ಸನ್ಮಾರ್ಗ ವಾರ್ತೆ
ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಆಡಿದ ಮಾತಿಗಾಗಿ ತೆಲಂಗಾಣದ ಶಾಸಕ ಟಿ. ರಾಜಸಿಂಗ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿತ್ತು.
ಬಿಜೆಪಿಯಿಂದ ಆಯ್ಕೆಯಾಗಿದ್ದ ಟಿ ರಾಜ ಸಿಂಗ್ ಆ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ದ್ವೇಷ ಭಾಷಣದ ದೊಡ್ಡ ಇತಿಹಾಸವೇ ಇವರ ಜೊತೆಗಿದೆ. ಮುಸ್ಲಿಮರನ್ನು ವಿರೋಧಿಸುವ ಮತ್ತು ದ್ವೇಷಕ್ಕೆ ಪ್ರಚೋದಿಸುವ ಹಲವು ಹೇಳಿಕೆಗಳನ್ನು ಅವರು ಈ ಹಿಂದೆ ನೀಡಿದ್ದರು. ಇದಕ್ಕಾಗಿ ಅವರ ಮೇಲೆ ಹಲವು ಕೇಸುಗಳು ದಾಖಲಾಗಿವೆ.
ಮುಸ್ಲಿಂ ದ್ವೇಷಿ ಹೇಳಿಕೆಗಾಗಿ 2022 ಆಗಸ್ಟ್ ನಲ್ಲಿ ಇವರನ್ನು ಬಂಧಿಸಲಾಗಿತ್ತು.
ರಾಜ ಸಿಂಗ್ ವಿರುದ್ಧ ಈಗಾಗಲೇ 105 ಕ್ರಿಮಿನಲ್ ಕೇಸುಗಳಿವೆ ಎಂದು ವರದಿಯಾಗಿದೆ. ಇದರಲ್ಲಿ 18 ಕೇಸುಗಳು ಕೋಮು ದ್ವೇಷಕ್ಕೆ ಸಂಬಂಧಿಸಿವೆ. ಈ 105 ಕೇಸುಗಳ ಪೈಕಿ ಹೆಚ್ಚಿನವು ಗಲಬೆ ದ್ವೇಷ ಭಾಷಣ ಇನ್ನೊಂದು ಧರ್ಮದ ಭಾವನೆಗೆ ಧಕ್ಕೆ ಕೊಡುವುದು ಇತ್ಯಾದಿಗಳಿಗೆ ಸಂಬಂಧಿಸಿವೆ. ಲವ್ ಜಿಹಾದಿನ ಬಗ್ಗೆ ಜನಸಂಖ್ಯಾ ಹೆಚ್ಚಳದ ಬಗ್ಗೆ ಮತ್ತು ಇನ್ನಿತರ ವಿಷಯಗಳಲ್ಲಿ ಅವರು ಈ ಹಿಂದೆ ದ್ವೇಷ ಭಾಷಣ ಮಾಡಿದ್ದಾರೆ.












