನಾವಣಾ ಮಂಡಳಿಗೆ ಸಲ್ಲಿಸಿದೆ ಮತ್ತು ನಮ್ಮನ್ನು ಮತದಾರರ ಪಟ್ಟಿಯಿಂದ ಹೊರಹಾಕಲು ಅದು ಸಂಚು ನಡೆಸಿದೆ ಅನ್ನುವುದು ಹೆಚ್ಚಿನ ಮುಸ್ಲಿಮರಿಗೆ ಗೊತ್ತಿಲ್ಲ ಎಂದು ಕೂಡ ವರದಿ ತಿಳಿಸಿದೆ.
2020ರ ಅಸೆಂಬ್ಲಿ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. 10000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಆರ್ ಜೆ ಡಿ ಅಭ್ಯರ್ಥಿಯನ್ನು ಸೋಲಿಸಿದ್ದರು.












