ಚಂಡೀಗಡ, ಜೂ. 24: ಸಿಖ್ ಧರ್ಮಗ್ರಂಥವನ್ನು ಅಪಮಾನಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿಯನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದ್ದು ಪಂಜಾಬ್ನಲ್ಲಿ ಘರ್ಷಣಾ ಸ್ಥಿತಿ ನಿರ್ಮಾಣವಾಗಿದೆ. 2015ರಲ್ಲಿ ಸಿಖ್ ಧರ್ಮ ಗ್ರಂಥವನ್ನು ಅಪಮಾನಿಸಿದ ಆರೋಪದಲ್ಲಿ ಮೊಹಿಂದರ್ ಪಾಲ್ ಬ್ರಿಟ್ಟು (49) ಜೈಲು ಪಾಲಾಗಿದ್ದನು. ಶನಿವಾರ ಪಟ್ಯಾಲದ ನ್ಯೂ ನಾಭಾ ಜೈಲಿನಲ್ಲಿ ಅವನ ಕೊಲೆಯಾಗಿದೆ. ಸಹ ಕೈದಿಗಳಾದ ಇಬ್ಬರು ಸೇರಿ ಅವನನ್ನು ಕೊಂದು ಹಾಕಿದರೆಂದು ವರದಿಯಾಗಿದೆ.
ಕೈದಿಗಳಾದ ಗುರುಸೇವಕ್ ಸಿಂಗ್, ಮನೀಂದರ್ ಸಿಂಗ್ ಎಂಬವರು ಸೇರಿ ಬ್ರಿಟ್ಟುನನ್ನು ಕೊಂದು ಹಾಕಿದ್ದಾರೆನ್ನಲಾಗಿದ್ದು ಜೈಲು ಸುಪರಿಟೆ೦ಡೆಂಟ್ ಮತ್ತು ಇನ್ನೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕೊಲೆ ಘಟನೆಯ ನಂತರ ಘರ್ಷಣಾ ಸ್ಥಿತಿ ನಿಯಂತ್ರಿಸಲು ಎಲ್ಲರೂ ಸಂಯಮ ವಹಿಸಬೇಕೆಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆಗ್ರಹಿಸಿದ್ದು ಕೊಲೆ ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಬಿಎಸ್ಎಫ್, ತ್ವರಿತ ಕಾರ್ಯಾಚರಣಾ ಪಡೆಯನ್ನು ರಾಜ್ಯದಲ್ಲಿ ವಿನ್ಯಾಸಗೊಳಿಸಲಾಗಿದೆ. ಕೊಲೆಯಾದ ಮೊಹಿಂದರ್ ಪಾಲ್ ಬ್ರಿಟ್ಟು ದೇರ ಸಚ್ಚ ಸೌದ ಬೆಂಬಲಿಗ. 2015ರಲ್ಲಿ ಫರೀದ್ ಕೋಟ್ನಲ್ಲಿ ಸಿಖ್ ಧರ್ಮ ಗ್ರಂಥವಾದ ಗುರು ಗ್ರಂಥ ಸಾಹಿಬ್ನನ್ನು ಅಪಮಾನಿಸಿದ್ದನು. ನಂತರ ಈತನನ್ನು ಬಂದಿಸಲಾಗಿತ್ತು. ನಂತರ ನಡೆದ ಘರ್ಷಣೆಯಲ್ಲಿ ಇಬ್ಬರು ಕೊಲೆಯಾಗಿದ್ದರು.












