ಸನ್ಮಾರ್ಗ ವಾರ್ತೆ
ಮಂಗಳೂರು : ಇಲ್ಲಿನ ಕಂದಕ್ ನಿವಾಸಿ, ಜಮಾಅತೆ ಇಸ್ಲಾಮಿ ಹಿಂದ್ ಹಿರಿಯ ಸದಸ್ಯ ಇಬ್ರಾಹೀಮ್ ಸಿಬ್ಗತುಲ್ಲ (82) ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಕಳೆದ ಒಂದು ದಶಕದಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಇವರು ಸನ್ಮಾರ್ಗ ಮತ್ತು ಅನುಪಮ ಪತ್ರಿಕೆಗಾಗಿ ಶಕ್ತಿ ಮೀರಿ ದುಡಿದವರಾಗಿದ್ದಾರೆ. ತನ್ನ ಪ್ರಾಮಾಣಿಕತೆ ಮತ್ತು ಸಜ್ಜನಿಕೆಗಾಗಿಯೇ ಇವರು ಗುರುತಿಸಿಕೊಂಡಿದ್ದರು. ಸನ್ಮಾರ್ಗದ ವ್ಯವಸ್ಥಾಪಕರಾಗಿದ್ದ ಸಾದುಲ್ಲಾ ಸಾಬ್ ಅವರ ಅಣ್ಣನಾಗಿರುವ ಮತ್ತು ಸನ್ಮಾರ್ಗವನ್ನು ರಾಜ್ಯಾದ್ಯಂತ ಹರಡುವಲ್ಲಿ ಬಹುದೊಡ್ಡ ಪಾತ್ರವನ್ನು ನಿಭಾಯಿಸಿದ್ದ ಹಮೀದುಲ್ಲಾರು ಇವರ ತಮ್ಮನಾಗಿದ್ದಾರೆ. ಕಳೆದ 25 ವರ್ಷಗಳಿಂದ ಇವರು ಜಮಾಅತ್ ನ ಸದಸ್ಯರಾಗಿ ತನ್ನ ಸೇವೆಯನ್ನು ಸಲ್ಲಿಸಿದ್ದಾರೆ.
ಸಿಬ್ಗಗತುಲ್ಲಾ ಅವರು ಪತ್ನಿಯನ್ನೂ, ಅನುಪಮಾ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್ ನ ವ್ಯವಸ್ಥಾಪಕರಾಗಿರುವ ಮುಹಮ್ಮದ್ ಮುಹ್ಸಿನ್, ಇಸ್ಮಿಕ ಸಂಸ್ಥೆಯ ವ್ಯವಸ್ಥಾಪಕರಾದ ಮುನವ್ವರ್ ಸಹಿತ ಏಳು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನೂ ಅಪಾರ ಬಂಧು ಮಿತ್ರಾದಿಗಳನ್ನೂ ಅಗಲಿದ್ದಾರೆ.
ಅಲ್ಲಾಹನು ಮೃತರಿಗೆ ಮಗ್ ಫಿರತ್ ಮತ್ತು ಮರ್ ಹಮತ್ ನೀಡಿ ಅನುಗ್ರಹಿಸಲಿ.












